Kannada Essay on Indira Gandhi – ಇಂದಿರಾ ಗಾಂಧಿ

    Kannada Essay on Indira Gandhi

    ಇಂದಿರಾ ಪ್ರಿಯದರ್ಶಿನಿ ಜವಾಹರಲಾಲ ನೆಹರೂ ಮತ್ತು ಕಮಲಾನೆಹರೂ ಅವರ ಒಬ್ಬಳೇ ಮಗಳು. 1917 ನವೆಂಬರ್ 19 ರಂದು ಅಲಹಾಬಾದ್‌ನಲ್ಲಿ ಜನನ. ತಾತ ಪ್ರಸಿದ್ದ ವಕೀಲ ಮೋತಿಲಾಲ ನೆಹರು. ಚಿಕ್ಕ ವಯಸ್ಸಿನಲ್ಲೇ ರಾಜಕೀಯವನ್ನು ಕಂಡಿದ್ದಳು. ತನ್ನ ಒಂಬತ್ತನೇ ವರ್ಷದಲ್ಲಿ ಹೆತ್ತವರೊಂದಿಗೆ ಯೂರೋಪ್, ರಷ್ಯಾದೇಶಗಳ ಪ್ರವಾಸ ಮಾಡಿದಳು. ಹನ್ನೊಂದನೇ ವಯಸ್ಸಿನಲ್ಲಿ ಚರಖಾ ಸಂಘದ ಮಕ್ಕಳ ಶಾಖೆಯನ್ನು ಆರಂಭಿಸಿದಳು. 1930ರಲ್ಲಿ ಕಿರಿಯರ ವಾನರ ಸೇನೆಯನ್ನು ಆರಂಭಿಸಿ ಅಸಹಕಾರ ಚಳವಳಿಯ ಕಾಲದಲ್ಲಿ ಸೇವೆ ಸಲ್ಲಿಸಿದಳು.

    ಪುಣೆ, ಶಾಂತಿನಿಕೇತನ, ಸ್ವಿಟ್ಟರ್‌ಲೆಂಡ್ ಹಾಗೂ ಆಕ್ಸ್‌ಫರ್ಡ್‌ನಲ್ಲಿ ಶಿಕ್ಷಣ ಪಡೆದಳು. ಈ ಮೊದಲೇ ತಂದೆಯು ಜೈಲಿನಿಂದ ಬರೆಯುತ್ತಿದ್ದ ಪತ್ರಗಳಿಂದ ಪ್ರಪಂಚದ ಸಾಮಾನ್ಯ ಜ್ಞಾನವನ್ನು ಪಡೆದಳು ಆಕೆಯ 19ನೇ ವಯಸ್ಸಿನಲ್ಲಿ ತಾಯಿ ನಿಧನರಾದರು.

    ಇಂದಿರಾ 1938ರಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸಿನ ಸದಸ್ಯೆಯಾದರು. 1942ರಲ್ಲಿ ಫಿರೋಜ್‌ಗಾಂಧೀಯೊಡನೆ ವಿವಾಹವಾಯಿತು. ವಿವಾಹವಾಗಿ ಕೆಲವೇ ತಿಂಗಳಲ್ಲಿ ‘ಚಲೇಜಾವ್ ಚಳವಳಿಯಲ್ಲಿ ಭಾಗವಹಿಸಿದರು. ಇವರಿಗೆ ಇಬ್ಬರು ಗಂಡುಮಕ್ಕಳು. ರಾಜೀವ್ (1944) ಮತ್ತು ಸಂಜಯ 91946)

    1947ರಲ್ಲಿ ತಂದ ಜವಾಹರಲಾಲ ನೆಹರೂ ಭಾರತದ ಪ್ರಧಾನಿಯಾದರು. ಇಂದಿರಾಗಾಂಧಿ ಅವರು ಮನೆಗೆ ಬಂದ ಅತಿಥಿಗಳನ್ನು ಉಪಚರಿಸಿಸುವ ಹೊಣೆ ಹೊತ್ತರು. 1955ರಲ್ಲಿ ಇಂದಿರಾಗಾಂಧಿ ಕಾಂಗ್ರೆಸ್ ಕಾರ್ಯಸಮಿತಿಗೆ ಆಯ್ಕೆಯಾದರು. 1961ರಲ್ಲಿ ಕಾಂಗ್ರೆಸ್ ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾದರು. 1960 ರಲ್ಲಿ ಪತಿ ನಿಧನರಾದರು. 1964ರಲ್ಲಿ ತಂದೆ ಮರಣಿಸಿದರು.

