Kannada Essay on Chhatrapati Shivaji – ಛತ್ರಪತಿ ಶಿವಾಜಿ

    Kannada Essay on Chhatrapati Shivaji

    ತನ್ನ ಸೈನಿಕರಿಗೆ “ಮಸೀದಿಗಳನ್ನು ಹಾಳು ಮಾಡಬಾರದು; ಖುರಾನ್‌ನನ್ನು ನಾಶಮಾಡಬಾರದು, ಪರಸ್ತ್ರೀಯರನ್ನು ಗೌರವದಿಂದ ಕಾಣಬೇಕು” ಎಂದು ಕಟ್ಟಪ್ಪಣೆ ಮಾಡಿದ್ದ ಶಿವಾಜಿ ಪುಣೆಯ ಬಳಿಯಿರುವ ಶಿವನೇರಿ ಕೋಟೆಯಲ್ಲಿ 1627 ಏಪ್ರಿಲ್ 6 ರಂದು ಜನಿಸಿದ. ತಂದೆ ಷಹಾಜಿ, ಬಿಜಾಪುರದ ಸುಲ್ತಾನ ಆದಿಲ್‌ಷಾನ ಸೇನಾಪತಿಯಾಗಿದ್ದ. ತಾಯಿ ಬೇಜಾಬಾಯಿ, ದೈವಭಕ್ಕಳು, ಸ್ವಾತಂತ್ರ್ಯ ಪ್ರೇಮಿ, ರಕ್ಷಕ ದಾದಾಜಿಕೊಂಡದೇವ. ಪ್ರೇರಕಶಕ್ತಿಯಾಗಿದ್ದವರು ಸಮರ್ಥರಾಮದಾಸರು. ಈ ಎಲ್ಲರ ನೇತೃತ್ವದಲ್ಲಿ ಶಿವಾಜಿ ದೈವಭಕ್ತನಾಗಿ, ಸ್ವಾತಂತ್ರ್ಯ ಪ್ರೇಮಿಯಾಗಿ, ವೀರನಾಗಿ ರೂಪುಗೊಂಡ. ಹಿಂದೂ ಧರ್ಮ ರಕ್ಷಣೆ ಅವರ ಧೈಯವಾಯಿತು. ಅದಕ್ಕಾಗಿ ಮರಾಠರ ಶಕ್ತಿಯನ್ನು ಬೆಳಸಿ ಮರಾಠರ ಸಾಮ್ರಾಜ್ಯ ಸ್ಥಾಪನೆಗೆ ಅಸ್ತಿಭಾರ ಹಾಕಿದ. ಹದಿನಾರು ವಯಸ್ಸಿನ ಶಿವಾಜಿ ಸಹ್ಯಾದ್ರಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಯುವಕರನ್ನು ಸೇರಿಸಿಕೊಂಡು ಆದಿಲ್‌ಷಾನ ಹತೋಟಿಯಲ್ಲಿದ್ದ ತೋರಣಕೋಟೆಯನ್ನೂ ಮುಂದ ಬಿಜಾಪುರದ ಅನೇಕ ಕೋಟೆಗಳನ್ನು ವಶಪಡಿಸಿಕೊಂಡ.

