15 Great Benefits of Fenugreek in Kannada | ಮೆಂತ್ಯೆಯ ಪ್ರಯೋಜನಗಳು

    Benefits of Fenugreek in Kannada

    ಆರೋಗ್ಯ ವರ್ಧಿಸುವ ಮೆಂತ್ಯೆಯ ಮತ್ತು ಮೆಂತ್ಯೆ ಸೊಪ್ಪಿನ ಪ್ರಯೋಜನಗಳು ಹಲವಾರು. Read further to know health benefits of fenugreek in Kannada.

    ಹಲವು ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದಾಗಿರುವ ಮೆಂತ್ಯೆ ಎಂದರೆ ಎಲ್ಲರಿಗೂ ಗೊತ್ತು. ಇದರಲ್ಲಿನ ಪೋಷಕಾಂಶ, ವಿಟಮಿನ್ ಸಿ, ಪೊಟಾಶಿಯಂ, ಲೈಸಿನ್ ಇನ್ನಿತರ ಅಂಶಗಳು ಇದರ ಗುಣಕ್ಕೆ ಸಾಕ್ಷಿ. ಇದರಿಂದಾಗುವ ಉಪಯೋಗ ತಿಳಿಯಲು ಹೋದರೆ ಅಕ್ಷಯ ಪಾತ್ರೆ. ಇದನ್ನು ದಿನನಿತ್ಯ ಬಳಸಿದರೆ ಉತ್ತಮ ಆರೋಗ್ಯ ಗ್ಯಾರಂಟಿ.

    ಮೆ೦ತ್ಯೆಯನ್ನು ಅಡುಗೆಯಲ್ಲಿ ಹಾಗೂ ಔಷಧೀಯ ಉದ್ದೇಶಗಳಿಗಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಫೆನುಗ್ರೀಕ್ ಎ೦ದು ಕರೆಯಲ್ಪಡುವ ಈ ಮೂಲಿಕೆಯು ಬೆಳೆಯುವ ಒ೦ದು ಸಣ್ಣ ದ್ವಿದಳ ವರ್ಗಕ್ಕೆ ಸೇರಿರುವ ಗಿಡಮೂಲಿಕೆಯಾಗಿದ್ದು, ಈ ಮೂಲಿಕೆಯು fabaceae ಎ೦ದು ಕರೆಯಲ್ಪಡುವ ಸಸ್ಯವರ್ಗಕ್ಕೆ ಸೇರಿದೆ. ಸಾಮಾನ್ಯವಾಗಿ ಈ ಸಸ್ಯವು ಮೆಡಿಟರೇನಿಯನ್ ಭೌಗೋಳಿಕ ವಲಯಗಳಲ್ಲಿ ಕ೦ಡುಬರುತ್ತದೆ.

    Suggested read: Spinach Benefits in Kannada | Vegetables in Kannada 

    How to Soak Methi | ಮೆಂತೆ ನೆನೆಸುವ ವಿಧಾನ

    ಮೆಂತ್ಯೆ ಕಾಳಿನ ನೀರು ತಯಾರಿಸಿಕೊಳ್ಳಲು ಒಂದು ಚಮಚ ಮೆಂತ್ಯೆ ಕಾಳು ತೆಗೆದುಕೊಳ್ಳಿ ಮತ್ತು ಅದನ್ನು ರಾತ್ರಿ ನೀರಿಗೆ ಹಾಕಿ ನೆನೆಸಿಡಿ. ಬೆಳಗ್ಗೆ ನೀವು ಎದ್ದ ಬಳಿಕ ಆ ನೀರನ್ನು ಕುಡಿಯಿರಿ.

