Kannada Essay – ಕನ್ನಡ ನಮ್ಮ ಸಂಸ್ಕೃತಿ ಕಿರು ಪ್ರಬಂಧ

    ಕನ್ನಡ ನಮ್ಮ ಸಂಸ್ಕೃತಿ

    ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ ಕನ್ನಡ, ಕನ್ನಡ. ಕಸ್ತೂರಿ ಕನ್ನಡ.

    “ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು. ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು. ಬದುಕಿದು ಜಟಕಾಬಂಡಿ, ಇದು ವಿಧಿ ಓಡಿಸುವ ಬಂಡಿ… ಬದುಕಿದು ಜಟಕಾ ಬಂಡಿ, ವಿಧಿ ಗುರಿ ತೋರಿಸುವ ಬಂಡಿ” ಎಂದು ಅಂದು ಡಾ.ರಾಜ್ ಕುಮಾರ್ ಹಾಡಿದ್ದರು. ಹೌದು ನಮ್ಮ ಕನ್ನಡ ನಾಡು-ನುಡಿಯಲ್ಲಿ ಆ ಒಂದು ಶ್ರೇಷ್ಠತೆ ಇದೆ. “ಕನ್ನಡ ಭಾಷೆ ನಮ್ಮ ಸಂಸ್ಕೃತಿ” ಇಂದು ನಾವು 62 ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ನಾವು ನಮ್ಮ ಕನ್ನಡದ ಸುಗ್ಗಿಯನ್ನು ಕೇವಲ ನವೆಂಬರ್ ಮಾಸದಲ್ಲಿ ಮಾತ್ರವಲ್ಲ ಪ್ರತಿ ದಿನ ಆಚರಿಸಬೇಕು.

    ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ನಾಡು. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬಂತೆ ನಾವು ದೇಶದ ಯಾವುದೇ ಮೂಲೆಯಲ್ಲಿದ್ದರು ಕನ್ನಡವನ್ನು ಉಳಿಸಿ, ಬೆಳೆಸುವ ಸಂಸ್ಕೃತಿ ಪ್ರತಿಯೊಬ್ಬನ ಕನ್ನಡಿಗನದಾಗಲಿ.

    ಕನ್ನಡ ಎಂದರೆ ಕೇವಲ ವರ್ಣಮಾಲೆಯಲ್ಲ, ಅದು ಕರುನಾಡ ನೆಲ, ಜಲ, ಜನ, ಬದುಕು, ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ ಎಲ್ಲವನ್ನೂ ಒಳಗೊಂಡಿದೆ. ಕರುನಾಡು ಸ್ವರ್ಗದ ಸೀಮೆ-ಕಾವೇರಿ ಹುಟ್ಟಿನ ನಾಡು. ಕಲ್ಲಲ್ಲಿ ಕಲೆಯನು ಕಂಡ-ಬೇಲೂರ ಶಿಲ್ಪದ ಬೀಡು. ಬಸವೇಶ್ವರ, ರನ್ನ-ಪಂಪರ ಕವಿವಾಣಿಯ ನಾಡು ನಮ್ಮ ಕನ್ನಡ ನಾಡು. ಚಾಮುಂಡಿ ರಕ್ಷೆಯು ನಮಗೆ- ಗೊಮ್ಮಟೇಶ್ವರ ಕಾವಲು ಇಲ್ಲಿ. ಶೃಂಗೇರಿ ಶಾರದೆ ವೀಣೆ- ರಸತುಂಗೆ ಆಗಿದೆ ಇಲ್ಲಿ. ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು. ಇದೆ ನಾಡು- ಇದೆ ಭಾಷೆ ಎಂದೆಂದೂ ನನ್ನದಾಗಿರಲಿ ಎಂಬ ಎಸ್.ಪಿ.ಬಿ ಅವರ ಗಾಯನದಂತೆ ಎಲ್ಲೇ ಇರಲಿ ಹೇಗೆ ಇರಲಿ ನಮ್ಮ ಉಸಿರಲ್ಲಿ ಕನ್ನಡ ಸದಾ ಅಚ್ಚ ಹಸಿರಾಗಿರಲಿ ಎಂಬುದು ನಮ್ಮ ಆಶಯ.

    Leave a Reply

    Your email address will not be published. Required fields are marked *