ಗಾದೆ ಮಾತುಗಳು | 2500+ Gadegalu in Kannada Language Script

Gadegalu in Kannada Language Script

Collection of thousands of Gadegalu in Kannada language script, sourced from various online and offline print media. Download the PDF for complete list of all the Kannada proverbs.

ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಗಾದೆಮಾತುಗಳನ್ನು ಸಾಮಾನ್ಯವಾಗಿ ಲೋಕೋಕ್ತಿ, ನಾಣ್ಣುಡಿ, ಹಿತನುಡಿ ಎಂದು ಕೂಡ ಕರೆಯುತ್ತಾರೆ.

Suggested Read: Kannada Proverbs with English Meanings

Collection of Gadegalu in Kannada

1 » ಅರ್ಧ ಕಲಿತವನ ಆಬ್ಬರ ಹೆಚ್ಚು.

2 » ಅಲಗಿನ ಗಾಯಕ್ಕಿಂತ ಗಲಗಿನ ಗಾಯ ಹೆಚ್ಚು

3 » ಅಲಲಾ ಅನ್ನೊ ಅಳ್ಳಿ-ಮರ ನಂಬಬಹುದು, ಮೆತ್ತಗಿರೊ ಕಳ್ಳಿ-ಗಿಡ ನಂಬಲಾಗದು

4 » ಅಲಾ ಬಲಾ ಪಾಪಿ ತಲೀ ಮ್ಯಾಲೆ

5 » ಅಲಾ ಬಲಾ ಪಾಪಿ ತಲೀ ಮ್ಯಾಲೆ ಸಿಡಿಲು ಬಡಿದರೆ ಅಂಗೈಲಿ ಹಿಡಿದ ಕೊಡೆ ಕಾಪಾಡಿತೇ

6 » ಅಲ್ಪ ವಿದ್ಯಾ ಮಹಾಗರ್ವಿ

7 » ಅಲ್ಪ ವಿದ್ಯೆ ಬಲು ಗರ್ವ

8 » ಅಲ್ಪನಿಗೆ ಐಶ್ವರ್ಯ ಬಂದರೆ ಅರ್ದರಾತ್ರಿಲೀ ಕೊಡೆ ಹಿಡಿದ ಹಾಗೆ

9 » ಅಲ್ಪರ ಸ೦ಘ ಅಭಿಮಾನ ಭ೦ಗ.

10 » ಅಲ್ಲದ ಕನಸು ಕಂಡರೆ ಎದ್ದು ಕುಂಡ್ರು.

11 » ಅಲ್ಲದವನ ಒಡನಾಟ ಮೊಳಕೈಗೆ ಕಲ್ಲು ಬಡಿದಂತೆ

12 » ಅಲ್ಲುಂಟೆ, ಇಲ್ಲುಂಟೆ, ಕಲ್ಲಲ್ಲುಂಟೆ, ಶಿವದಾನ.

13 » ಅವರವರ ತಲೆಗೆ ಅವರವರದೇ ಕೈ

14 » ಅವರು ಚಾಪೆ ಕೆಳಗೆ ತೂರಿದರೆ ನೀನು ರಂಗೋಲಿ ಕೆಳಗೆ ತೂರು

15 » ಅಶ್ವಥ ಸುತ್ತಿದರೆ ಮಕ್ಕಳಾಗುತ್ತೆ ಅ೦ದ್ರೆ ಸುತ್ತು ಸುತ್ತಿಗೂ ಹೊಟ್ಟೆ ಮುಟ್ಟಿ ನೋಡಿಕೊ೦ಡಳ೦ತೆ.

16 » ಅಶ್ವಿನೀ ಸಸ್ಯನಾಶಿನೀ.

17 » ಅಷ್ಟು ಕಂಡ್ಯ ಅಮಾಸೆ ಕಂಡ್ಯ ; ಹೊಟ್ಟೆ ನೋವಲ್ಲಿ ಕಂಡ್ಯ ಹಾಲು ಅನ್ನವ

18 » ಅಹಂಕಾರ ಇದ್ದ ಮನುಷ್ಯ ಏನನ್ನೂ ಸಾಧಿಸಲಾರ.

19 » ಅಹಂಕಾರಕ್ಕೆ ಉದಾಸೀನವೇ ಮಟ್ಟು.

20 » ಅಳಿದೂರಿಗೆ ಉಳಿದವನೇ ಗೌಡ

21 » ಅಳಿಯ ಅಲ್ಲ, ಮಗಳ ಗಂಡ

22 » ಅಳಿಯ ಮನೆ ತೊಳಿಯ

23 » ಅಳಿಯನ ಕುರುಡು ಬೆಳಗಾದರೆ ಗೊತ್ತಾಗತ್ತೆ

24 » ಅಳಿಯನಿಗೆ ದೀಪಾವಳಿ ಮಾವನಿಗೆ ಕೋಪಾವಳಿ.

25 » ಅಳಿಲ ಸೇವೆ, ಮಳಲ ಭಕ್ತಿ

26 » ಅಳಿಲು ಏರಿದರೆ ಅರಳಿಮರ ಅಲ್ಲಾಡೀತೆ ?

27 » ಅಳಿವುದೇ ಕಾಯ ಉಳಿವುದೇ ಕೀರ್ತಿ

28 » ಅಳೀಮಯ್ಯ ನಾಚ್ಕಂಡ್ ನಾಚ್ಕಂಡು ನಾಲ್ಕು ಮುದ್ದೆ ತಿಂದ್ನಂತೆ, ಸೇರಲ್ಲ ಸೇರಲ್ಲ ಅಂತ ಸೇರಕ್ಕಿ ತಿಂದ್ನಂತೆ.

29 » ಅಳೋ … ಮೇಲೆ ಗಳು ಬಿತ್ತು

30 » ಆಕಳ ಹೊಟ್ಟೆಯಲ್ಲಿ ಅಚ್ಚೇರು ಬ೦ಗಾರ.

31 » ಆಕಳಿದ್ದವನಿಗೆ ವ್ಯಾಕುಲವಿಲ್ಲ.

32 » ಆಕಳಿದ್ದವನಿಗೆ ವ್ಯಾಕುಲವಿಲ್ಲ. ಅಕ್ಕಿ ತಿ೦ದವರಿಗೆ ಅನ್ನಿಲ್ಲ,

33 » ಆಕಳಿಲ್ಲದವ ಬೆಳೆಸು ಮಾಡ್ಯಾನ, ಆಕಳಿದ್ದವ ಮಕ್ಕಳ ಸಾಕ್ಯಾನ.

34 » ಆಕಳು ಕಪ್ಪಾದರೂ ಹಾಲು ಕಪ್ಪೆ ?

35 » ಆಕಳು ಕಪ್ಪಾದರೆ ಹಾಲು ಕಪ್ಪೆ.

36 » ಆಕಳು ಕಪ್ಪಾದ್ರೆ ಹಾಲು ಕಪ್ಪೇನು

37 » ಆಕಳು ದಾನಕ್ಕೆ ಕೊಟ್ರೆ, ಹಲ್ಲು ಹಿಡಿದು ನೊಡಿದ್ರಂತೆ.

38 » ಆಕಾಶ ನೋಡೋಕೆ ನೂಕಾಟವೇಕೆ?

39 » ಆಕಾಶ ಹರಿದು ಬೀಳುವಾಗ ಕೈ ಅಡ್ಡ ಹಿಡಿಯಬಹುದೇ ?

40 » ಆಕಾಶಕ್ಕೆ ಏಣಿ ಹಾಕಿದ ಹಾಗೆ

41 » ಆಕೆಗೆ ಬುದ್ಧಿ ಹೇಳಕ್ಕೆ ಆತನ್ನ ಕರೆಸಿದರೆ, ಆತ ಹೆಂಡ್ತಿನ ಬಿಟ್ಟು ಆರು ವರ್ಷ ಆಗಿತ್ತಂತೆ.

42 » ಆಗ ಬಾ ಈಗ ಬಾ ಹೋಗಿ ಬಾ ಅನ್ನದೆ ಕೊಡುವ ತ್ಯಾಗವಾಗು

43 » ಆಗ-ಭೋಗ ಸೂಳೆ ಪಾಲು , ಗೂರಲು ಉಬ್ಬಸ ಹೆಂಡತಿ ಪಾಲು.