    ನೀವು ಖಾಲಿ ಹೊಟ್ಟೆಯಲ್ಲಿ ದಿನನಿತ್ಯವೂ ಮೆಂತ್ಯೆ ಕಾಳಿನ ನೀರು ಕುಡಿದರೆ ಆಗ ಹಲವಾರು ಸಮಸ್ಯೆ ನಿವಾರಣೆ ಮಾಡಬಹುದು. ಒಂದು ಚಮಚ ಮೆಂತ್ಯೆ ಕಾಳನ್ನು ನೀರಿನಲ್ಲಿ ನೆನೆಸಿಡಿ. ಬಿಸಿ ನೀರನ್ನು ನೀವು ಇದಕ್ಕೆ ಬಳಸಬಹುದು. ಮೆಂತ್ಯೆ ಕಾಳಿನ ನೀರಿನಿಂದ ಸಿಗುವ ಲಾಭಗಳ ಬಗ್ಗೆ ನಾವು ಇಲ್ಲಿ ತಿಳಿಯೋಣ.

    Fenugreek in Kannada

    Soaked Fenugreek Seed Benefits | ನೆನೆಸಿಟ್ಟ ಮೆಂತೆ ಕಾಳಿನ ಪ್ರಯೋಜನಗಳು

    ಮೆಂತ್ಯೆಯು ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ಹೊ೦ದಿದೆ. ಮೆಂತ್ಯೆಯು ಸಾಮಾನ್ಯವಾಗಿ ಬೀಜದ ಪುಡಿ, ಮೊಳಕೆಯೊಡೆದಿರುವ ಬೀಜಗಳ, ಹಾಗೂ ಚಹಾಗಳ ರೂಪಗಳಲ್ಲಿ ಕ೦ಡುಬರುತ್ತವೆ. ಅನೇಕ ಆರೋಗ್ಯಕಾರಿ ಉತ್ಪನ್ನಗಳ ಮಾರಾಟ ಮಳಿಗೆಗಳಲ್ಲಿಯೂ ಇದನ್ನು ಖರೀದಿಸಬಹುದು. ಆದರೆ, ನೀವು ದಿನವೊ೦ದಕ್ಕೆ ಎ೦ಟು ಗ್ರಾ೦ ಗಳಿಗಿ೦ತಲೂ ಹೆಚ್ಚಿನ ಪ್ರಮಾಣದಲ್ಲಿ ಮೆಂತ್ಯೆಯನ್ನು ತೆಗೆದುಕೊಳ್ಳದ೦ತೆ ಎಚ್ಚರವಹಿಸಬೇಕಾಗುತ್ತದೆ. ಏಕೆ೦ದರೆ, ಇದಕ್ಕಿ೦ತಲೂ ಹೆಚ್ಚಿನ ಪ್ರಮಾಣದ ಮೆಂತ್ಯೆಯು ಕರುಳುಗಳ ತೊ೦ದರೆಯನ್ನು ಹಾಗೂ ವಾಕರಿಕೆಯ ಅನುಭವವನ್ನು೦ಟು ಮಾಡುತ್ತದೆ.

    1. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡುವುದು

    ಮೆಂತ್ಯೆ ಕಾಳಿನಲ್ಲಿ ಗ್ಯಾಲಕ್ಟೋಮನ್ನನ್ ಎನ್ನುವ ನಾರಿನಾಂಶವಿದೆ. ಇದು ರಕ್ತದಲ್ಲಿನ ಸಕ್ಕರೆ ಹೀರುವಿಕೆಯನ್ನು ತಗ್ಗಿಸುವುದು. ಇದರಿಂದ ಮಧುಮೇಹ ತಡೆಯಲಾಗುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುವುದು. ಮೆಂತ್ಯೆ ಕಾಳಿನ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಆಗ ಚಯಾಪಚಯ ಕ್ರಿಯೆ ಉತ್ತಮವಾಗುವುದು. ಇದನ್ನು ಸೇವಿಸಿದರೆ ಶಾಖ ಉತ್ಪತ್ತಿಯಾಗಿ ತೂಕ ಕಳೆದುಕೊಳ್ಳಲು ಸಹಕಾರಿ ಆಗಿರಲಿದೆ. ಮೆಂತ್ಯೆ ಕಾಳಿನ ನೀರು ಸೇವಿಸಿದರೆ ಅದರಿಂದ ಬಯಕೆ ಕಡಿಮೆ ಮಾಡಬಹುದು. ಇದರಿಂದ ತೂಕ ಇಳಿಸಲು ಸಹಕಾರಿ ಆಗಲಿದೆ.

    2. ಉರಿಯೂತ ಶಮನಕಾರಿ

    ಮೆಂತ್ಯೆಕಾಳಿನ ನೀರು ಆಮ್ಲೀಯ ವಿರೋಧವಾಗಿದೆ. ಇದನ್ನು ನಿತ್ಯವು ಸೆವಿಸಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆಯು ಬಲಗೊಳ್ಳುವುದು ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆ ನಿವಾರಣೆ ಮಾಡಬಹುದು. ಮೆಂತ್ಯೆಕಾಳಿನಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ಹೊಟ್ಟೆಗೆ ಆರಾಮ ನೀಡುವುದು.

    3. ದೇಹದ ಉಷ್ಣತೆ ತಗ್ಗಿಸುವುದು

    ಮೆಂತ್ಯೆಕಾಳು ದೇಹದಲ್ಲಿನ ಉಷ್ಣತೆ ತಗ್ಗಿಸುವುದು. ಇದರಿಂದ ಒಂದು ಚಮಚ ಮೆಂತ್ಯೆಕಾಳನ್ನು ನೀರಿನಲ್ಲಿ ರಾತ್ರಿ ವೇಳೆ ನೆನೆಸಲು ಹಾಕಿ, ಆ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಮೆಂತ್ಯೆಯ ಪೇಸ್ಟ್ ಮಾಡಿ ಅದನ್ನು ತಲೆಗೆ ಹಚ್ಚಿಕೊಳ್ಳಬಹುದು.

    4. ಮಧುಮೇಹಿಗಳಿಗೆ ತುಂಬಾ ಒಳ್ಳೆಯದು

    ಮೆಂತ್ಯೆ ಕಾಳು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ತುಂಬಾ ನಿಧಾನವಾಗಿ ಹೀರಿಕೊಳ್ಳುವಂತೆ ಮಾಡುವುದು ಮಾತ್ರವಲ್ಲದೆ, ಇನ್ಸುಲಿನ್ ಉತ್ತೇಜಿಸುವುದು. ಮಧುಮೇಹ ಮತ್ತು ಮಧುಮೇಹ ಬರುವ ಸಾಧ್ಯತೆ ಇರುವಂತಹ ಜನರು ಮೆಂತ್ಯೆಕಾಳಿನ ಬಿಸಿ ನೀರು ಕುಡಿಯುವುದು ತುಂಬಾ ಒಳ್ಳೆಯದು. ಮೆಂತ್ಯೆ ಕಾಳನ್ನು ಹುಡಿ ಮಾಡಿಟ್ಟುಕೊಂಡು ಅದನ್ನು ಇಡ್ಲಿ ಮತ್ತು ದೋಸೆ ಜತೆಗೆ ಸೇವಿಸಬಹುದು.

    5. ಜೀರ್ಣಕ್ರಿಯೆ ವೃದ್ಧಿಸುವುದು

    ಮೆಂತ್ಯೆಕಾಳು ಗೋಂದು ಹೊಂದಿರುವುದು ಮತ್ತು ಇದನ್ನು ನೀರಿನಲ್ಲಿ ನೆನೆಯಲು ಹಾಕಿದರೆ ಅದು ಗೋಂದು ಆಗುವುದು. ಇದು ಹೊಟ್ಟೆ ಮತ್ತು ಕರುಳಿನಲ್ಲಿ ಪದರ ನಿರ್ಮಾಣ ಮಾಡುವುದು ಮತ್ತು ಶಮನ ನೀಡುವುದು. ಆಮ್ಲೀಯ ಹಿಮ್ಮುಖ ಹರಿವು ಹೊಂದಿರುವಂತಹ ಜನರು ಇದನ್ನು ಸೇವಿಸಿದರೆ ಅದು ತುಂಬಾ ಒಳ್ಳೆಯದು.

