- ಕಲೆ ಎಂದರೇನು?
- ಅನುಕರಣೆ
- ಗವಿ ಮಾನವನ ಕಲಾಸೃಷ್ಟಿ
- ಅಭಿವ್ಯಕ್ತಿಯ ಆಸಕ್ತಿ
- ಪರಸ್ಪರ ಪ್ರಭಾವ
ಮಾನವನ ಕ್ರಿಯಾ ಶಕ್ತಿಯ ಕುಶಲ ಅಭಿವ್ಯಕ್ತಿಯೇ ಕಲೆ. ಇಂಥ ಅಭಿವ್ಯಕ್ತಿಯ ಹಂಬಲ ಮಾನವನ ಹುಟ್ಟುಗುಣ. ಇದು ಬೇರೆ ಬೇರೆ ರೀತಿಯಲ್ಲಿ ಪ್ರಕಟಗೊಂಡಿದೆ. ಸುಂದರ ಗುಲಾಬಿಯನ್ನು ಕಂಡಾಗ ಮನಸ್ಸಿಗೆ ಸಂತೋಷವಾಗುತ್ತದೆ. ಅತ್ಯುತ್ತಮ ಶಿಲ್ಪ, ಚಿತ್ರ, ಸಂಗೀತ ಮುಂತಾದುವು ನಮಗೆ ಆನಂದವನ್ನು ಕೊಡಬಲ್ಲವು.
ಸುತ್ತಮುತ್ತಲಿನ ಪರಿಸರ, ಘಟನೆ, ಪ್ರಸಂಗ-ಇವು ಮಾನವನಲ್ಲಿ ಸುಪ್ತವಾಗಿರುವ ಕಲಾಪ್ರಜ್ಞೆ ಹೊರಹೊಮ್ಮಲು ಸಹಾಯಕವಾಗುತ್ತವೆ, ಇದರಲ್ಲಿ ಮನಸ್ಸಿನ ಮೇಲೆ ಅಧಿಕ ಪ್ರಭಾವ ಬೀರುವಂಥದನ್ನು ಮಾನವ ಚಿತ್ರಿಸುವ ಪ್ರಯತ್ನ ನಡೆಸುತ್ತಾನೆ. ಪ್ರಕೃತಿಯನ್ನು ಮತ್ತು ಅದು ಪ್ರಚೋದಿಸುವ ಭಾವನೆಗಳನ್ನು ಅನುಕರಿಸಿ ಅದರ ಪ್ರತಿ ಕೃತಿಗಳನ್ನು ಚಿತ್ರಿಸಲು ರೂಪಿಸಲು ಪ್ರಯತ್ನಿಸುತ್ತಾನೆ. ಅನುಕರಣೆ ಕಲಾಸೃಷ್ಟಿಯ ಒಂದು ಅವಿಭಾಜ್ಯ ಅಂಗ.
ಅನುಕರಣೆಯಿಂದ ಮಾನವನ ಕಲಾಸೃಷ್ಟಿ ಆರಂಭವಾಯಿತು. 25-30 ಸಾವಿರ ವರ್ಷಗಳ ಹಿಂದೆ ಗವಿ ಮಾನವ ತನ್ನ ಪರಿಸರ, ಮತ್ತು ಜೀವನಾನುಭವಗಳಿಂದ ಪ್ರೇರಿತನಾಗಿ ತಾನು ವಾಸಮಾಡುತ್ತಿದ್ದ ಗವಿಗಳ ಬಂಡ, ಗೋಡೆಗಳ ಮೇಲೆ ಚಿತ್ರಗಳನ್ನು ಬರದ. ಅನಂತರ ನದಿ, ಜಲಾನಯನ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾಗಲೂ ಸಹ ತನ್ನ ಈ ಕಲಾ ಸಂಸ್ಕೃತಿ, ಕಲಾ ದೃಷ್ಟಿ, ಕಲಾ ಸೃಷ್ಟಿಗಳನ್ನು ಮುಂದುವರಿಸಿಕೊಂಡು ಬಂದಿರುವುದನ್ನು ಗಮನಿಸಬಹುದು, ಚಿತ್ರ ಮಾಧ್ಯಮಗಳ ಜೊತೆಗೆ ಮಣ್ಣು, ಶಿಲೆ, ಲೋಹ-ಇತ್ಯಾದಿ ಉಪಯೋಗಿಸಿಕೊಂಡು ಮೂರ್ತಿ ನಿರ್ಮಾಣ, ಮುದ್ರಿಕಾ ರಚನೆ ಮುಂತಾದುವುಗಳಲ್ಲಿ ಪರಿಣತಿ ಪಡೆದಿರುವುದನ್ನು ಗಮನಿಸಬಹುದು,
ನಾವು ಗವಿ ಮಾನವ ಚಿತ್ರಿಸಿರುವ ಚಿತ್ರಗಳನ್ನು ಕಂಡಾಗ ಅವನಿಗೆ ಹಾಡು, ನೃತ್ಯಗಳಲ್ಲಿ ಆಸಕ್ತಿ ಇತ್ತು ಎಂಬುದನ್ನು ಗುರುತಿಸಬಹುದು. ಮಾನವನ ಬೇರೆ ಬೇರೆ ಮಾನಸಿಕ ಶಕ್ತಿಗಳು ಕ್ರಮೇಣ ವಿಕಾಸಗೊಂಡು ಅವನಲ್ಲಿ ಸಂಗೀತ, ಕುಣಿತದಲ್ಲಿನ ಆಸಕ್ತಿ ಅಭಿವೃದ್ಧಿಗೊಂಡಿರುವ ಸಾಧ್ಯತೆಗಳಿವೆ. ಹೀಗೆ ಸುಮಾರು ಕ್ರಿ.ಪೂ. ಎರಡು ಮೂರು ಸಾವಿರ ವರ್ಷಗಳಷ್ಟು ಹಿಂದೆಯೇ ವಿಶ್ವದ ವಿವಿಧ ಭಾಗಗಳ ಜನರು ಚಿತ್ರ, ಶಿಲ್ಪ, ವಾಸ್ತುಶಿಲ್ಪ, ನೃತ್ಯ, ಸಂಗೀತ ಕಲೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ಪ್ರಗತಿ ಸಾಧಿಸಿರುವುದನ್ನು ಕಾಣಬಹುದು.