44 » ಆಗರಕ್ಕೆ ಹೋಗಿ ನನ್ನ ಗಂಡ ಗೂಬೆ ತಂದ

45 » ಆಗುವ (ಅಡುವ) ವರೆಗಿದ್ದು ಆರುವ ವರೆಗೆ ಇರಲಾರರೇ

46 » ಆಗುವ ವರೆಗಿದ್ದು ಆರುವ ವರೆಗೆ ಇರಲಾರರೇ

47 » ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ

48 » ಆಗೋದೆಲ್ಲಾ ಒಳ್ಳೇದಕ್ಕೆ

49 » ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳು ಜಾಸ್ತಿ

50 » ಆಟ ಕೆಟ್ಟರೆ ದೀವಟಿಗೆಯವನ ಸುತ್ತ

ಕನ್ನಡ ನಾಣ್ಣುಡಿ | Kannada Idioms

51 » ಇಲ್ಲದ ಕಾಲಕ್ಕೆ ಕಲ್ಲೆದೆ ಬೇಕು

52 » ಇಲ್ಲದ ಬದುಕು ಮಾಡಿ ಇಲಿಗೆ ಚಣ್ಣ ಹೊಲಿಸಿದರು

53 » ಇಲ್ಲು ಪೋಗಂಡ ಅಲ್ಲು ಪೋಗಂಡ

54 » ಇಷ್ಟನ್ನು ಕಂಡೆಯಾ ಕೃಷ್ಣಂಭಟ್ಟಾ ಅಂದರೆ, ಮುಪ್ಪಿನ ಕಾಲಕ್ಕೆ ಮೂರು ಜನ ಹೆಂಡಿರು

55 » ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ.

56 » ಈರಣ್ಣನ ಮುಂದೆ ಬಸ್ಸಣ್ಣ ಕುಂತಂತೆ

57 » ಈರುಳ್ಳಿ, ಬೆಳ್ಳುಳ್ಳಿಯನ್ನು ತಿನ್ನು, ರೋಗವನ್ನು ದೂರವಿಡು.

58 » ಈಸಿ ನೋಡು , ಇದ್ದು ಜೈಸಿ ನೋಡು

59 » ಉ.. ಕುಡಿದರೂ ತನ್ನಿಚ್ಚೇಯಿಂದ ಇರಬೇಕು

60 » ಉ೦ಡೂ ಹೋದ, ಕೊ೦ಡೂ ಹೋದ.

61 » ಉಂಡ ಮನೆ ಜಂತೆ ಎಣಿಸಬಾರದು,

62 » ಉಂಡದ್ದು ಊಟ ಆಗಲಿಲ್ಲ, ಕೊಂಡದ್ದು ಕೂಟ ಆಗಲಿಲ್ಲ

63 » ಉಂಡದ್ದೇ ಉಗಾದಿ , ಮಿಂದದ್ದೇ ದೀವಳಿಗೆ , ಹೊಟ್ಟೆಗಿಲ್ಲದ್ದೇ ಏಕಾದಶಿ.

64 » ಉಂಡದ್ದೇ ಉಗಾದಿ ; ಮಿಂದದ್ದೇ ದೀವಳಿ

65 » ಉಂಡರೆ ಉಬ್ಬಸ , ಹಸಿದಿದ್ದರೆ ಸಂಕಟ(ನಾಜೂಕು ದೇಹಸ್ಥಿತಿ)

66 » ಉಂಡರೆ ಉಬ್ಬಸ, ಹಸಿದರೆ ಸಂಕಟ .

67 » ಉಂಡಿದ್ದು ಹೊಟ್ಟೆಗಾಗಿ, ಮಾಡಿದ್ದು ಬಟ್ಟೆಗಾಗಿ.

68 » ಉಂಡೂ ಹೋದ; ಕೊಂಡೂ ಹೋದ

69 » ಉಂಬಾಗ ಉಡುವಾಗ ಊರೆಲ್ಲ ನೆಂಟರು

70 » ಉಂಬುವ ಜಂಗಮ ಬಂದರೆ ನಡೆಯೆಂಬರು, ಉಣ್ಣದ ಲಿಂಗಕ್ಕೆ ಬೋನ ಹಿಡಿಯೆಂಬರು

71 » ಉಂಬೋಕೆ ಉಡೋಕೆ ಅಣ್ಣಪ್ಪ ಕೆಲಸಕ್ಕಷ್ಟೇ ಇಲ್ಲಪ್ಪ

72 » ಉಕ್ಕಿದರೆ ಸಾರಲ್ಲ ; ಸೊಕ್ಕಿದರೆ ಹೆಣ್ಣಲ್ಲ.

73 » ಉಗಮವಾಗದಿರಲಿ ಹಿಂಸೆ, ಹೆಚ್ಚಿಗೆಯಾಗದಿರಲಿ ಆಸೆ.

74 » ಉಗಿದರೆ ತುಪ್ಪ ಕೆಡುತ್ತದೆ, ನುಂಗಿದರೆ ಗಂಟಲು ಕೆಡುತ್ತದೆ

75 » ಉಗುರಿನಲ್ಲಿ ಹೋಗೋ ಚಿಗುರಿಗೆ ಕೊಡಲಿ ಏಕೆ ?

76 » ಉಗುಳಿ ಉಗುಳಿ ರೋಗ, ಬೊಗಳಿ ಬೊಗಳಿ ರಾಗ.

77 » ಉಚ್ಚೆ ಕುಡಿದರೂ ತನ್ನಿಚ್ಚೇಲಿರಬೇಕು

78 » ಓಡಿದವನಿಗೆ ಓಣಿ ಕಾಣಲಿಲ್ಲ, ಹಾಡಿದವನಿಗೆ ಹಾದಿ ಕಾಣಲಿಲ್ಲ.

79 » ಓಡ್ಹೋಗುವನ ಚಡ್ಡಿ ಹರಕಂಡಷ್ಟೆ ಲಾಭ.

80 » ಓತಿಕ್ಯಾತಕ್ಕೆ ಬೇಲಿ ಗೂಟ ಸಾಕ್ಷಿ

81 » ಓದಿ ಓದಿ ಮರುಳಾದ ಕೂಚ೦ಭಟ್ಟ.

82 » ಓದಿ ಓದಿ ಮರುಳಾದ ಕೂಚು ಭಟ್ಟ; ಓದದೆ ಅನ್ನ ಕೊಟ್ಟ ನಮ್ಮ ರೈತ

83 » ಓದಿ ಬರೆಯೋ ಕಾಲದಲ್ಲಿ ಆಡಿ ಮಣ್ಣು ಹುಯ್ಕೊಂಡರು

84 » ಓದಿದ ಓದೆಲ್ಲ ಮೇದ ಕಬ್ಬಿನ ಹಿಪ್ಪೆ, ಓದಿದರ ಅರಿವು ಮೇದ ಕಬ್ಬಿನ ರಸ

85 » ಓದಿದರ ಅರಿವು ಮೇದ ಕಬ್ಬಿನ ರಸ

86 » ಓದುವಾಗ ಓದು, ಆಡುವಾಗ ಆಡು.

87 » ಓದೋದು ಕಾಶಿ ಖಂಡ, ತಿನ್ನೋದು ಮಶಿ ಕೆಂಡ

88 » ಓಲೆ ಆಸೆಗೆ ಬೆಕ್ಕು ಮೂಗುತಿ ಕಳಕೊಂಡಿತು

89 » ಕ೦ಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ತಿ.

90 » ಕ೦ಡವರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ.

91 » ಕ೦ಡವರ ಮನೇಲಿ ನೋಡು ನನ್ನ ಕೈ ಧಾರಾಳಾವ!

92 » ಕ೦ತೆಗೆ ತಕ್ಕ ಬೊ೦ತೆ.