    6. ಕಿಡ್ನಿ ಆರೋಗ್ಯಕ್ಕೆ ಉತ್ತಮ

    ಮೆಂತ್ಯೆಕಾಳಿನ ನೀರನ್ನು ಬಿಸಿ ಮಾಡಿ ಕುಡಿದರೆ ಆಗ ಅದು ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಗೆ ಹಾಕುವುದು. ಇದು ಕಿಡ್ನಿಯು ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುವುದು ಮತ್ತು ಕಿಡ್ನಿಯ ಕಲ್ಲಿನ ಸಮಸ್ಯೆ ನಿವಾರಣೆ ಮಾಡುವುದು.

    7. ಸುಂದರ ಚರ್ಮಕ್ಕಾಗಿ

    ಮೆಂತ್ಯೆಕಾಳಿನ ನೀರು ಜೀರ್ಣಕ್ರಿಯೆಗೆ ನೆರವಾಗುವುದು ಮತ್ತು ವಿಷಕಾರಿ ಅಂಶವನ್ನು ಹೊರಗೆ ಹಾಕುವುದು. ಇದು ಕಾಂತಿಯುತ, ಆರೋಗ್ಯಕಾರಿ, ಕಲೆಗಳು ಇಲ್ಲದೆ ಇರುವ ಚರ್ಮವನ್ನು ನಿರ್ಮಿಸುವುದು. ಇದರಿಂದಾಗಿ ನೀವು ಸೌಂದರ್ಯ ಪಡೆಯಲು ಮೆಂತ್ಯೆ ಕಾಳಿನ ನೀರು ಸೇವಿಸಿ.

    8. ಬೊಜ್ಜಿನ ಸಮತೋಲನ: ತೂಕ ಇಳಿಸಿ

    ಎರಡು ಲೋಟ ಬಿಸಿಯಾದ ಮೆಂತ್ಯೆ ಕಾಳಿನ ನೀರು ಕುಡಿದರೆ ಅದರಿಂದ ದೇಹದಲ್ಲಿ ನೀರು ಶೇಖರಣೆ ಕಡಿಮೆ ಆಗುವುದು. ಹೊಟ್ಟೆಯಲ್ಲಿ ಉಬ್ಬರ ಇರದು. ಇದು ಬಯಕೆ ಕಡಿಮೆ ಮಾಡುವುದ. ದಿನದಲ್ಲಿ ಎರಡು ಸಲ ಇದನ್ನು ಕುಡಿಯಬೇಕು ಎಂದು ಆಹಾರತಜ್ಞರು ಹೇಳುವರು.

    9. ಉರಿಯೂತ ಶಮನಕಾರಿ

    ಮೆಂತ್ಯೆಕಾಳಿನಲ್ಲಿ ಇರುವ ಉರಿಯೂತ ಶಮನಕಾರಿ ಗುಣದಿಂದಾಗಿ ಮೆಂತ್ಯೆ ಕಾಳಿನ ನೀರು ಕುಡಿದರೆ ಅದರಿಂದ ಸಂಧಿವಾತ, ದೀರ್ಘಕಾಲಿಕ ಕೆಮ್ಮು, ಬಾಯಿಯ ಹುಣ್ಣು, ಬೊಕ್ಕೆ ಇತ್ಯಾದಿ ನಿವಾರಣೆ ಮಾಡಬಹುದು.

    10. ಹೃದಯ ಬಡಿಯುತ್ತಿರುವಂತೆ ನೋಡಿಕೊಳ್ಳುವುದು

    ಮೆಂತ್ಯೆಕಾಳಿನ ನೀರಿನ ಜತೆಗೆ ಮೆಂತ್ಯೆ ಕಾಳನ್ನು ಜಗಿದು ತಿಂದರೆ ಆಗ ಅದರಲ್ಲಿ ಇರುವಂತಹ ಕೆಲವೊಂದು ಅಂಶಗಳು ಅಪಧಮನಿಗೆ ಕೆಟ್ಟ ಕೊಲೆಸ್ಟ್ರಾಲ್ ನಿಂದ ಆಗುವ ಹಾನಿ ತಪ್ಪಿಸುವುದು.

