Kannada Essay about Man on Moon – ಚಂದ್ರನ ಮೇಲೆ ಮಾನವ

  Kannada Essay about Man on Moon

  ಮಾನವನನ್ನು ಚಂದ್ರನ ಮೇಲೆ ಇಳಿಸಲು ಅಮೆರಿಕ ಸಿದ್ದಪಡಿಸಿದ ‘ಮಾನವ ತಂದ್ರನ ಮೇಲೆ’ (ಮ್ಯಾನ್ ಆನ್ ದಿ ಮೂನ್) ಯೋಜನೆಯಲ್ಲಿ ಪ್ರಪ್ರಥಮವಾಗಿ ಯಶಸ್ವಿಯಾದ ಅಂತರಿಕ್ಷ ನೌಕೆ. ಈ ಅಂತರಿಕ್ಷ ನೌಕೆಯ ಪೂರ್ಣ ಹೆಸರು ಅಪೋಲೆ 11. ಪ್ಯಾಟರ್ನ್ 5 ಅದರ ಉಡಾವಣಾ ರಾಕೆಟ್, ಇದು ಮೂರು ಘಟ್ಟಗಳಲ್ಲಿ ತೋಡಣೆಗೊಂಡಿರುವ ರಾಕೆಟ್ ವ್ಯವಸ್ಥೆ. ಇದರ ಎತ್ತರ 75 ಮೀ. ಭಾರ 2954.64 ಮಟ್ರಿಕ್) ಟನ್ನುಗಳು, ಮೆಲುಭಾಗ ಅಪೊಲೊ 11, ಎತ್ತರ 25 ಮೀ. ಭಾರ 45.36 ಟಿ. ಪೂರ್ಣವ್ಯವಸ್ಥೆಯ ಎತ್ತರ 100 ಮೀ. ಭಾರ 3000 ಟ. 1969 ಜುಲೈ 16ರಂದು ಸಂಜೆ 2-02 ಘಂಟೆಗೆ ಅಮೆರಿಕದ ಫ್ಲಾರಿಡದ ಕೇಪ್ ಕೆನಡಿ ಉಡಾವಣಾ ಪೀಠದಿಂದ ಅಪೊಲೊವನ್ನು ಹಾರಿಸಲಾಯಿತು. 3400 ಟನ್ ನೂಕು ಬಲದಿಂದ ಸ್ಯಾಟರ್ನ್ 5ರ ತಳದ ರಾಕೆಟ್ 3000 ಟನ್ ಭಾರದ ಸಮಗ್ರ ವ್ಯವಸ್ಥೆಯನ್ನು ಮೇಲೆತ್ತಿತ್ತು.

  ನೀಲ್ ಎ. ಆರ್ಮ್‌ಸ್ಟ್ರಾಂಗ್, ಮೈಕೆಲ್ ಕಾಲಿನ್ಸ್, ಎಡ್ಮಿನ್ ಇ, ಆಲ್ವಿನ್ ಇವರು ಅಪೊಲೆ ಯಾತ್ರಿಕರು, ಆರ್ಮ್‌ಸ್ಟಾಂಗ್ ನಾಯಕ, ಚಂದ್ರನ ಮೇಲೆ ಪ್ರಥಮವಾಗಿ ಕಾಲೂರಿದ ಮಾನವ, ಜುಲೈ 20, ಮುಂದಿನ ಸಾಹಸ ನೆರವೇರಿಸಲು ಭೂಮಿಯ ಮೇಲಿನ ನಿಯಂತ್ರಕರು ಅನುಮತಿ ನೀಡಿದರು. ಸ್ವಯಂಚಾಲಿತ ವ್ಯವಸ್ಥೆ ಈಗಲ್ಲನ್ನು ಚಂದ್ರತಲದ ಮೇಲಿನ ನಿರ್ದಿಷ್ಟ ಸ್ಥಳದಲ್ಲಿ ಇಳಿಸಲು ಸಿದ್ಧವಾಗಿತ್ತು. ಮೊದಲು ಆಲ್ಫ್ರಿನ್ ಮತ್ತೆ ಆರ್ಮ್‌ಸ್ಟಾಂಗ್ ಈಗಲ್ಲನ್ನು ಪ್ರವೇಶಿಸಿದರು. ಪುನಃ ಅದರ ಉಪಕರಣಗಳ ಪರಿಶೀಲನೆ, ಮತ್ತೆ ಅಂತರಿಕ್ಷ ಉಡುಪುಗಳ ಧಾರಣೆ, ಬೆಳಗಿನವರೆಗೂ ಯಾತ್ರಿಕರು ಈಗಲ್ ಒಳಗೆ ಇದ್ದರು. ವಿಶ್ರಾಂತಿ ಮತ್ತು ಹೊಸ ಪರಿಸರದ ಪೂರ್ಣ ಪರಿಚಯವಾಗಬೇಕು. ಅಪಾಯವಿಲ್ಲ ಎಂದು ದೃಢವಾದ ಮೇಲೆ ಆರ್ಮ್‌ಸ್ಟಾಂಗ್ ಈಗಲ್ ಬಾಗಿಲು ತೆರೆದು ಏಣಿಯ ಮೂಲಕ ಒಂದೊಂದೇ ಮೆಟ್ಟಲನ್ನು ಲಯಬದ್ದವಾಗಿ ಇಳಿದ, ಎಡಗಾಲನ್ನು ಚಂದ್ರತಲದ ಮೇಲೆ ಊರಿದ (3-27 ಗಂ. ಜುಲೈ 21, 1969). “ಇದು ಒಬ್ಬ ಮನುಷ್ಯನಿಗೆ ಬಲು ಪುಟ್ಟ ಹೆಜ್ಜೆ; ಆದರೆ ಮಾನವ ಜನಾಂಗಕ್ಕೆ ಹನುಮಂತ ನೆಗೆತ” ಎಂಬ ಅರ್ಥದ ಉದ್ಧಾರವೆತ್ತಿದ. ಚಂದ್ರಲೋಕದ 15 ದಿವಸಗಳ ಹಗಲಿನ ಆರಂಭ ಆಗತಾನೇ ಆಗುತ್ತಿತ್ತು. ಆರ್ಮ್‌ಸ್ಟಾಂಗ್ ಕಾಲೂರಿದ 19 ಮಿನಿಟುಗಳ ಅನಂತರ ಅಲ್ಲ ರಿನ್ ಬಂದು ಅವನನ್ನು ಕೂಡಿಕೊಂಡ. ಇಬ್ಬರೂ ಕೂಡಿ ನಿಯೋಜಿತ ಕರ್ತವ್ಯಗಳನ್ನು, ಪ್ರಯೋಗಗಳನ್ನು ನಿರ್ವಹಿಸಿದರು. ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷ ರಿಚರ್ಡ್ ನಿಕ್ಸನ್ ಮತ್ತು ಮೂವರು ಯಾತ್ರಿಕರ ಸಹಿಯಿದ್ದ ಒಂದು ಫಲಕವನ್ನು ಏಣಿಗೆ ಕಟ್ಟಿದರು. ಅದರ ಮೇಲೆ ‘ಭೂಮಿಗ್ರಹದಿಂದ ಬಂದೆ ಮನುಷ್ಯರು ಚಂದ್ರನ ಮೇಲೆ ಇಲ್ಲಿ ಮೊದಲ ಕಾಲಿಟ್ಟರು. ಕ್ರಿ.ಶ. ಜುಲೈ 1969. ನಾವು ಮಾನವ ಜನಾಂಗದ ಕಲ್ಯಾಣಕ್ಕಾಗಿ ಬಂದೆವು’ ಎಂಬರ್ಥದ ಇಂಗ್ಲಿಷ್ ಒಕ್ಕಣೆ ಇದೆ, ಅಮರಿಕ ದೇಶದ ಧ್ವಜವನ್ನು ಅಲ್ಲಿ ನೆಟ್ಟರು. ಬೇರೆ ಬೇರೆ ಸ್ಥಳಗಳಲ್ಲಿ ಒಂದು ಕಂಪನ ಲೇಖಕ, ಲೇಸರ್ ಪ್ರತಿಫಲಕ ಮತ್ತು ಕಣಸಂಗ್ರಾಹಕಗಳನ್ನು ಇಟ್ಟರು. ಅವರು ಚಂದ್ರನ ಮೇಲಿಟ್ಟ ಇತರೆ ವಸ್ತುಗಳ ವಿವರ-ರಷ್ಯ ದೇಶದ ಮೃತ ಖಗೋಳ ಯಾತ್ರಿಗಳಾದ ಯೂರಿ ಗಗಾರಿನ್ ಮತ್ತು