93 » ಕಂಕುಳಲ್ಲಿ ದೊಣ್ಣೆ; ಕೈಯಲ್ಲಿ ಶರಣಾರ್ಥಿ

94 » ಕಂಕುಳಲ್ಲಿ ಮಗು ಇಟ್ಟುಕೊಂಡು ಊರೆಲ್ಲ ಹುಡುಕಿದರಂತೆ

95 » ಕಂಗಾಲನ ಮನೀಗೆ ಕಂಗಾಲ ಹೋದರೆ ಗಂಗಾಳ ನೆಕ್ಕು ಅಂತಂತೆ

96 » ಕಂಗಾಲಾದರೂ ಹಂಗಾಳಾಗಬಾರದು

97 » ಕಂಚು ಕಡೆಯಲ್ಲ, ಹಂಚು ದ್ರವ್ಯವಲ್ಲ.

98 » ಕಂಡ ಕಳ್ಳ ಜೀವ ಸಹಿತ ಬಿಡ

99 » ಕಂಡ ಮನೆಗೆ ಕಳ್ಳ ಬಂದ , ಉಂಡ ಮನೆಗೆ ನೆಂಟ ಬಂದ

100 » ಕಂಡದ್ದನ್ನು ಕಂಡಹಾಗೆ ಹೇಳಿದರೆ ಕೆಂಡದಂಥಾ ಕೋಪವಂತೆ

101 » ಕಂಡದ್ದು ಕಾಣೆ ಉತ್ತಮ ಕಂಡದ್ದು ಕಂಡೆ ಮಧ್ಯಮ, ಕಾಣದ್ದು ಕಂಡೆ ಅಧಮ

102 » ಕಂಡವರ ಕಂಡು ಕೈಕೊಂಡ ಕೆಲಸ ಕೆಂಡವಾಯ್ತು

103 » ಕಂಡವರ ಕಂಡು ಕೈಕೊಂಡ ಧರ್ಮ ದಂಗು ಬಡಿಸಿತು

104 » ಕಂಡವರ ಮಕ್ಕಳನ್ನು ಬಾವಿಯಲ್ಲಿ ದೂಡಿ ಆಳ ನೋಡಿದ ಹಾಗೆ

105 » ಕಂಡೋರ ಆಸ್ತಿಗೆ ನೀನೇ ಧಣಿ

106 » ಕಂಡೋರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ

107 » ಕಂಡೋರ ಮನೆ ರೊಟ್ಟಿಗೆ ಗಿಣ್ಣು ಹಾಲು ಕಾಯಿಸಿದರಂತೆ

108 » ಕಂತೆಗೆ ತಕ್ಕ ಬೊಂತೆ

109 » ಕಚ್ಚುವ ನಾಯಿ ಬೊಗಳದು ಬೊಗಳುವ ನಾಯಿ ಕಚ್ಚದು

110 » ಕಚ್ಚೋ ನಾಯಿ ಬೊಗಳುವುದಿಲ್ಲ

111 » ಕಜ್ಜಿ ಕೆರೆದಷ್ಟು ಹಿತ, ಚಾಕೂ ಮಸೆದಷ್ಟೂ ಹರಿತ.

112 » ಕಜ್ಜಿ ಹೋದರೂ ಕಡಿತ ಹೋಗಲಿಲ್ಲ

113 » ಕಟ್ಟಲಿಲ್ಲ ಬಿಚ್ಚಲಿಲ್ಲ ಹಿ೦ಡಿಕೊಳ್ಳೋಕೆ ಹೊತ್ತಾಯ್ತು ಅ೦ದಳು.

114 » ಕಟ್ಟಿಕೊಂಡವಳು ಕಡೇ ತನಕ; ಇಟ್ಟುಕೊಂಡವಳು ಇರೋ ತನಕ

115 » ಕಟ್ಟಿದ ಕೆರೆಗೆ ಕೋಡಿ ತಪ್ಪಲ್ಲ, ಹುಟ್ಟಿದ ಮನೆಗೆ ಬೇರೆ ತಪ್ಪಲ್ಲ

116 » ಕಟ್ಟಿದ ಕೆರೆಗೆ ಕೋಡಿ ತಪ್ಪಲ್ಲ, ಹುಟ್ಟಿದ ಮನೆಗೆ ಬೇರೆ(ಪಾಲಗುವುದು) ತಪ್ಪಲ್ಲ

117 » ಕಟ್ಟಿದ ಗೂಟ , ಹಾಕಿದ ಹಲ್ಲು.

118 » ಕಟ್ಟಿದ ಗೂಟ , ಹಾಕಿದ ಹಲ್ಲು. ಉಂಡರೆ ಉಬ್ಬಸ, ಹಸಿದರೆ ಸಂಕಟ .

119 » ಕಟ್ಟೆ ಹಾಕಿ ಅನ್ನ ಉಣ್ಣು

120 » ಕಡಗ ನೋಡಲಿ ಅ೦ತ ಗುಡಿಸಲು ಸುಟ್ಕೊ೦ಡ ಹಾಗೆ.

121 » ಕಡಲಲ್ಲಿ ಪುಟಿದ ತೆರೆ ಕಡಲಲ್ಲೇ ಕರಗಿ ಹೋಯ್ತು

122 » ಕಡಲೆ ಕಾಯೋಕೆ ಕಾಗೆ ಕಾವಲು ಹಾಕಿದಂತೆ

123 » ಕಡಲೆ ತಿಂದು ಕೈತೊಳೆದ ಹಾಗೆ.

124 » ಕಡಲೆಗೆ ಮುಂದು ಕಡಿವಾಣಕ್ಕೆ ಹಿಂದು.

125 » ಕಡು ಕೋಪ ಬಂದಾಗ ತಡಕೊಂಡವನೇ ಜಾಣ

126 » ಕಡ್ಡೀನ ಗುಡ್ಡ ಮಾಡು

127 » ಕಣ ಕಾಯಬಹುದು, ಹೆಣ ಕಾಯಾಕೆ (ಬೇಸರದಿಂದ ಹೊತ್ತು ಕಳೆಯಲಿಕ್ಕೆ) ಆಗೊದಿಲ್ಲ

128 » ಕಣ್ಣರಿಯದಿದ್ದರೂ ಕರುಳರಿಯುತ್ತದೆ

129 » ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು

130 » ಕಣ್ಣಿಗೂ ಮೂಗಿಗೂ ಮೂರು ಗಾವುದ.

131 » ಕಣ್ಣಿಗೆ ಒಪ್ಪವಿಲ್ಲದ ಹೆಣ್ಣು ಸಪ್ಪಗೆ ಕಂಡಳು

132 » ಗೆದ್ದವ ಸತ್ತ ಸೋತವ ಸತ್ತ

133 » ಗೆದ್ದೆತ್ತಿನ ಬಾಲ ಹಿಡಿದ ಹಾಗೆ

134 » ಗೆಳೆತನದಲ್ಲಿ ಮೋಸಮಾಡಬೇಡ.

135 » ಗೋರ್ಕಲ್ಲ ಮೇಲೆ ನೀರು ಸುರಿದ೦ತೆ.

136 » ಗೋವಿಂದ ಭಟ್ಟ ಬಾವೀಲಿ ಬಿದ್ದ ಇದ್ದವರು ಇದ್ದ ಹಾಗೆ

137 » ಗೌರಿ ಹಬ್ಬಕ್ಕೆ ಬಂದ ಗತಿಗೆಟ್ಟ ಅಳಿಯ

138 » ಗೌರಿ ಹಬ್ಬಕ್ಕೆ ಬಂದ ಗತಿಗೆಟ್ಟ ಅಳಿಯ ಜೀನ ಗಳಿಸಿದ ; ಜಾಣ ತಿಂದ

139 » ಗ್ರಾಮ ಶಾ೦ತಿಗೆ ತಳವಾರ ತಲೆ ಬೋಳಿಸಿಕೊ೦ಡನ೦ತೆ.

140 » ಗ್ರಾಮ ಶಾ೦ತಿಗೆ ತಳವಾರತಲೆ ಬೋಳಿಸಿಕೊ೦ಡನ೦ತೆ.

ಕನ್ನಡ ಲೋಕೋಕ್ತಿ | Kannada Wisdoms

141 » ಘಟಾ (ದೇಹ ) ಇದ್ದರೆ ಮಠಾ ಕಟ್ಟಿಸಬಹುದು.

142 » ಕಟ್ಟೆ ಹಾಕಿ ಅನ್ನ ಉಣ್ಣು

143 » ಚ೦ಡಾಲ ದೇವರಿಗೆ ಚಪ್ಪಲಿ ಪೂಜೆ

144 » ಕಣ್ಣು ಕುರುಡಾದರೆ ಬಾಯಿ ಕುರುಡೇ?