    ಮೆ೦ತ್ಯೆಯು ಉಸಿರಾಟಕ್ಕೆ ಸ೦ಬ೦ಧಿಸಿದ ತೊ೦ದರೆಗಳನ್ನು ಕಡಿಮೆ ಮಾಡಬಲ್ಲದು. ಜೊತೆಗೆ, ಕಫದ ಉತ್ಪನ್ನವನ್ನೂ ಕೂಡ ಕಡಿಮೆ ಮಾಡಬಲ್ಲದು.

    ಮೆಂತ್ಯೆಯು ಆರೋಗ್ಯಕಾರಿ ಪ್ರಯೋಜನಗಳ ಪೈಕಿ ಅತ್ಯುತ್ತಮವಾದ ಒ೦ದು ಪ್ರಯೋಜನವೆ೦ದರೆ, ಮೆಂತ್ಯೆಯು ರಕ್ತದೊತ್ತಡವನ್ನು ಕಡಿಮೆ ಮಾಡಬಲ್ಲದು. ಆದಾಗ್ಯೂ, ಮೆಂತ್ಯೆ ಹಾಗೂ ರಕ್ತದೊತ್ತಡಗಳ ನಡುವೆ ಇರುವ ಸ೦ಬ೦ಧವನ್ನು ಸಾಬೀತುಪಡಿಸುವ ಅಧ್ಯಯನಗಳ೦ತೂ ನಡೆದಿಲ್ಲ. ಕೆಲವೊ೦ದು ಸ೦ದರ್ಭಗಳಲ್ಲಿ ಮೆಂತ್ಯೆಯು ರಕ್ತದೊತ್ತಡವನ್ನು ಹೆಚ್ಚಿಸಿರುವುದೂ ಸಹ ಕ೦ಡುಬರುತ್ತದೆ.

    11. ಕ್ಯಾನ್ಸರ್ ನ ಚಿಕಿತ್ಸೆಗೆ

    ಅಧ್ಯಯನಗಳು ತೋರಿಸಿಕೊಟ್ಟಿರುವ ಪ್ರಕಾರ, ಮೆ೦ತೆಯ ಇನ್ನಿತರ ಕೆಲವು ಆರೋಗ್ಯಕಾರಿ ಪ್ರಯೋಜನಗಳು ಯಾವುವೆ೦ದರೆ, ಮೆ೦ತೆಯು ಕೆಲವೊ೦ದು ಬಗೆಯ ಕ್ಯಾನ್ಸರ್‌ಗಳ ವಿರುದ್ಧ ರಕ್ಷಣಾತ್ಮಕ ಪರಿಣಾಮವನ್ನು ಹೊ೦ದಿದೆ. ಮೆ೦ತ್ಯೆಯು ಸ್ತನಗಳ ಕ್ಯಾನ್ಸರ್ ಹಾಗೂ ಪ್ರಾಸ್ಟೇಟ್ ಗ್ರ೦ಥಿಯ ಕ್ಯಾನ್ಸರ್‌ಗಳ ವಿರುದ್ಧ ಹೋರಾಡಲು ನೆರವಾಗುತ್ತದೆ.

    12. ಮೊಲೆಹಾಲಿನ ಪ್ರಮಾಣದಲ್ಲಿ ಹೆಚ್ಚಳವಾಗಲು

    ಸಾಕಷ್ಟು ಪ್ರಮಾಣದಲ್ಲಿ ಹಾಲನ್ನುತ್ಪಾದಿಸಲು ಅಸಮರ್ಥರಾದ ನೂತನ ತಾಯ೦ದಿರಿಗೆ ಮೆ೦ತೆಯು ಹೇಳಿಮಾಡಿಸಿದ೦ತಹದ್ದಾಗಿರುತ್ತದೆ. ಮೆ೦ತ್ಯೆಸೊಪ್ಪಿನಲ್ಲಿ diosgenin ಎ೦ಬ ಸ್ಟೆರಾಯ್ಡ್ ಸ೦ಯುಕ್ತವಿದ್ದು, ಇದು ಈಸ್ಟ್ರೋಜೆನ್ ಹಾರ್ಮೋನಿಗೆ ಸಮಾನವಾಗಿದೆ.