    ಶ್ರೀಮತಿ ಗಾಂಧೀಜಿಯವರು ಶಾಸ್ತ್ರೀಯವರ ಮರಣಾನಂತರ 1966ರಲ್ಲಿ ಸ್ವತಂತ್ರ ಭಾರತದ ಪ್ರಧಾನ ಮಂತ್ರಿಯಾದರು.

    1971ರಲ್ಲಿ ಮರು ಚುನಾವಣೆಯಾದಾಗ ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷ ಅಧಿಕ ಮತ ಗಳಿಸಿತು. ಅವರು ಮತ್ತೊಮ್ಮೆ ಪ್ರಧಾನಿಯಾದರು. ಈ ಮೊದಲು ನಡೆದ ರಾಷ್ಟದ 14 ಬ್ಯಾಂಕುಗಳ ರಾಷ್ಟ್ರೀಕರಣ ಅವರ ಸಮಾಜವಾದಿ ನಿಲುವಿಗೆ ನಿದರ್ಶನವಾಗಿತ್ತು. ‘ದಾರಿದ್ರ ನಿರ್ಮೂಲನ’ “ಗರೀಬಿ ಹಟಾವೋ” ಕಾಂಗ್ರೆಸಿನ ಕಾರ್ಯಕ್ರಮಗಳ ಗುರಿಯಾಗಿತ್ತು.

    1971ರ ಡಿಸೆಂಬರ್ 4 ರಂದು ಪಾಕಿಸ್ತಾನ ಇದ್ದಕ್ಕಿದ್ದಂತೆ ಭಾರತದ ಮೇಲೆ ದಾಳಿ ಮಾಡಿತು. ಭಾರತದ ಪಡಗಳು ಬಾಂಗ್ಲಾ ದೇಶದೊಳಕ್ಕೆ ನುಗ್ಗಿ 13 ದಿನಗಳಲ್ಲಿ ಪಾಕಿಸ್ತಾನದ ಸೇನೆ ಶರಣಾಗುವಂತೆ ಮಾಡಿದವು 17 ದಿನಗಳ ಯುದ್ಧದ ಬಳಿಕ ಎಲ್ಲ ರಂಗದಲ್ಲೂ ಪಾಕಿಸ್ತಾನ ಸೋಲನ್ನೊಪ್ಪಿತು. ಭಾರತದ ನಾಯಕ ಶಕ್ತಿ, ಸೇನಾಶಕ್ತಿ ಪ್ರಪಂಚದ ಮಚ್ಚುಗೆಗೆ ಪಾತ್ರವಾದವು, ಈ ಸಂದರ್ಭದಲ್ಲಿ ರಾಷ್ಟ್ರಪತಿಯವರು ಇಂದಿರಾಗಾಂಧಿ ಅವರಿಗೆ ಭಾರತ ರತ್ನ” ದೇಶದ ಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಿದರು ಅವರ ನಾಯಕತ್ವ, ಧೈರ್ಯ, ಧೀಶಕ್ತಿ ಹಾಗೂ ರಾಷ್ಟ್ರಪ್ರೇಮವನ್ನು ಮುಕ್ತಕಂಠದಿಂದ ಪ್ರಶಂಸ ಮಾಡಿದರು. ಇಂದಿರಾಗಾಂಧಿಯವರ ಗೌರವ, ಪ್ರತಿಷ್ಠ ಅಂತರರಾಷ್ಟ್ರೀಯ ಕ್ಷೇತ್ರದಲ್ಲೂ ಪ್ರಶಂಸೆಗೆ ಪಾತ್ರವಾದವು. ಕೆಲಕಾಲ ಇಂದಿರಾಗಾಂಧಿಯವರು ಆಲಿಪ್ತ ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

    ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಸರಳ ಜೀವನ, ಉದಾತ್ತ ವಿಚಾರ, ಅಪ್ರತಿಮ ದೇಶಪ್ರೇಮವನ್ನು ಮೈಗೂಡಿಸಿಕೊಂಡಿದ್ದ ಇಂದಿರಾಗಾಂಧಿ ತಮ್ಮ ಅಂಗರಕ್ಷಕನ ಗುಂಡೇಟಿನಿಂದ 1984 ಅಕ್ಟೋಬರ್ 31 ರಂದು ಅಸುನೀಗಿದರು. ಅವರ ಪಾರ್ಥಿವ ಶರೀರದ, ಅಂತ್ಯಕ್ರಿಯ ಯಮುನಾ ನದಿಯ ದಂಡೆಯ ಮೇಲೆ ನಡೆಯಿತು. ಆ ಜಾಗವನ್ನು ಶಕ್ತಿಸ್ಥಳ’ ಎಂದೇ ಗುರುತಿಸಲಾಗುತ್ತಿದೆ.

    Leave a Reply

    Your email address will not be published. Required fields are marked *