145 » ಚಂಡಾಲ ದೇವರಿಗೆ ಹೆಂಡ ಕುಡಿಯೋ ಪೂಜಾರಿ.

146 » ಚಂದ ನೋಡಿ ತಂದ್ರಂತೆ, ಚಾಳಿ ನೋಡಿ ಬಿಟ್ರಂತೆ.

147 » ಚಂದಕ್ಕೆ ನಾಮ ಇಕ್ಕಿಸ್ಕೊಳ್ಳೋಕೆ ಮೇಲ್‍ಕ್ವಾಟೆಗೆ ಹೋದ.

148 » ಚಂದವಿದ್ದಲ್ಲಿ ಮಂದತ್ವ ಇರಬಾರದು

149 » ಚಂದುಳ್ಳಿಯೋರೆಲ್ಲ ನನ್ನೇ ನೋಡ್ತಾರೆ ಮತ್ತೊಸಿ ಉಯ್ಯತ್ತೆ ಕೈಯೆಣ್ಣೆಯ ಅಂದ್ಲು.

150 » ಚಂಬು ಚರಿಗೆಗೆ ದರಿದ್ರವಾದರೂ ಹಂಚು ಹುಡಿಗೆ ದರಿದ್ರವಿಲ್ಲ

151 » ಚಕ್ಕಂದದವನಿಗೆ ತಕ್ಕ ಫಲ ಸಿಕ್ಕುವುದು

152 » ಚಚ್ಚಚ್ಚೀ ನಿನ್ನ ಚುಚ್ಚೋರು ಯಾರು ಅನ್ನೋವತ್ಗೆ ಕರಿಕಂಬ್ಳೋರು ಕಾಗಿನ ದೊಡ್ಡೋರು ಇಳ್ಳೊತ್ತಿನಲ್ಲೆ ಬಂದು ಇಳ್ಳೊತ್ತಿನಲ್ಲೆ ಹೋಗೋರು ಅಂದ್ಲಂತೆ.

153 » ಚಟ್ಟಿದಿನ ಬಿಟ್ಟಿಗೂ ಹೋಗಬೇಡ

154 » ಚನ್ನಾಗಿದ್ದರೆ ನಂಟರು, ಕೆಟ್ಟರೆ ಸ್ನೇಹಿತರು

155 » ಚಪ್ಪರಕ್ಕೆ ಗತಿಯಿಲ್ಲದವ ಉಪ್ಪರಿಗೆಯನಪೇಕ್ಷಿಸಿದ

156 » ಚಮ್ಮಾರ ದೇವರಿಗೆ ಚಪ್ಪಲಿ ಪೂಜೆ.

157 » ಚರಪು ಕಾಯ್ತ ಇದ್ದುದಕ್ಕೆ ಚಪ್ಪಲಿಯೇ ಮಾಯವಾಯ್ತು.

158 » ಚರ್ಮ ತೊಳೆದರೆ ಕರ್ಮ ಹೋದೀತೆ ತಪ್ಪೀತೆ?

159 » ಚರ್ಮ ಸುಕ್ಕಾದ್ರೆ ಮುಪ್ಪು, ಕರ್ಮ ಮುಕ್ಕಾದ್ರೆ ಮುಕ್ತಿ

160 » ಚರ್ಮ ಹೋದರೂ ಪರವಾಗಿಲ್ಲ, ಕಾಸು ಹೋಗಬಾರದು ಎಂದಂತೆ.

161 » ಚಲವಾದಿಯ ಸಂಗಡ ಹಟವಾದಿ ಸೇರಿದ ಹಾಗೆ

162 » ಚಳಿ ಆಗುವ ಹಾಗೆ ಗಂಡನೂ ಆಗುವುದಿಲ್ಲ ಮಕ್ಕಳು ಆಗುವುದಿಲ್ಲ.

163 » ಚಳಿಗಾಲಕ್ಕಿಂತ ಮಳೆಗಾಲ ವಾಸಿ

164 » ಚಳಿಗಿಲ್ಲದ ಕಂಬಳಿ ಮೆಳೇ ಮೇಲೆ ಬಿದ್ದರೇನು ಮುಳ್ಳಿನ ಮೇಲೆ ಬಿದ್ದರೇನು

165 » ಚಾಜ್‍ಗಾರನೆಡ್ತಿ ಸೌದ್‍ಗಳ್ಳೆ, ಮನ್‍ಗಾರನೆಡ್ತಿ ಮನೆಗಳ್ಳೆ, ಮನೇಲಿ ರಾಗಿಲ್ದೆ ಮನೆಗವ್ಳೆ.

166 » ಚಾಡಿಕೋರನಿಗೆ ಊರೆಲ್ಲ ನೆಂಟರು.

167 » ಚಾಣ ಸಣ್ಣದಾದ್ರೂ ಚಪ್ಪಡಿ ಪಾಳಿಸ್ತದೆ.

168 » ಚಾತುರ್ಯ ಬಲ್ಲವನಿಗೆ ಚಾಚೂ ಚಿಂತಿಲ್ಲ.

169 » ಚಾಪೆ ಇರುವಷ್ಟಕ್ಕೆ ಕಾಲು ನೀಡಬೇಕು

170 » ಚಾಪೆ ಕೆಳಗೆ ಒಬ್ಬ ತೂರಿದರೆ ಇನ್ನೊಬ್ಬ ರಂಗೋಲಿ ಕೆಳಗೆ ತೂರಿದ

171 » ಚಾಪೆ ಕೆಳಗೆ ತೂರಿದರೆ ರಂಗೋಲಿ ಕೆಳಗೆ ತೂರು.

172 » ಚಿ೦ತೆ ಇಲ್ಲದವನಿಗೆ ಸ೦ತೆಯಲ್ಲೂ ನಿದ್ದೆ.

173 » ಚಿಂತೆ ಮಾಡಿದರೆ ಸಂತೆ ಸಾಗೀತೆ?

174 » ಚಿಂತೆಯವ ಚಿಂತೆಗೆ ಅತ್ತರೆ ಕೆಂಚ ತನ್ನ ಗುದಿಗೆಗೆ (=ದಡಿ, ಬಡಿಗೆ) ಅತ್ತ

175 » ಚಿಂದಿಯಾದರೂ ದೊಂದಿಗೆ (= ಪಂಜು) ಆಗುತ್ತದೆ.

176 » ಚಿಕ್ಕ ಬಾಯಲ್ಲಿ ದೊಡ್ಡ ಮಾತು.

177 » ಚಿಕ್ಕ ಮಡಿಕೆ ಚೊಕ್ಕ ಬೋಜನ

178 » ಚಿಕ್ಕ ಮೀನು ದೊಡ್ಡ ಮೀನು ನುಂಗಿತಂತೆ

179 » ಚಿಕ್ಕ ಮೆಣಸಿಗೆ ಕಾರ ಹೆಚ್ಚು

180 » ಚಿಕ್ಕಪ್ಪ ತಾನೂ ಇಕ್ಕ ಬಿಕ್ಷೆ ಬೇಡಲೀಸ

181 » ಚಿಕ್ಕಪ್ಪನಾದರೆ ಮನೆಗೆ ಬಂದು ಕಾಲು ಹಿಡಿದೇನು ಅಪರಾಧಕ್ಕೆ ದೋತ್ರಾ ಕೊಡಬೇಕು

182 » ಚಿಕ್ಕವ್ವ ಚಿಕ್ಕವ್ವ ಮರಿಬಾಡ್ನೆಸ್ರು: ತಿರುಗ್ ನೋಡುದ್ರೆ ಚೊಳ್ ನೀರು.

183 » ಚಿಗರೆಲೆ ಹಾಕ್‍ಬೇಕು ಕಳಿಯಡ್ಕೆ ಮೆಲ್‍ಬೇಕು ಸಿರ್‌ಸ್‌ದಾರ‍್ನ ಕೂಡ್‍ಬೇಕು ಸೀರಂಗ್ ಪಟ್ನ ಸೇರ್ ಬೇಕು.

184 » ಚಿಗಳಿ ತಿಂದೋಳು ಚಿಗತುಕೊಂಡ್ಲು ಬಿಸ್ಕತ್ ತಿಂದೋಳು ಬಳ್ಳಕೊಂಡ್ಲು.

185 » ಚಿತ್ತಕ್ಕೆ ನಾನಾ ಕವಲು ಸತ್ಯಕ್ಕೆ ಒಂದೇ ಮಡಿಲು.

186 » ಚಿತ್ತದ ಕಳವಳ ನಿಲ್ಲಿಸಿದವರೇ ಉತ್ತಮರು

187 » ಚಿತ್ತವಿಲ್ಲದವಳ ಒಡಗೂಟ

188 » ಚಿತ್ತವಿಲ್ಲದವಳ ಒಡಗೂಟ ನಾಯ್ ಹೆಣಾನ ಹತ್ತಿ ತಿನ್ನುವಂತೆ

189 » ಚಿತ್ತಾ ಮಳೆ ವಿಚಿತ್ರ ಬೆಳೆ!

190 » ಚಿತ್ತಾರದ ಅಂದವನ್ನು ಮಸಿ ನುಂಗಿತು

191 » ಚಿನ್ನ ತಿನ್ನಬೇಕಾದ್ರೆ ಮೇಣದಂತಾ ಹಲ್ಲು ಬೇಕು.

192 » ಚಿನ್ನಕ್ಕೂ ಕಬ್ಬಿಣಕ್ಕೂ ಹೆಚ್ಚು ಕಡಿಮೆ ಇಲ್ಲವೇ?

193 » ಚಿನ್ನದ ಕಠಾರಿಯಂತ ಹೊಟ್ಟೆ ತಿವಿದುಕೊಳ್ಳಬಹುದೇ?

194 » ಚಿನ್ನದ ಚೂರಿ ಎಂದು ಕುತ್ತಿಗೆ ಕುಯಿಸಿಕೊಳ್ಳಬಹುದೇ

195 » ಚಿನ್ನದ ತಲೆಯಾದರು ಒಡೆಯಲಿಕ್ಕೆ ಕಬ್ಬಿಣವೇ

196 » ಚಿನ್ನದ ಸೂಜಿ ಅಂತ ಕಣ್ಣು ಚುಚ್ಚಿಕೊಂಡಾರೆ?

197 » ಚಿನ್ನದ ಸೂಜೀಂತ ಕಣ್ಣು ಚುಚ್ಚಿಕೊಳ್ಳುವುದಕ್ಕೆ ಆಗುತ್ತದೆಯೇ?

198 » ಚಿನ್ನದ ಹರಿವಾಣವಾದರೂ ಮಣ್ಣಿನ ಗೋಡೆಗೆ ಒರಗಬೇಕು

199 » ಚಿನ್ನದಂಥ ಮಕ್ಕಳು ಹೆಣ್ಣಾದ್ರೇನು ಗಂಡಾದ್ರೇನು.

200 » ಚಿನ್ನಿದ್ದೋರ ತೊನ್ನು ಮುಚ್ತದೆ.

201 » ಚಿನ್ನಿವಾರನ ಮನೇ ನಾಯಿಯಾದರೆ ನಾಣ್ಯದ ನೋಟಾ ಬಲ್ಲುದೇ

202 » ಚೀಕ್ರ ಗುಡ್ಲಿಗೆ ಬೆಂಕಿ ಎಟ್ಟಿದಂಗೆ.

203 » ಚೀಟಿ ಪಾಟಿ ಪಡಿಕಾಳಿಗೆ ಸಾಟಿಯೇ?

204 » ಚೀಲಿ ಮಕ್ಕಳು ಒಲೆ ಮುಂದೆ, ಚಿನಾಲಿ ಮಕ್ಕಳು ಊರ ಮುಂದೆ.

205 » ಚೂರಿ ಹದ ಆದರೂ ಗಿಡ ಕಡಿಯಲಾರದು

206 » ಚೆಂದಕ್ಕೆ ಚೆನ್ನವೀರಿ ಅಂದೊತ್ತಿಗೆ ಕಂಡಕಂಡವರೆಲ್ಲ ಹಲ್‍ಗಿರೀರಿ ಅಂದ್ಲಂತೆ.

207 » ಚೆಂದಕ್ಕೆ ನನ್ನ ಗಂಡ ಚೆನವೀರಿ ಅಂದ್ರೆ ಅಂಗೆ ನನ್ನ ಜೀವ ಅರದೋಯ್ತು.

208 » ಚೆಂದುಳ್ಳಿ ಹೆಣ್ಣಿಗೆ ಓಡವ್ಯಾಕೆ, ಹೊಸ ರಾಗಿ ಹಿಟ್ಟಿಗೆ ಎಸರ‍್ಯಾಕೆ?

209 » ಚೆಲ್‍ಮುಂಡೆ ಗಂಡನ ಮದ್ವೆಗೋದ್ಲು.

210 » ಚೆಲ್ಲಿದ ಹಾಲಿಗೆ ಅತ್ತು ಪ್ರಯೋಜನವಿಲ್ಲ

211 » ಚೆಲ್ಲಿದ ಹಾಲಿಗೆ, ಒಡೆದ ಕನ್ನಡಿಗೆ ಎ೦ದೂ ಅಳಬೇಡ.

212 » ಚೆಲ್ಲಿಲ್ಲಿ ಮುಕ್ಕ ಎಲ್ಲಿದ್ದರೇನು ಮಾಡಿದ ರಾಗೀಲಿ ಕಲ್ಲಿದ್ದರೇನು.

213 » ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ

214 » ಚೇಳಿಗೆ ಪಾರುಪತ್ಯ ಕೊಟ್ಟರೆ ಮನೆಯವರಿಗೆಲ್ಲಾ ಮುಟ್ಟಿಸಿತಂತೆ.

215 » ಚೇಳಿಗೆ ಪಾರುಪತ್ಯಾ ಕೊಟ್ತರೆ ಜಾವಕ್ಕೆ ಒಂದು ಸಾರಿ ಮುಟ್ಟಿಸಿತು

216 » ಚೇಳಿಗೆ ಮುತ್ತು ಕೊಟ್ಟ ಹಾಗೆ

217 » ಚೇಳಿಗೆ ಮುತ್ತು ಕೊಟ್ಟಂಗೆ ಚೆಲ್ಲು ಮುಕ್ಕನ ಸಂಗ.

218 » ತಾನು ಸಾಯುವ ತನಕ ತನ್ನನ್ನು ಜೋಪಾನ ಮಾಡಿದರೆ ತತ್ತಿಯಷ್ಟು ಬ೦ಗಾರ ಕೊಟ್ಟೇನು ಅನ್ನುತ್ತ೦ತೆ ಕೋಳಿ.

219 » ತಾನು ಹೋದರೆ ಮಜ್ಜಿಗೆ ಇಲ್ಲ ಮೊಸರಿಗೆ ಚೀಟು

220 » ತಾನು ಹೋದರೆ ಮಜ್ಜಿಗೆ ಇಲ್ಲ ಹೇಳಿ ಕಳಿಸಿದರೆ ಮೊಸರು ಕೊಟ್ಟಾರೆ

221 » ತಾನುಂಟೋ? ಮೂರು ಲೋಕವುಂಟೋ?

222 » ತಾನೂ ಕುಡಿಯ ಕುಡಿಯಲೀಸ

223 » ತಾನೂ ತಿನ್ನ, ಪರರಿಗೂ ಕೊಡ.