ಕೋಮರೋವ್ ಅವರ ಪದಕಗಳು; ಅಪೊಲೊ ಯೋಜನೆಯಲ್ಲಿ ಈ ಹಿಂದೆ ಆಸ್ಫೋಟನೆಯಿಂದ ದುರ್ಮರಣಕ್ಕೆ ಈಡಾದ ಅಮೆರಿಕದ ಮೂವರು ಅಂತರಿಕ್ಷ ಯಾತ್ರಿಕರಾದ ರಿಸ್ಕೊ, ಚಾಫಿಮತ್ತು ವೈಟ್ ಅವರ ಲಾಂಛನಗಳು; ಸಂಯುಕ್ತ ರಾಷ್ಟ್ರಗಳ ವರಿಷ್ಠಾಧಿಕಾರಿಗಳ ಸಂದೇಶಗಳು-ಇತ್ಯಾದಿ. ಆರ್ಮ್‌ಸ್ಟಾಂಗ್ ಚಂದ್ರನ ಮೇಲೆ ನಡೆಯುತ್ತಿದ್ದಾಗ ಅದರ ಮೇಲಿನ ಮಣ್ಣು ಕೈಗೆ ಅಂಟಿಕೊಳ್ಳುವಂತೆ ಪುಡಿಪುಡಿಯಾಗಿದೆ ಎಂದು ಅವನಿಗನಿಸಿತು. ಚಂದ್ರಲೋಕದ ಆ ಪ್ರದೇಶ ಒಂದು ಮರುಭೂಮಿಯಂತ ಇತ್ತು. ಸುತ್ತಲೂ ಕೆಲವು ಕಡೆಗಳಲ್ಲಿ ದೊಡ್ಡ ದೊಡ್ಡ ಬಂಡೆಗಳೂ ಲೆಕ್ಕ ಮಾಡಲು ಸಾಧ್ಯವಿಲ್ಲದಷ್ಟು ಚಿಕ್ಕ ದೊಡ್ಡ ಕೂಪಗಳೂ ಇದ್ದುವು. ಯಾತ್ರಿಗಳ ಹೃದಯಮಿಡಿತ ನಿಮಿಷಕ್ಕೆ 90-125. ಆರ್ಮ್ಸ್ವಾಂಗ್ 10 ಕಿ.ಗ್ರಾಂ. (ಚಂದ್ರನಲ್ಲಿ. ನಂತರದ ಕೆಲವು ಗಂಟೆಗಳಲ್ಲಿ ಭಾರದ ಕಲ್ಲನ್ನೆತ್ತಿದಾಗ ಹೃದಯಮಿಡಿತ ಬಹುವಾಗಿ ಏರಿತು. ಪರೀಕ್ಷಾರ್ಥವಾಗಿ ಅಲ್ಲಿನ ಅಮೌಲ್ಯ ಮೃತ್ತಿಕಾದಿ ವಸ್ತುಗಳನ್ನು ಸಂಗ್ರಹಿಸಿದರು.

  ನಂತರ ಎಸ್.ಎಂ. (ಸರ್ವಿಸ್ ಮಾಡ್ಯೂಲ್)ನ ಮೈಗೆ ಅಳವಡಿಸಿರುವ ರಾಕೆಟ್‌ಗಳು ಸ್ಫೋಟಿಸಿ ಗಂಟೆಗೆ 8,850ಕಿ.ಮೀ. ವೇಗದಲ್ಲಿ ಅಪೊಲೊ ಭೂಮಿಪ್ರಭಾವ ಕ್ಷೇತ್ರ ಪ್ರವೇಶ ಮಾಡಿತು. ನಿಯೋಜಿಸಿದ ಪ್ರಕಾರ ಪೆಸಿಫಿಕ್ ಸಾಗರದ ಮೇಲೆ ಬಡಿದಪ್ಪಳಿಸಿತು. (ಜುಲೈ 22, ರಾತ್ರಿ 10-20 ಗಂಟೆ). ಅದರ ಬರವನ್ನು ಕಾಯುತ್ತಿದ್ದ ನೌಕಾಪಡೆಯ ಸಿಬ್ಬಂದಿ ಹೆಲಿಕಾಪ್ಟರ್ ಸಹಾಯದಿಂದ ಸಿ.ಎಂ. (ಕಮಾಂಡ್ ಮಾಡ್ಯೂಲ್)ನ್ನು ಮೇಲೆತ್ತಿಕೊಂಡರು. ಈ ಮಹಾಯಾತ್ರಯ ಒಟ್ಟು ಅವಧಿ 195 ಗಂಟೆ 18 ಮಿನಿಟು, ಭೂಮಿಯಿಂದ ಹಾರಿದಾಗ ಇದ್ದ ಭಾರ 3,000 ಟನ್; ಬಂದಾಗ ಸುಮಾರು 6 ಟನ್; ಅಂತರಿಕ್ಷ ಸಂಶೋಧನೆಯಲ್ಲಿ ಅಪೊಲೊ 11ರ ಯಶಸ್ಸು ಒಂದು ಪ್ರಮುಖ ಮೈಲಿಕಲ್ಲು,