    ಬಲಿಷ್ಠನಾಗುತ್ತಿದ್ದ ಶಿವಾಜಿಯ ಶಕ್ತಿಯನ್ನು ಭಂಗಪಡಿಸಲು ಬಿಜಾಪುರದ ಸುಲ್ತಾನ 1659ರಲ್ಲಿ ತನ್ನ ಸೇನಾಪತಿ ಅಲ್‌ಖಾನ್‌ನನ್ನು ಕಳಿಸಿದ. “ಆ ದಂಗೆಕೋರನನ್ನು ಜೀವಂತವಾಗಲೀ, ಮರಣಿಸಿಯಾಗಲೀ ತರಬೇಕು” ಎಂದು ಸುಲ್ತಾನ ಆದೇಶಿಸಿದ. ಅಫ್ಘಲ್‌ಖಾನ್ ಒಪ್ಪಂದದ ಮಾತುಗಳನ್ನಾಡಲು ಶಿವಾಜಿಯನ್ನು ಬರಹೇಳಿ ಮೋಸದಿಂದ ಅವನನ್ನು ಕೊಲ್ಲಿಸುವ ಪ್ರಯತ್ನ ಮಾಡಿದ. ಆದರೆ ಶಿವಾಜಿಯದೇ ಮೇಲುಗೈಯಾಗಿ ಅಫೇಲ್‌ಖಾನ್ ಮರಣಿಸಿದ. ದೆಹಲಿಯ ಸಾಮ್ರಾಟನಾಗಿದ್ದ ಔರಂಗಜೇಬ್ ದಕ್ಕನ್ ಪ್ರದೇಶದ ತನ್ನ ಅಧಿಕಾರಿ ಷಯಿಸ್ತಾಖಾನ್‌ನನ್ನು 1663ರಲ್ಲಿ ಶಿವಾಜಿಯನ್ನು ನಿಗ್ರಹಿಸಲು ಕಳಿಸಿದ. ಆದರೆ ಶಿವಾಜಿ ಅವನನ್ನು ಸೋಲಿಸಿದ. 1664ರಲ್ಲಿ ಉತ್ತಮ ಬಂದರು ಸೂರತ್‌ನ್ನು ಮುತ್ತಿ ಅಪಾರ ಹಣವನ್ನು ವಶಪಡಿಸಿಕೊಂಡ. ಔರಂಗಜೇಬ್ ಇದರಿಂದ ಕೋಪಗೊಂಡು ಅಂಬರದ ರಾಜ ಜಯಸಿಂಹನನ್ನು ಶಿವಾಜಿಯ ಪ್ರಾಬಲ್ಯವನ್ನು ಮುರಿಯಲು ಕಳಿಸಿದ. 1665ರಲ್ಲಿ ಶಿವಾಜಿ ಯುದ್ಧದಲ್ಲಿ ಸೋತು ತನ್ನ ಹಲವು ಕೋಟೆಗಳನ್ನು ಮೊಘಲರಿಗೆ ಒಪ್ಪಿಸಬೇಕಾಯಿತು. ಒಪ್ಪಂದ ಮಾಡಿಕೊಳ್ಳಲು ಶಿವಾಜಿಯನ್ನು ದೆಹಲಿಗೆ ಬರಮಾಡಿಕೊಂಡ ಔರಂಗಜೇಬ್ ಅವನನ್ನು ಬಂಧನದಲ್ಲಿರಿಸಿದ. ಶಿವಾಜಿ ಸೆರೆಯಿಂದ ತಪ್ಪಿಸಿಕೊಂಡು ಬಂದು ತಾನು ಮೊಘಲರಿಗೆ ಒಪ್ಪಿಸಿದ್ದ ಕೋಟೆಗಳನ್ನು ಪುನಃ ಗೆದ್ದ. 1670ರಲ್ಲಿ ಮತ್ತೆ ಸೂರತ್ ಮೇಲೆ ದಾಳಿ ಮಾಡಿ ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಿದ.

    1674ರಲ್ಲಿ ತಾನೇ ನಿರ್ಮಿಸಿದ ‘ರಾಯಗಢ’ದಲ್ಲಿ ಶಿವಾಜಿಯ ಪಟ್ಟಾಭಿಷೇಕ ನಡೆಯಿತು. ಅವನು “ಛತ್ರಪತಿ’ಯಾದ ದಕ್ಷಿಣದ ವೆಲ್ಲೂರು, ಜಿಂಜಿ ಮೊದಲಾದ ಆಯಕಟ್ಟಿನ ಕೋಟೆಗಳನ್ನು ಜಯಿಸಿದ. 1680ಏಪ್ರಿಲ್ 14ರಂದು ಶಿವಾಜಿ ಮರಣಿಸಿದ.

    ಶಿವಾಜಿ ದಕ್ಷ ಸೇನಾಪತಿ, ಸಮರ್ಥ ಆಡಳಿತಗಾರನಾಗಿದ್ದ. 8 ಜನ ಮಂತ್ರಿಗಳು ಅವನಿಗೆ ಆಡಳಿತದಲ್ಲಿ ಸಲಹೆ ನೀಡುತ್ತಿದ್ದರು. ಹಿಂದೂಧರ್ಮದ ಬಗೆಗೆ ಅಪಾರ ಶ್ರದ್ದೆಯಿತ್ತು. ಇತರ ಧರ್ಮಗಳನ್ನು ಆದರಿಸುತ್ತಿದ್ದ. ಮೊಘಲರು ಮತ್ತು ದಖನ್ನಿನ ಸುಲ್ತಾನರೊಡನೆ ಹೋರಾಡಿ, ಮಹಾರಾಷ್ಟ್ರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಹಿಂದೂ ಸಾಮ್ರಾಜ್ಯವನ್ನು ಕಟ್ಟಿ, ಹಿಂದೂ ಧರ್ಮವನ್ನು ಪೋಷಿಸಿದ ಕೀರ್ತಿ, ಗೌರವ ಛತ್ರಪತಿ ಶಿವಾಜಿಯದು.

    Leave a Reply

    Your email address will not be published. Required fields are marked *