224 » ತಾನೊಂದೆಣಿಸಿದರೆ ದೈವವೊಂದೆಣಿಸಿತು

225 » ತಾನೊಲಿದ ಮಂಕು ಮಾಣಿಕ್ಯ

226 » ತಾಪತ್ರಯದವನಿಗೆ ತಾಪೆ ಚಾಪೆ ಯಾಕೆ

227 » ತಾಮ್ರದ ಕಾಸು ತಾಯಿ ಮಕ್ಕಳನ್ನು ಬೇರೆ ಮಾಡ್‌ತಂತೆ

228 » ತಾಮ್ರದ ನಾಣ್ಯ ತಾಯಿ ಮಕ್ಕಳನ್ನ ಕೆಡಿಸ್ತು

229 » ತಾಯಂತೆ ಕರು ನಾಯಂತೆ ಬಾಲ

230 » ತಾಯಂತೆ ಮಕ್ಕಳು ನೂಲಂತೆ ಸ್ಯಾಲೆ

231 » ತಾಯಿ ಒಂದಾದರೂ ಬಾಯಿ ಬೇರೆ

232 » ತಾಯಿ ಕಂಡರೆ ತಲೆ ನೋವು

233 » ತಾಯಿ ಕಲಿಸಿದ ಊಟ ತಂದೆ ಕಲಿಸಿದ ಬುದ್ಧಿ

234 » ತಾಯಿ ನೋಡಿ ಮಗಳ ತರಬೇಕು. ಹಾಲು ನೋಡಿ ಎಮ್ಮೆ ತರಬೇಕು.

235 » ತಾಯಿ ಬೇಕು ಇಲ್ಲವೆ ಬಾಯಿ ಬೇಕು

236 » ತಾಯಿ ಮಾಡಿದ ಹೊಟ್ಟೆ ;ಊರು ಮಾಡಿದ ಕೊಳಗ

237 » ತಾಯಿ ಮಾರಿಯಾದರೆ ತರಳನು ಎಲ್ಲಿ ಹೋದಾನು

238 » ತಾಯಿಗಿಂತ ಬಂಧುವಿಲ್ಲ; ಉಪ್ಪಿಗಿಂತ ರುಚಿಯಿಲ್ಲ

239 » ತಾಯಿಗೆ ಕಂಡರೆ ತಲೆ ನೋವು

240 » ತಾಯಿಗೆ ಕುಲವಿದ್ದರಷ್ಟೇ ಮಗಳಿಗೂ ಕುಲ

241 » ತಾಯಿಗೆ ಸೇರದ್ದು ನಾಯಿಗೂ ಸೇರದು

242 » ತಾಯಿದ್ದರೆ ತವರು ಮನೆ ನೀರಿದ್ದರೆ ಕೆರೆ ಬಾವಿ

243 » ತಾಯಿನ್ನ ನೋಡಿ ಮಗಳನ್ನ ತಕ್ಕೋ ಹಾಲನ್ನ ನೋಡಿ ಎಮ್ಮೇನ್ನ ತಕ್ಕೋ

244 » ತಾಯಿಯ ಪ್ರೀತಿ ಸುಖವಾದದ್ದು, ತಂದೆಯ ಪ್ರೀತಿ ಮಧುರವಾದದ್ದು.

245 » ದೈವದ ಸೊಲ್ಲು ಹರಟುವಾತ ಭವದೊಳಗೆ ತೇಲಾಡುತಿದ್ದ

246 » ದೊಂಬರಾಟ ಆಡಬಹುದು ಮಕ್ಕಳಾಟ ಆಡೊಕ್ಕಾಗಲ್ಲ.

247 » ದೊಡ್ಡ ಗೌಡನ ಮನೇಲಿ ದೊಡ್ಡ ಗುಡಾಣ ಎತ್ತಿದರೆ ಏನೂ ಇಲ್ಲ.

248 » ದೊಡ್ಡವರು ಹೇಳಿದ ಹಾಗೆ ಮಾಡು; ಮಾಡಿದ ಹಾಗೆ ಮಾಡಬೇಡ

249 » ಧರ್ಮಕ್ಕೆ ಕೊಟ್ಟ ಆಕಳ ಹಲ್ಲು ಎಣಿಸಿದರು

250 » ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮಣ ಹಾಕಿದರ೦ತೆ.

251 » ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮೊಳ ಹಾಕಿದರು

252 » ಧರ್ಮದ ಹಾದಿ ತಿಳಿದವನಿಗೆ ಓದು ವಾದಗಳೇಕೆ

253 » ಧೂಳಿ ಧೂಪವಾದೀತೆ, ಮಾಳಿಗೆ ಸ್ವರ್ಗವಾದೀತೆ?

254 » ಧೈರ್ಯವಿದ್ದವನಿಗೆ ದೈವವೂ ಅನುಕೂಲ.

255 » ನಕ್ಕು ನುಡಿದವರು ಕಡೆಗೆ ಅಡವಿಯಲಿಕ್ಕಿ ಬರುವರು

256 » ನಗುವ ಹೆಂಗಸು, ಅಳುವ ಗಂಡಸು ಇಬ್ಬರನ್ನೂ ನಂಬಬಾರದು

ಕನ್ನಡ ಜನಪ್ರಿಯ ಗಾದೆಗಳು | Kannada Proverbs

257 » ನಗುವೇ ಆರೋಗ್ಯದ ಗುಟ್ಟು.

258 » ನಗೋ ಗಂಡಸನ್ನೂ ಅಳೋ ಹೆಂಗಸನ್ನೂ ನಂಬಬೇಡ

259 » ನಚ್ಚುವುದು ಬೇರೆ ಹೆಣ್ಣು ಒಬ್ಬನ ಮೆಚ್ಚುವುದು ಬೇರೆ

260 » ನಡತೆ ಕಲಿಯೋದು ಏರುಬಂಡೆ ನಡತೆ ಕೆಡೋದು ಜಾರುಬಂಡೆ

261 » ನಡೆದಷ್ಟು ನೆಲ, ಪಡೆದಷ್ಟು ಫಲ.

262 » ನಡೆವರ್ ಎಡವದೇ ಕುಳಿತವರ್ ಎಡವುವರೇ

263 » ನದೀನೇ ನೋಡದೆ ಇರೋನು ಸಮುದ್ರ ವರ್ಣನೆ ಮಾಡಿದ ಹಾಗೆ

264 » ನನಗೆ ನಿನಗೆ ಹಿತ ಇಲ್ಲ, ನಿನ್ನ ಬಿಟ್ಟು ನನಗೆ ಗತಿ ಇಲ್ಲ ಎಂದಂತೆ.

265 » ನನ್ನ ಮಗ ಎಂಟು ವರ್ಷಕ್ಕೆ ದಂಟು ಎಂದ

266 » ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೇ ಮೇಲೆ ಬಿತ್ತು

267 » ನಮಾಜು ಮಾಡಲು ಹೋಗಿ ಮಸೀದಿ ಕೆಡವಿಕೊಂಡ ಹಾಗೆ

268 » ನಮ್ಮ ಕಣ್ಣು ನಮಗೆ ಕೆಡಿಸಿತು

269 » ನಮ್ಮ ದೇವರ ಸತ್ಯ ನಮಗೆ ಗೊತ್ತು.

270 » ನಮ್ಮ ಮನೆ ರಾಗಿ ಕಲ್ಲಾಡಿದರೆ ನಾಡೆಲ್ಲಾ ನೆಂಟರು

271 » ನಮ್ಮಬುದ್ಧಿ ಪರರ ಕೈಯಲ್ಲಿದ್ದಂತೆ.

272 » ಮುಸುಕಿನೊಳಗೆ ಗುದ್ದಿಸಿಕೊಂಡಂತೆ.

273 » ಪರರೊಡವೆಯ ಬಯಸಬಾರದು.

274 » ಪರಿಚಿತರ ಮರೆಯಬೇಡ, ಅಪರಿಚಿತರ ನಂಬಬೇಡ.

275 » ಪರಿಸರ ಮಾಲಿನ್ಯ ವಿನಾಶಕ್ಕೆ ಕಾರಣ.

276 » ಪಾಂಡವರು ಪಗಡೆಯಾಡಿ ಕೆಟ್ಟರು ; ಹೆಣ್ಣುಮಕ್ಕಳು ಕವಡೆಯಾಡಿ ಕೆಟ್ಟರು

277 » ಪಾತ್ರವರಿತು ಜಗದ ಜಾತ್ರೆಗೆ ಸಲ್ಲಬೇಕು

278 » ಪಾದಕ್ಕೆ ತಕ್ಕಂತೆ ಚಪ್ಪಲಿ ತಗೊ, ಬಾಗಿಲಿನೆತ್ತರಕ್ಕೆ ತಕ್ಕಂತೆ ಬಗ್ಗಿ ನಡಿ.