  ಸೌರವ್ಯೂಹಕ್ಕೆ ಉಪಗ್ರಹಗಳು ಒಂದು ಆಕಾಶಕಾಯದ (ಭೂಮಿ, ಚಂದ್ರ ಇತ್ಯಾದಿ) ಸುತ್ತಲೂ ಪರಿಭ್ರಮಿಸಲು ಮನುಷ್ಯ ನಿಯೋಜಿಸಿರುವ ಸಾಧನ (ಆರ್ಟಿಫಿಶಲ್ ಸ್ಯಾಟಲೈಟ್), ಚಂದ್ರನಂಥ ನೈಸರ್ಗಿಕ ಉಪಗ್ರಹವಾಗಲಿ ಭೂಮಿಯಿಂದ ನಾವು ಕಳುಹಿಸಬಹುದಾದ ಕೃತಕ ಉಪಗ್ರಹಗಳಾಗಲಿ ಪಾಲಿಸಬೇಕಾದ ನಿಮಯಗಳೇನೇನು ಎಂಬುದನ್ನು 17ನೆಯ ಶತಮಾನದಲ್ಲಿಯೇ ವಿಖ್ಯಾತ ವಿಜ್ಞಾನಿ ನ್ಯೂಟನ್ ಅವನ ಗ್ರಂಥದಲ್ಲಿ ಬರೆದಿಟ್ಟಿದ್ದ. ಎಲ್ಲ ಕೃತಕ ಉಪಗ್ರಹಗಳಲ್ಲಿಯೂ ಅನೇಕ ಸಾಧನೋಪಕರಣಗಳ ವೈವಿಧ್ಯಪೂರ್ಣ ಪ್ರಪಂಚವೇ ಅಡಕವಾಗಿರುತ್ತದೆ. ಈ ಸಾಧನಗಳು ಉಪಗ್ರಹದೊಳಗಿನ ಮತ್ತು ಹೊರಗಿನ ಸಂಮರ್ದ ಉಷ್ಣತೆಗಳನ್ನೂ, ಉಪಗ್ರಹದ ಮೇಲೆ ಮಳೆಗರೆಯುವ ಉಲ್ಕೆಗಳನ್ನು, ವಿಶ್ವಕಿರಣಗಳನ್ನೂ, ಸೂರ್ಯ ಮತ್ತು ನಕ್ಷತ್ರಗಳು ಪ್ರಸಾರ ಮಾಡುತ್ತಿರುವೆ ದೃಶ್ಯ ಬೆಳಕನ್ನೂ, ಅತಿನೇರಳೆ ಬೆಳಕನ್ನೂ, ಎಕ್ಸ್ ಕಿರಣಗಳನ್ನೂ, ಉನ್ನತ ವಾಯುಮಂಡಲದ ವಿದ್ಯುತ್ ಸ್ಥಿತಿಯನ್ನೂ, ಕಾಂತಕ್ಷೇತ್ರವನ್ನೂ ಅಳೆಯುತ್ತವೆ. ಹೀಗೆ ಅಳದು ನಿರ್ಣಯಿಸಿದ ಅಂಕಿಅಂಶಗಳನ್ನು ರೇಡಿಯೋ ಸಂಕೇತಗಳ ಮೂಲಕ ಭೂಮಿಗೆ ಕಳುಹಿಸುವ ರೇಡಿಯೋ ಪ್ರೇಷಕ (ಟ್ರಾನ್ಸ್‌ಮೀಟರ್), ಭೂಮಿಯಿಂದ ಕಳುಹಿಸಿದ ಸಂಕೇತದ ಆಜ್ಞೆಗಳನ್ನು ಉಪಕರಣಗಳಿಗೆ ಮತ್ತು ಪ್ರೇಷಕಕ್ಕೆ ಸಾಗಿಸಬಲ್ಲ ರೇಡಿಯೋ ಗ್ರಾಹಕ (ರಿಸೀವರ್), ಪ್ರೇಷಕ ಗ್ರಾಹಕಗಳಿಗೆ ವಿದ್ಯುಚ್ಛಕ್ತಿಯನ್ನೂ ಒದಗಿಸಬಲ್ಲ ವಿದ್ಯುತ್ಕಶಗಳು ಇವಕ್ಕೂ ಉಪಗ್ರಹಗಳಲ್ಲಿ ಸ್ಥಳ ಮೀಸಲಾಗಿರುತ್ತದೆ.