    13. ಯಕೃತ್‌ನ ವಿಷನಿವಾರಕವಾಗಿ

    ಮೆಂತ್ಯೆಯ ಆರೋಗ್ಯಕಾರಿ ಪ್ರಯೋಜನಗಳ ಪೈಕಿ ಒ೦ದು ಯಾವುದೆ೦ದರೆ, ಮೆಂತ್ಯೆಯು ಆಲ್ಕೋಹಾಲ್ ನಿ೦ದಾಗಬಹುದಾದ ಯಕೃತ್‌ನ ಹಾನಿಯನ್ನು ತಡೆಗಟ್ಟಬಲ್ಲದು. ಮೆಂತ್ಯೆಯು ಯಕೃತ್‌ನಲ್ಲಿ ಆ೦ಟಿ ಆಕ್ಸಿಡೆ೦ಟ್‌ನ ಕಿಣ್ವಗಳ ಮಟ್ಟವನ್ನು ಹೆಚ್ಚಿಸಬಲ್ಲದು.

    14. ಮಾ೦ಸಖ೦ಡಗಳು ಮತ್ತು ಕೊಬ್ಬಿನ ಅ೦ಗಾ೦ಶಗಳಿಗಾಗಿ

    ಮೆಂತ್ಯೆಕಾಳುಗಳಿಗೆ ಟೆಸ್ಟೋಸ್ಟೆರೋನ್ ಹಾರ್ಮೋನಿನ ರಚನಾತ್ಮಕ ಚಯಾಪಚಯ ಕ್ರಿಯೆಯ ಪರಿಣಾಮವನ್ನು ಅನುಕರಿಸುವ ಸಾಮರ್ಥ್ಯವಿದ್ದು, ಇದು ಕ್ರೀಡಾಪಟುಗಳಿಗೆ ದೇಹದಾರ್ಢ್ಯವನ್ನು ಸಾಧಿಸಲು ನೆರವಾಗುತ್ತದೆ. ಮೆ೦ತೆಯು ಸಪೂರವಾದ ಶರೀರವುಳ್ಳವರಿಗೆ ದಷ್ಟಪುಷ್ಟಗೊಳ್ಳಲು ನೆರವಾಗುತ್ತದೆ ಹಾಗೂ ಕೊಬ್ಬಿನ ಅ೦ಗಾ೦ಶಗಳನ್ನು ಕಡಿಮೆ ಮಾಡುತ್ತದೆ.

    15. ಮಲಬದ್ಧತೆ ನಿವಾರಣೆ

    ಪ್ರತಿಯೊಬ್ಬರೂ ಕೂಡ, ತಮ್ಮ ಜೀವಿತಾವಧಿಯ ಯಾವುದಾದರೊ೦ದು ಘಟ್ಟದಲ್ಲಿ ಎದುರಿಸುವ ಆರೋಗ್ಯಕಾರಿ ಸಮಸ್ಯೆಗಳ ಪೈಕಿ ಮಲಬದ್ಧತೆಯೂ ಕೂಡ ಒ೦ದಾಗಿರುತ್ತದೆ. ಮೆಂತ್ಯೆ ಕಾಳುಗಳು ಮಲೋತ್ಪಾದನೆಯನ್ನು ಹೆಚ್ಚಿಸುವುದರ ಮೂಲಕ, ಮಲವು ಸರಾಗವಾಗಿ ಚಲಿಸುವ೦ತೆ ಮಾಡಿ ತನ್ಮೂಲಕ ವಿರೇಚಕದ೦ತೆ ವರ್ತಿಸುತ್ತದೆ.

    Weightloss from Fenugreen | ತೂಕ ಇಳಿಸಲು ಮೆಂತ್ಯೆಕಾಳು ಬಳಸುವುದು ಹೇಗೆ?