279 » ಪಾಪ ಅಂದ್ರೆ ಕರ್ಮ ಬರ್ತದೆ

280 » ಪಾಪ ಅನ್ನೋದಕ್ಕೆ ಕೋಪವೇ ನೆಲೆಗಟ್ಟು

281 » ಪಾಪ ಪ್ರಕಟ ಪುಣ್ಯ ಗೋಪ್ಯ.

282 » ಪಾಪಕ್ಕೆ ಹೆದರು, ತಾಪಕ್ಕೆ ಹೆದರದಿರು.

283 » ಪಾಪಿ ಚಿರಾಯು

284 » ಪಾಪಿ ಚುನಾವಣೆಗೆ ನಿ೦ತರೆ ಮೂರೇ ಓಟು.

285 » ಪಾಪಿ ಧನ ಪ್ರಾಯಶ್ಚಿತ್ತಕ್ಕೆ

286 » ಪಾಪಿ ಸಮುದ್ರ ಹೊಕ್ಕರು ಮೊಣಕಾಲುದ್ದ ನೀರು

287 » ಪಾಪಿ ಹೋದಲ್ಲಿ ಪಾತಾಳ.

288 » ಪಾಪಿಗೆ ಪರಮಾಯು ಲೋಭಿಗೆ ಚಿರಾಯು .

289 » ಪಾಪಿಯ ದೇವರೆಂದು ಪಾಪೊಸಿನಿಂದ ಬಡಿಯಬಾರದು.

290 » ಪಾಪಿಯ ಪಾಪಿ ತಿಂದೋಗಲಿ

291 » ಪಾಯಸ ಮಾಡಿ ನಾಯಿ ಬಾಲದಲ್ಲಿ ತೊಳಸಿದ ಹಾಗೆ

292 » ಪಾಲಿಗೆ ಬಂದದ್ದು ಪಂಚಾಮೃತ

293 » ಪಾಲಿಗೆ ಬಂದದ್ದೆ ಪರಮಾನ್ನ.

294 » ಪಿತ್ತ ನೆತ್ತಿಗೇರಿದವಗೆ ಶಂಖ ಕರ್ರಗೆ ಕಂಡರೆ ಅದರ ಬಣ್ಣ ಕೆಟ್ಟೀತೇ?

295 » ಪಿಶಾಚಿ ಬಿಟ್ಟರೂ ನಿಶಾಚರ ಬಿಡ

296 » ಪೀತಾಂಬರ ಉಟ್ಟರೂ ಕೊತ್ತಂಬರಿ ಮಾರೋದು ತಪ್ಪಲಿಲ್ಲ.

297 » ಪುಣ್ಯ ಉಂಡು (=ಸುಖ ಅನುಭೋಗಿಸಿ) ತೀರಿತು, ಪಾಪ ತಿಂದು (=ಕಷ್ಟ ಅನುಭವಿಸಿ) ತೀರಿತು

298 » ಪುಣ್ಯ ಉಂಡು ತೀರಿತು, ಪಾಪ ತಿಂದು ತೀರಿತು

299 » ಪುಣ್ಯದ ಪಾಲು ನನಗಿರಲಿ ಅಂದ

300 » ಪುರಾಣ ಹೇಳೊಕೆ; ಬದನೆಕಾಯಿ ತಿನ್ನೋಕೆ

301 » ಪುಷ್ಪ ಡೊಂಕಾದರೇನು, ಪರಿಮಳ ಡೊಂಕೇ?

302 » ಪುಷ್ಪವಿಲ್ಲದ ಪೂಜೆ, ಅಶ್ವವಿಲ್ಲದ ಅರಸನಿಗೆ ಸಮ.

303 » ಬರೋಳನ್ನು ನೆಚ್ಚಿ ಇರೋಳನ್ನು ಬಿಟ್ಟ

304 » ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯ್ತು

305 » ಬಲ್ಲವನೇ ಬಲ್ಲ ಬೆಲ್ಲದ ರುಚಿಯ.

306 » ಬಲ್ಲವರ ಮಾತು ಬೆಲ್ಲ ಸವಿದಂತೆ.

307 » ಬಲ್ಲವರಿಗೆ ಅದೇ ಸಮ್ಮತ

308 » ಬಲ್ಲಿದರೊಡನೆ ಸೆಣಸಿ ಮಾತಾಡಿದರೆ ಅಲ್ಲೇ ಬಂತು ಕೇಡು

309 » ಬಲ್ಲಿದವನಿಗೆ ಕಬ್ಬು.

310 » ಬಸವನ ಹಿಂದೆ ಬಾಲ, ಲಗ್ನದ ಹಿಂದೆ ಸಾಲ.

311 » ಬಸವನ ಹಿಂದೆ ಬಾಲ,ಸೂಜಿ ಹಿಂದೆ ದಾರ

312 » ಬಸವನ ಹಿಂದೆ ಬಾಲ.

313 » ಬಸುರಲ್ಲಿ ಬಂದ ಕೂಸು ಮುದ್ದು

314 » ಬಹುಮನದ ಹಾದಿ ಕೈಗೊಂಡರೆ ಸುಖವಿಲ್ಲ

315 » ಬಳ್ಳಿಗೆ ಕಾಯಿ ಭಾರವೇ

316 » ಬಾಡಿಗೆ ಎತ್ತು ಅಂತ ಹೊಡಿದು ಬಡಿಬಾರದು.

317 » ಬಾಡಿಗೆ ಎತ್ತು ಎಂದು ಬಡಿದು ಬಡಿದು ಹೂಡಬಾರದು.

318 » ಬಾಣಲೆಯಿಂದ ಬೆಂಕಿಗೆ

319 » ಬಾನ ಹರಿದು ಬೀಳುವಾಗ ಅಂಗೈ ಒಡ್ಡಿದರೆ ತಡದೀತೆ.

320 » ಬಾಯಲೆಲ್ಲಾ ವೇದಾಂತ, ಮಾಡುವುದೆಲ್ಲಾ ರಾದ್ಧಾಂತ.

321 » ಬಾಯಲ್ಲಿ ಬಸಪ್ಪ ಹೊಟ್ಟೆಯಲ್ಲಿ ವಿಷಪ್ಪ

322 » ಬಾಯಲ್ಲಿ ಬೆಣ್ಣೆ; ಬಗಲಲ್ಲಿ ದೊಣ್ಣೆ.

323 » ಬಾಯಲ್ಲಿ ಬೆಲ್ಲ ಕರುಳು ಕತ್ತರಿ

324 » ಬಾಯಾರಿದಾಗ ಬಾವಿ ತೋಡಿದ ಹಾಗೆ.

325 » ಬಾಯಿ ಇದ್ದರೆ ಮಗ ಬದುಕ್ಯಾನು.

326 » ಬಾಯಿ ಬಂಗಾರ, ಮನ ಅಂಗಾರ.

327 » ಬಾಯಿ ಬಿಟ್ಟರೆ ಬಣ್ಣಗೇಡು.

328 » ಬಾಯಿದ್ದೋರು ಬರಗಾಲದಲ್ಲೂ ಬದುಕಿದರು

329 » ಬಾಯಿಯಲ್ಲಿ ಬಸಪ್ಪ ಹೊಟ್ಟೆಯಲ್ಲಿ ವಿಷಪ್ಪ.

330 » ಬಾಯಿಯಲ್ಲಿ ಬೆಲ್ಲ ಎದೆಯಲ್ಲಿ ನೀಚತನ.

331 » ಬಾಯಿಯಲ್ಲಿ ಬೆಲ್ಲ ಕರುಳು ಕತ್ತರಿ.

332 » ಬಾಯಿಯಿದ್ದ ಮಗ ಬದುಕುವನು.

333 » ಬಾಯಿಲ್ಲದೋನು ಬರದೇಲಿ ಸತ್ತನಂತೆ

334 » ಬಾಯ್ ತೆವಲು ತೀರಿಸಿಕೊಳ್ಳೋಕೆ ಎಲೆ ಅಡಿಕೆ ಬೇಕು, ಮೈ ತೆವಲು ತೀರಿಸಿಕೊಳ್ಳೋಕೆ ಒಡಂಬಡಿಕೆ ಬೇಕು

335 » ಬಾಲ ಸುಟ್ಟ ಬೆಕ್ಕಿನ ಹಾಗೆ

336 » ಬಾಲೇರ ಮನಸ್ಸು ನೆಲೆಯಿಲ್ಲ

337 » ಬಾಲ್ಯವಿಲ್ಲದೆ ಯೌವ್ವನವಿಲ್ಲ, ಯೌವ್ವನವಿಲ್ಲದೆ ಮುಪ್ಪಿಲ್ಲ.