ಬೇರೆ ಬೇತ್ರ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರ ಮಧ್ಯೆ ಸಂಪರ್ಕ ಬೆಳಡಂತ ಪರಸ್ಪರ ಕೌಶಲ್ಯ ಹೊಂದಿದವರ ಕಲಾತ್ಮಕ ಸಾಧನೆಗಳು ಬೇರೆ ಬೇರೆ ಗುಂಪಿನವರ ಕಲಾಪ್ರವೃತ್ತಿಗಳ ಮೇಲೆ ಪ್ರಭಾವ ಬೀರಿದವು. ಈ ಕಾರಣದಿಂದಾಗಿ ನೂತನ ಕಲಾ ಸಂಪ್ರದಾಯಗಳು ಹುಟ್ಟಿಕೊಂಡವು, ಉದಾಹರಣೆಗಾಗಿ ಗ್ರೀಸ್ ಜನರು ರೂಢಿಸಿ ಬೆಳೆಸಿಕೊಂಡು ಬಂದಿದ್ದ ಶಿಲ್ಪ, ವಾಸ್ತುಶಿಲ್ಪ ಸಂಗೀತ ಇತ್ಯಾದಿ ಥೀಮ್ ಜನರ ಮೇಲೆ ಪ್ರಭಾವ ಬೀರಿದವು, ಈಮನರು ಈ ಕಲೆಯಲ್ಲಿ ತಮ್ಮದೇ ವಿಶಿಷ್ಟ ರೀತಿಯ ಪರಿಣತಿಯನ್ನು ಪಡೆದರು. ನವೋದಯ ಕಾಲದಲ್ಲಿ ಇಟಲಿಯಲ್ಲಿ ಬೆಳೆದ ಚಿತ್ರಕಲೆ ಡ್ರಲೋಪಿನ ಚಿತ್ರಕಲೆಯ ಬೆಳವಣಿಗೆಗೆ ಸಹಾಯಕವಾಯಿತು. ಇದೇ ರೀತಿ ಭಾಗ್ರತೀತು ಶಿಲ್ಪ, ನೃತ್ಯ, ಸಂಗೀತ ಏಷ್ಯಾ ಖಂಡದ ಬೇರೆ ಬೇರೆ ಪ್ರದೇಶಗಳ ಮೇಲೆ ಪ್ರಭಾವ ಬೀರಿರುವುದನ್ನು ಗಮನಿಸಬಹುದು.
ಮಾನವ ತನ್ನ ಹೃದಯ ಮನಸ್ಸುಗಳಲ್ಲಿ ಅರಳಿದ ಭಾವನೆಗಳನ್ನು ತನ್ನ ಬುದ್ದಿ, ಕೌಶಲ್ಯಕ್ಕೆ ಅನುಗುಣವಾಗಿ ಅಭಿವ್ಯಕ್ತಿಗೊಳಿಸುತ್ತಾ ಬಂದಿದ್ದಾನೆ. ನಾಲ್ಕು ಜನರಿಗೆ ಮೆಚ್ಚುಗೆಯಾಗುವಂತ ತನ್ನ ಅಭಿವ್ಯಕ್ತಿಯನ್ನು ಪ್ರಕಟಿಸುತ್ತಾ ಬಂದಿದ್ದಾನೆ. ಇದಕ್ಕಾಗಿ ಹೊಸ ಹೊಸ ವಿಧಾನಗಳು, ತಂತ್ರಗಳನ್ನು ರೂಪಿಸಿಕೊಂಡಿರುವುದು ಸ್ಪಷ್ಟ, ಕಲೆ ಮಾನವ ಜೀವನದ ಒಂದು ಅನಿವಾರ್ಯ ಅಂಗವಾಗಿದೆ. ತನ್ನ ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ಆಸಕ್ತಿ ಮಾನವನಲ್ಲಿ ಇರುವವರೆಗೆ ಕಲಾಸೃಷ್ಟಿಯ ಕೆಲಸ ನಿರಂತರವಾಗಿ ನಡೆಯುತ್ತಿರುತ್ತದೆ.
I like this website its a master peace ! Glad I observed this on google .