  ಉಪಗ್ರಹಗಳೇ ಮೊದಲಾದ ಅಂತರಿಕ್ಷ ವಾಹನಗಳನ್ನು ಅವುಗಳ ಕಕ್ಷೆಗಳಿಗೆ ಒಯ್ಯಲು ಬಳಸುವ ವಾಹಕ ರಾಕೆಟುಗಳು. ಸಾಮಾನ್ಯವಾಗಿ ಬಾಣಬಿರುಸುಗಳಂತ ರಾಸಾಯನಿಕ ದ್ರವ್ಯಗಳ ದಹನ ಕ್ರಿಯೆಯನ್ನು ಅವಲಂಬಿಸಿ ಕೆಲಸ ಮಾಡುತ್ತವೆ. ಕೃತಕ ಭೂಉಪಗ್ರಹಗಳು ಸಂಕೀರ್ಣ ಉಪಕರಣಗಳನ್ನೊಳಗೊಂಡ ಮಾನವನಿರ್ಮಿತ ಅಂತರಿಕ್ಷವಾಹನಗಳು. ಇವನ್ನು ಭೂಮಿ ಯಿಂದ ಎತ್ತಿ ವಾಯುಮಂಡಲದ ವ್ಯಾಪ್ತಿಯಾಚೆಗೆ ಕೊಂಡೊಯ್ದು ಅಲ್ಲಿ ಸೂಕ್ತವೇಗದೊಡನೆ ಸೂಕ್ತದಿಸೆಯಲ್ಲಿ ಬಿಡುಗಡೆ ಮಾಡುವುದಷ್ಟೆ ವಾಹಕ ರಾಕೆಟುಗಳ ಕೆಲಸ, ರಾಕೆಟುಗಳಿಂದ ಪ್ರತ್ಯೇಕಗೊಂಡ ಮೇಲೆ ಉಪಗ್ರಹ ಯಂತ್ರ ಸಹಾಯವಿಲ್ಲದೆ ತನ್ನಷ್ಟಕ್ಕೆ ತಾನೇ ಭೂಮಿಯ ಸುತ್ತ ಅವಿಚ್ಛಿನ್ನವಾಗಿ ಪರಿಭ್ರಮಿಸತೊಡಗುವುದು. ಇಂಥ ಯಂತ್ರರಹಿತ ಚಲನೆ ಸಾಧ್ಯವಾಗಲು ಕಾರಣ ಆ ಉಪಗ್ರಹ ನಿರ್ವಾತಪ್ರದೇಶದಲ್ಲಿ ಸಂಚರಿಸುವಾಗ ಯಾವ ಗಮನಾರ್ಹ ಘರ್ಷಣೆ-ಪ್ರತಿರೋಧಗಳಿಗೆ ಸಿಲುಕದಿರುವುದೇ, ಅಲ್ಲದೆ ಉಪಗ್ರಹಕ್ಕೆ ಈ ರೀತಿಯಲ್ಲಿ ಲಭಿಸುವ ಸುದೀರ್ಘವಾದ ವೇಗಪೂರ್ಣ ಚರಸ್ಥಿತಿ ಅದನ್ನು ಭೂಮೇಲ್ಮಗೆ ಕೂಡಲೇ ಬಿದ್ದುಹೋಗದಂತೆ ರಕ್ಷಿಸುವುದು. ಜಗತ್ತಿನ ಮೊದಲನೆಯ ಕೃತಕ ಉಪಗ್ರಹವನ್ನು ರಷ್ಯನರು 1957ರ ಅಕ್ಟೋಬರ್ 4 ರಂದು ಭೂಮಿಯ ಸುತ್ತಲ ಕಕ್ಷೆಯೊಂದರಲ್ಲಿ (ಆರ್ಬಿಟ್) ಯಂತ್ರಗಳ ನೆರವಿಲ್ಲದೆ ತನ್ನಷ್ಟಕ್ಕೆ ತಾನೇ ಚಲಿಸುವಂತೆ ಮಾಡಿ ಪ್ರಪಂಚದ ಜನರೆಲ್ಲರನ್ನೂ ಪಾಮರರನ್ನೇ ಅಲ್ಲದೆ ವಿಜ್ಞಾನಿಗಳನ್ನೂ ಬೆರಗುಗೊಳಿಸಿದರು. ಇದಕ್ಕೆ ಅವರು ಸ್ಪುಟ್ಟಿಕ್ ಅಂದರೆ ಸಹಪ್ರವಾಸಿ ಎಂದು ಹೆಸರಿಟ್ಟರು. ಅದು 92 ದಿವಸಗಳ ಕಾಲ ಭೂಮಿಯನ್ನು ಪಶ್ಚಿಮದಿಂದ ಪೂರ್ವಕ್ಕೆ ಸುತ್ತು ಹಾಕುತ್ತಿದ್ದು 1958ರ ಜನವರಿಯಲ್ಲಿ ಕಕ್ಷೆಯಿಂದ ಜಾರಿ ಭೂ ವಾಯುಮಂಡಲದೊಳಗಡೆ ವಾಯುಸಂಘರ್ಷಣದ ಪರಿಣಾಮವಾಗಿ ಸುಟ್ಟು ನಾಶವಾಯಿತು.

  ಪ್ರಥಮ ಸ್ಪುಟ್ನಕಿನ ಉಡಾವಣೆಯಿಂದೀಚೆಗೆ ಬಗೆಬಗೆಯ ಉಪಗ್ರಹಗಳನ್ನು ಸಹಸ್ರಾರು ಸಂಖ್ಯೆಯಲ್ಲಿ ಅಂತರಿಕ್ಷಕ್ಕೆ ಉಡಾಯಿಸಲಾಗಿದೆ. ಆಧುನಿಕ ಉಪಗ್ರಹಗಳಲ್ಲಿರುವ ಯಂತ್ರೋಪಕರಣ ವ್ಯವಸ್ಥೆ ಸಂಕೀರ್ಣ ಹಾಗೂ ವೈವಿಧ್ಯಪೂರ್ಣ ವೈಜ್ಞಾನಿಕ ಸಂಶೋಧನೆಗಳಲ್ಲಿ ಅತಿವೇಗದ ವಿಮಾನ ಕ್ಷಿಪಣಿಗಳ ಮಾರ್ಗದರ್ಶನದಲ್ಲಿ, ಹವಾಮುನ್ಸೂಚನೆಗಳ ನಿಷ್ಕರ್ಷೆಯಲ್ಲಿ ಭೂಮಿಯ ಮೇಲೆ ದೀರ್ಘವ್ಯಾಪಕ ಟೆಲಿಫೋನ್ ಸಂಪರ್ಕಗಳ ಸಂಸ್ಥಾಪನೆಯಲ್ಲಿ, ಬಾಹ್ಯಾಕಾಶಯಾನಿಗಳ ತರಬೇತಿಯಲ್ಲಿ ಹಾಗೂ ಆಕಾಶಾಧಾರಿತ ಕೈಗಾರಿಕೆಗಳ ನಿಯೋಜನೆಯಲ್ಲಿ ಉಪಗ್ರಹಗಳು ನಿರ್ವಹಿಸುವ ಪಾತ್ರ ಅಮೂಲ್ಯವಾದುದು. ಸಂಶೋಧನ ಕ್ಷೇತ್ರದಲ್ಲಿ ಭೂಮಿಯ ವಾಯುಮಂಡಲದ ಬಾಹ್ಯವಲಯಗಳ ಸ್ವರೂಪ, ಭೂಮಿಯ ಆಕಾರ ಹಾಗೂ ಗುರುತ್ವಾಕರ್ಷಣೆ, ವಿಶ್ವದ ಬೇರೆಡೆಗಳಿಂದ ಭೂಮಿಯ ಬಳಿಗೆ ಆಗಮಿಸುವ ಕಣ ಪ್ರವಾಹಗಳು ಮತ್ತು ದೃಶ್ಯಾದೃಶ್ಯ ರಶ್ಮಿಗಳು, ಭೂಪರಿಸರದ ಕಾಂತಕ್ಷೇತ್ರ ಆಕಾಶದಲ್ಲಿ ಉಲ್ಕಾಧೂಳಿಯ ಹಂಚಿಕೆ, ಜೀವಗಳ ಮೇಲೆ ಆಕಾಶಯಾನದ ಪ್ರಭಾವ-ಇವೇ ಮುಂತಾದ ವಿಚಾರಗಳ ಬಗ್ಗೆ ತನಿಖೆ ನಡೆಸಲು ಉಪಗ್ರಹಗಳು ವಿಜ್ಞಾನಿಗಳಿಗೆ ನೆರವಾಗಿವೆ. ವಾಯುಯಾನ-ಕ್ಷಿಪಣಿ ಯಾನ ಕ್ಷೇತ್ರದಲ್ಲಿ ಸೂಕ್ತ ಮಾರ್ಗದರ್ಶಕ ಉಪಗ್ರಹಗಳು (ನ್ಯಾವಿಗೇಷನಲ್ ಸ್ಯಾಟಲೈಟ್ಸ್) ತಮ್ಮಿಂದ ಪ್ರಸಾರವಾಗುವ ರೇಡಿಯೊ ಸಂಕೇತಗಳ ಮೂಲಕ ವಿಮಾನ ಕ್ಷಿಪಣಿಗಳಿಗೆ ನಿಯೋಜಿತ ಮಾರ್ಗದಲ್ಲಿ ಚಲಿಸುವಂತೆ ನಿಖರ ನಿರ್ದೇಶನ ನೀಡಬಲ್ಲವು. ಹವಾವಿಜ್ಞಾನ ಕ್ಷೇತ್ರದಲ್ಲಿ ಪರಮೋಪ ಗ್ರಹಗಳು (ಮೀಟಿಯರೋಲಾಜಿಕಲ್ ಸ್ಯಾಟಲೈಟ್ಸ್) ಭೂಮಿಯ ವಿವಿಧ ಭಾಗಗಳ ಮೇಲೆ ನೆರೆದಿರುವ ಮೇಘರಾಶಿಗಳ ಚಿತ್ರಗಳನ್ನು ತೆಗೆದುಕೊಳ್ಳುತ್ತವೆ ಮತ್ತು ಅಲ್ಲಿಗೆ ಸಂಬಂಧಿಸಿದ ಉಷ್ಣ ವಿಸರಣ ದರವನ್ನು ಅಳೆಯುತ್ತವೆ. ಟೆಲಿಫೋನ್, ಟೆಲಿವಿಷನುಗಳಂಥ ಸಂಪರ್ಕ ವ್ಯವಸ್ಥೆಗಳ ಕ್ಷೇತ್ರದಲ್ಲಿ ಸೂಕ್ತ ನಿಯೋಜನೆಯ ಉಪಗ್ರಹಗಳು ಭೂಮೇಲ್ಮೀಯಿಂದ ಬರುವ ವಿದ್ಯುತ್ಕಾಂತ ಸಂಕೇತಗಳನ್ನು ಗ್ರಹಿಸಿ ಶಕ್ತಿವರ್ಧನೆ ಮಾಡಿ ಮತ್ತೆ ಭೂಮಿಯೆಡೆಗೆ ಮರುಪ್ರಸಾರ ಮಾಡುವುದರ ಮೂಲಕ ಭೂಮಿ ಯಲ್ಲಿ ದೂರವಾಗಿರುವ ಪ್ರೇಷಕ-ಗ್ರಾಹಕ ಕೇಂದ್ರಗಳ ನಡುವೆ ಸಂಬಂಧ ಕಲ್ಪಿಸುತ್ತವೆ. ಇಂದಿನ ಜನಜೀವನಕ್ಕೆ ಕೃತಕ ಉಪಗ್ರಹಗಳ ಕೊಡುಗೆ ಅತ್ಯಮೂಲ್ಯ ಎಂದು ಹೇಳಬಹುದು.

  Leave a Reply

  Your email address will not be published. Required fields are marked *