ಬಾಲ್ಯದಿಂದಲೇ ಹುಡುಗರ ಜೊತೆ ಕತ್ತಿವರಸೆ, ಕುದುರೆ ಸವಾರಿ ಕಲಿತ ಲಕ್ಷ್ಮೀಬಾಯಿ 1830ರ ನವೆಂಬರ್ 19 ರಂದು ಜನಿಸಿದಳು. ತಂದೆ ಮೋರೋಪಂತ. ಪೇಶ್ವ ಎರಡನೆಯ ಬಾಜೀರಾಯನ ಆಶ್ರಿತ. ಬಾಜೀರಾಯ ಪೇಶ್ವ ಸ್ಥಾನ ಕಳೆದುಕೊಂಡ ನಂತರ ಚಿತ್ತೂರಿಗೆ ಬಂದಾಗ ಮೋರೋಪಂತ ಮಗಳ ಜೊತೆ ಅವನನ್ನು ಹಿಂಬಾಲಿಸಿದ. ಲಕ್ಷ್ಮೀಬಾಯಿಯ ಹುಟ್ಟಿದ ಹೆಸರು ಮಣಿಕರ್ಣಿಕಾ, ಬಾಜೀರಾಯನ ಮಕ್ಕಳ ಜೊತೆ ಯುದ್ಧವಿದ್ಯೆ ಕಲಿತಳು. ಝಾನ್ಸಿಯ ರಾಜ ಗಂಗಾಧರ ನವಲ್ಕರ್ ಜೊತೆ ಅವಳ ವಿವಾಹ ನಡೆಯಿತು. ಗಂಡನ ಮನೆಯವರು ಅವಳನ್ನು ಲಕ್ಷ್ಮೀಬಾಯಿ ಎಂದು ಕರೆದರು. ಹುಟ್ಟಿದ ಮಗು ಮರಣಿಸಿತು. ಇದೇ ಚಿಂತೆಯಿಂದ ನವಲ್ಕರ್ ಕಾಯಿಲೆಯಿಂದ ನರಳಿ 1956ನವಂಬರ್ 21 ರಂದು ಮರಣಿಸಿದ. ಅನಂತರ ಆಕ ತನ್ನ ಅಕ್ಕನ ಮಗನನ್ನು ದತ್ತು ತೆಗೆದುಕೊಂಡಳು. ಬ್ರಿಟಿಷರು ಈ ದತ್ತು ಸ್ವೀಕಾರವನ್ನು ನಿರಾಕರಿಸಿದರು.
ಬ್ರಿಟಿಷರ ವಿರುದ್ದ ಹೋರಾಟ ನಡೆಸಲು ಸಾಧುವೊಬ್ಬ ರಾಣಿಯ ಬಳಿ ಬಂದು ಧನ ಸಹಾಯ ಕೇಳಿದ. ಆಕೆ ತನ್ನ ಸ್ವಂತ ಖಜಾನೆಯಿಂದ ಹಣ ಕೊಟ್ಟಳು. ಸುದ್ದಿ ಬ್ರಿಟಿಷರಿಗೆ ತಿಳಿಯಿತು. ಆಕೆ ದಂಗೆಕೋರರ ಪಡೆಗೆ ಸೇರಿದವಳಂದು ಬ್ರಿಟಿಷರು ಆರೋಪಿಸಿದರು. ರಾಜ್ಯಾಡಳಿತವನ್ನು ತಮಗೆ ಬಿಟ್ಟುಕೊಡಲು ಅವರು ಒತ್ತಾಯಿಸಿದರು. ರಾಣಿ ತನ್ನ ಪ್ರಜೆಗಳು ಮತ್ತು ಸಂಸ್ಥಾನಿಕರ ನೆರವಿನಿಂದ ಬ್ರಿಟಿಷರನ್ನು ಎದುರಿಸಲು ಸನ್ನದ್ಧಳಾದಳು. ಅಗತ್ಯವಾದ ಯುದ್ಧ ಸಾಮಗ್ರಿಗಳನ್ನು ಕೂಡಿ ಹಾಕಿದಳು. ಸರ್ ಹೂರೋಜ್ 1858 ಮಾರ್ಚ್ 22 ರಂದು ಝಾನ್ಸಿಯ ಮೇಲೆ ದಾಳಿ ನಡೆಸಿದ. ಲಕ್ಷ್ಮೀಬಾಯಿ ಅತ್ಯಂತ ದಕ್ಷತೆ, ಶಿಸ್ತು, ಅಪ್ರತಿಮ ಶೌರ್ಯದಿಂದ ಬ್ರಿಟಿಷರ ವಿರುದ್ದ ಹೋರಾಡಿದಳು. ಫಿರಂಗಿ ಹೊಡೆತದಿಂದ ಬಿರುಕು ಬಿಟ್ಟ ಕೋಟೆಯನ್ನು ಸರಿಪಡಿಸಲು ಹೆಂಗಸರು ಅವಿಶ್ರಾಂತವಾಗಿ ಶ್ರಮಿಸಿದರು. ಲಕ್ಷ್ಮೀಬಾಯಿ ಸ್ವತಃ ಎಲ್ಲೆಡೆ ಸಂಚರಿಸಿ ತನ್ನ ಸೈನಿಕರನ್ನೂ, ಜನರನ್ನೂ ಹುರಿದುಂಬಿಸಿದಳು. ಕೋಟೆಯನ್ನು ವಶಪಡಿಸಿಕೊಳ್ಳಲು ಬ್ರಿಟಿಷರು ಹೆಣಗಾಡಬೇಕಾಯಿತು. ತಾತ್ಯಾಟೋಪೆ ಲಕ್ಷ್ಮೀಬಾಯಿಯ ಸಹಾಯಕ್ಕೆ ಬಂದ. ಈಗ ಬ್ರಿಟಿಷರೂ ಅವನೊಡನೆ ಹೋರಾಡುವುದು ಅನಿವಾರ್ಯವಾಯಿತು. ಕೊನೆಗೂ ಬ್ರಿಟಿಷರು ಎಲ್ಲ ಅಡ್ಡಿಆತಂಕಗಳನ್ನು ನಿವಾರಿಸಿಕೊಂಡು ಝಾನ್ಸಿಯನ್ನು ವಶಪಡಿಸಿಕೊಂಡರು. – ಲಕ್ಷ್ಮೀಬಾಯಿ ಮತ್ತು ಅವಳ ರಕ್ಷಕರು ವೈರಿಗಳ ಕೈಗೆ ಸಿಕ್ಕದೆ ತಪ್ಪಿಸಿಕೊಂಡರು. ಕಾಲ್ಪಿಗೆ ಹೋಗಿ ತಾತ್ಯಾಟೋಪೆಯನ್ನು ಸೇರಿಕೊಂಡರು. ಬ್ರಿಟಿಷರು ಕಾಲ್ಪಿಯ ಮೇಲೆ ದಾಳಿ ಮಾಡಿ ಅದನ್ನು ತಮ್ಮ ವಶಪಡಿಸಿಕೊಂಡರು. ಬ್ರಿಟಿಷರ ಸ್ನೇಹಿತನಾಗಿದ್ದ ಸಿಂಧ್ಯದ ರಾಜಧಾನಿ ಗ್ವಾಲಿಯರ್ ಮೇಲೆ ಲಕ್ಷ್ಮೀಬಾಯಿ ಮತ್ತು ತಾತ್ಯಾಟೋಪೆ ದಾಳಿ ನಡೆಸಿದರು. ಸಿಂಧ್ಯ ಮತ್ತು ಅವನ ಪರಿವಾರದವರು ತಪ್ಪಿಸಿಕೊಂಡು ಓಡಿಹೋದರು. ಗ್ವಾಲಿಯರ್ ಸುಲಭವಾಗಿ ಅವನ ವಶವಾಯಿತು.
ಬ್ರಿಟಿಷರು ತಮ್ಮ ಸ್ನೇಹಿತ ಸಿಂಧ್ಯನಿಗೆ ಸಹಾಯ ಮಾಡಲು ಗ್ವಾಲಿಯರ್‌ಗೆ ಮುತ್ತಿಗೆ ಹಾಕಿದರು. ಈ ಸಂದರ್ಭದಲ್ಲಿ 1858 ಜೂನ್ 17 ರಂದು ಬೆಳಿಗ್ಗೆ ವೈರಿಗಳ ಕಡೆಯಿಂದ ಬಂದ ಗುಂಡ ಲಕ್ಷ್ಮೀಬಾಯಿಗೆ ತಗುಲಿತು. ಝಾನ್ಸಿರಾಣಿ ಲಕ್ಷ್ಮೀಬಾಯಿ ಮರಣಿಸಿದಳು. ಕೋಟೆ ಮತ್ತು ಪೂಲ್‌ಬಾಗ್‌ಗಳ ನಡುವೆ ನದೀತೀರದಲ್ಲಿ ಆಕೆಯ ದೇಹಕ್ಕೆ ದಹನ ಸಂಸ್ಕಾರ ನಡೆಯಿತು.
Super maachi