    ದೇಹದ ತೂಕ ಇಳಿಸಿಕೊಳ್ಳಲು ನಿಮಗೆ ನಿಜವಾದ ಆಸಕ್ತಿ ಇದ್ದಲ್ಲಿ ಆಗ ನೀವು ದೈನಂದಿನ ಆಹಾರ ಕ್ರಮದಲ್ಲಿ ಮೆಂತ್ಯೆಕಾಳು ಬಳಸಿಕೊಳ್ಳಬಹುದು. ಇದನ್ನು ಹಲವಾರು ವಿಧಾನದಿಂದ ಬಳಸಿಕೊಳ್ಳಬಹುದು. ಮೆಂತ್ಯೆಕಾಳು ಮತ್ತು ಮೆಂತ್ಯೆ ಸೊಪ್ಪನ್ನು ನಿಮ್ಮ ಆಹಾರ ಕ್ರಮದಲ್ಲಿ ಬಳಸಬಹುದು.

    ಮೆಂತ್ಯೆಕಾಳನ್ನು ಹಾಗೆ ಅಥವಾ ಹುಡಿ ಮಾಡಿಕೊಂಡು ಬೇರೆ ಬೇರೆ ತಿಂಡಿಗಳಿಗೆ ಹಾಕಿ ಸೇವಿಸಬಹುದು. ಮೆಂತ್ಯೆ ಹುಡಿಯಿಂದ ಆರೋಗ್ಯಕಾರಿ ಚಾ ಮಾಡಬಹುದು. ಬಿಸಿ ಮೆಂತ್ಯೆಕಾಳಿನ ನೀರು ಕುಡಿದರೆ ಅದರಿಂದ ತೂಕ ಇಳಿಸಬಹುದು. ಇದು ಸರಳ ಮತ್ತು ಬೇಗನೆ ತಯಾರಿಸಿಕೊಳ್ಳಬಹುದು.

    1. ಸ್ವಲ್ಪ ಮೆಂತ್ಯೆ ಕಾಳನ್ನು ಹುರಿಯಿರಿ.
    2. ಮಿಕ್ಸಿಗೆ ಹಾಕಿ ಇದನ್ನು ಸರಿಯಾಗಿ ಹುಡಿ ಮಾಡಿ
    3. ಒಂದು ಚಮಚ ಮೆಂತ್ಯೆಕಾಳಿನ ಹುಡಿಯನ್ನು ಬಿಸಿ ನೀರಿಗೆ ಹಾಕಿ ಮತ್ತು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

    ಒಂದು ತಿಂಗಳಲ್ಲಿ ನಿಮಗೆ ಉತ್ತಮ ಫಲಿತಾಂಶ ಕಂಡುಬರುವುದು.

    Who Should Not Take Fenugreek | ಎಚ್ಚರಿಕೆ ಕ್ರಮಗಳು

    ಮೆಂತ್ಯೆ ಕಾಳು ಸುರಕ್ಷಿತ ಹಾಗೂ ಇದನ್ನು ಹಲವಾರು ವಿಧದಿಂದ ಆರೋಗ್ಯಕಾರಿ ಯಾಗಿ ಬಳಿಸಿಕೊಳ್ಳಲಾಗುತ್ತದೆ. ಆದರೆ ಗರ್ಭಧಾರಣೆ ವೇಳೆ ನೀವು ಇದನ್ನು ಬಳಸಬಾರದು. ಇದರಿಂದ ಗರ್ಭಪಾತವಾಗಬಹುದು. ಇದು ಮಹಿಳೆಯರ ಸಂತಾನೋತ್ಪತ್ತಿ ವ್ಯವಸ್ಥೆ ಮೇಲೆ ತೀವ್ರ ಪರಿಣಾಮ ಬೀರುವುದು.

    ಈ ಮೇಲಿನ ಸಲಹೆಗಳು ಕೇವಲ ಶೈಕ್ಷಣಿಕ ಉದ್ದೇಶದಿಂದ ಮಾತ್ರ ಮತ್ತು ಇದನ್ನು ವೈದ್ಯಕೀಯ ಸಲಹೆ ಎಂದು ಪರಿಗಣಿಸಬಾರದು.

    Leave a Reply

    Your email address will not be published. Required fields are marked *