338 » ಬಾವಿ ತೋಡದೆ ನೀರು ಸಿಗದು, ಪ್ರಯತ್ನ ಮಾಡದೆ ಫಲ ಸಿಗದು.

339 » ಬಾವಿಯ ಬಾಯನ್ನು ಮುಚ್ಚಬಹುದು, ಜನಗಳ ಬಾಯನ್ನಲ್ಲ.

340 » ಮನಸಿದ್ದರೆ ಮಾರ್ಗ.

341 » ಮನಸ್ಸನ್ನು ನಿಯಂತ್ರಿಸಿ ಜೀವನ ಸಾಗಿಸಿ.

342 » ಮನಸ್ಸಿದ್ದರೆ ಮಾರ್ಗ

343 » ಮನಸ್ಸಿಲ್ಲದವಳ ಒಡನಾಟ ಮಾತುಮಾತಿಗು ಬೇಸರ

344 » ಮನಸ್ಸು ಇಲ್ಲದಿದ್ದರೆ ಗಟ್ಟಿ, ಎಲ್ಲವೂ ಮೂರಾಬಟ್ಟಿ.

345 » ಮನುಜನಾಗಿ ಹುಟ್ಟಿ ಪಶುವಿನಂತೆ ಬದುಕಿದಂತೆ!

346 » ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು.

347 » ಮನೆ ಗೆದ್ದು ಮಾರು ಗೆಲ್ಲು.

348 » ಮನೆ ತು೦ಬಾ ಮುತ್ತಿದ್ದರೆ ತಿಕಕ್ಕೂ ಪೋಣಿಸಿಕೊ೦ಡರ೦ತೆ.

349 » ಯೋಗಿ ತಂದದ್ದು ಯೋಗಿಗೆ, ಭೋಗಿ ತಂದದ್ದು ಭೋಗಿಗೆ

350 » ಯೋಗಿಗೆ ರಾಗ ಇರಬಾರದು ಭೋಗಿಗೆ ರೋಗ ಇರಬಾರದು

351 » ಯೋಗ್ಯತೆ ಅರಿಯದ ದೊರೆ ರೋಗ ಅರಿಯದ ವೈದ್ಯ ಒಂದೇ

352 » ರಂಗನ ಮುಂದೆ ಸಿಂಗನೆ ? ಸಿಂಗನ ಮುಂದೆ ಮಂಗನೆ ?

353 » ರಂಭೆಯಂಥ ಹೆಣ್ತೀನ ಬಿಟ್ಟು ದೊಂಬಿತಿಯ ಹಿಂದೆ ಹೋದ

354 » ರಟ್ಟೆ ಮುರಿದು ರೊಟ್ಟಿ ತಿನ್ನು ಕಟ್ಟೆ ಹಾಕಿ ಅನ್ನ ಉಣ್ಣು

355 » ರತ್ನ ತಗೊ೦ಡು ಹೋಗಿ ಗಾಜಿನ ತು೦ಡಿಗೆ ಹೋಲಿಸಿದ ಹಾಗೆ.

356 » ರವಿ ಕಾಣದ್ದನ್ನು ಕವಿ ಕಂಡ

357 » ರಸ ನೆತ್ತಿಗೇರಿ ಬಿಂಗಿಯಂತೆ ಆಡಿದ

358 » ರಸ ಬೆಳೆದು ಕಸ ತಿನ್ನಬೇಡ,

359 » ರಸ ಬೆಳೆದು ಕಸ ತಿನ್ನಬೇಡ, ಹಸ ಕಟ್ಟಿ ಮೊಸರಿಗೆ ಪರದಾಡಬೇಡ

360 » ರಸವಳ್ಳಿ ಹೆಣ್ಣಿಗೆ ರಸಪೂರಿ ಹಣ್ಣಿಗೆ ಮನ ಸೋಲದವರಿಲ್ಲ

361 » ರಸವಳ್ಳಿ ಹೆಣ್ಣು ಒಲಿವಂತೆ ಮಾಡುವುದು ಎಳ್ಳ ತಿಂದ ಋಣ

362 » ರಸಿಕನ ನುಡಿ ತಿಂಗಳ ಬೆಳಕಿನಂತೆ

363 » ರಸ್ತೇಲಿ ಕುತ್ಕೊಂಡು ಗಳಗಳನೆ ಅತ್ತರೆ ಹೋದ ಪ್ರಾಯ ಬಂದೀತೆ?

364 » ರಾಗ ನೆನೆಪಾದಾಗ ತಾಳ ಮರೆತು ಹೋಯಿತಂತೆ

365 » ರಾಗಿ ಇದ್ರೆ ರಾಗ ರಾಗಿ ಇಲ್ದಿದ್ರೆ ರೋಗ

366 » ರಾಗಿಕಲ್ಲು ತಿರುಗುವಾಗ ರಾಜ್ಯವೆಲ್ಲಾ ನೆಂಟರು

367 » ರಾಜ ಇರೋತನಕ ರಾಣಿ ಭೋಗ

368 » ರಾತ್ರಿ ಎಲ್ಲ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮಂಗೂ ಸೀತೆಗೂ ಏನು ಸಂಬಂಧ ಅಂದ್ರಂತೆ

369 » ರಾತ್ರಿ ಕಂಡ ಬಾವೀಲಿ ಹಗಲು ಬಿದ್ದಂಗೆ

370 » ವಿನಯದಿಂದ ವಿಶ್ವವನ್ನು ಗೆಲ್ಲು, ಪರನಿಂದೆ ಮಹಾಪಾಪ.

371 » ವಿನಾಶ ಕಾಲೇ ವಿಪರೀತ ಬುದ್ಧಿ.

372 » ವಿರೂಪಾಕ್ಷ ಹ೦ಪೆ ಬಿಡ, ವಿಘ್ನೇಶ್ವರ ಕೊ೦ಪೆ ಬಿಡ.

373 » ವಿವಿಧ ರೋಗಗಳಿಗೆ ಮದ್ದಿವೆ, ಹೊಟ್ಟೆ ಉರಿಗೆ ಮದ್ದಿಲ್ಲ.

374 » ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ.

375 » ವಿಶ್ವಾಸಿ ನೀನಾಗು, ಘಾತುಕಕ್ಕೆ ಬಗ್ಗದೆ ಮುನ್ನುಗ್ಗು.

376 » ವೃದ್ಧ ನಾರೀ ಪತಿವ್ರತಾ

377 » ವೇದ ಸುಳ್ಳಾದರೂ ಗಾದೆ ಸುಳ್ಳಾಗದು.

378 » ವೇದ ಸುಳ್ಳಾದ್ರು ಗಾದೆ ಸುಳ್ಳಲ್ಲ.

379 » ವೈಕುಂಠಕ್ಕೆ ಹೋಗಲಿಕ್ಕೆ ಕುಂಟು ದಾಸಯ್ಯನ ಮಧ್ಯಸ್ತಿಕೆಯೇ?

380 » ವೈದ್ಯರ ಹತ್ತಿರ, ವಕೀಲರ ಹತ್ತಿರ ಸುಳ್ಳು ಹೇಳಬೇಡ

381 » ವೈರತ್ವ ನಾಶಕ್ಕೆ ವಾತ್ಸಲ್ಯವೇ ಮದ್ದು.

382 » ವೈರವಿದ್ದವನ ಕರೆದು ಮುಖಕ್ಷೌರ ಮಾಡಿಸಿಕೊ೦ಡಹಾಗೆ.

383 » ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ

384 » ವ್ರತ ಕೆಟ್ಟರೂ ಸುಖ ಪಡಬೇಕು

385 » ಶ೦ಖದಿ೦ದ ಬ೦ದರೇನೇ ತೀರ್ಥ.

386 » ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ.

7 thoughts on “ಗಾದೆ ಮಾತುಗಳು | 2500+ Gadegalu in Kannada Language Script”

Leave a Reply

Your email address will not be published. Required fields are marked *