ಡಾ. ಕಲ್ಪನಾ ಚಾವ್ಹಾ (1961-2003) ಭಾರತದ ಗುಜರಾತ್ ಪ್ರಾಂತದ ಕರ್ನಾಲ್ ಎಂಬಲ್ಲಿ ಜನಿಸಿದ ಕಲ್ಪನಾ ಚಾವ ಭಾರತೀಯ ಮೂಲದ ಅಮೆರಿಕಾ ನಾಸಾದ ಗಗನಯಾತ್ರಿ. 1976ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ‘ಏರೋನಾಟಿಕಲ್ ಇಂಜಿನಿಯರಿಂಗ್’ನಲ್ಲಿ ಪದವಿ ಪಡೆದ ಇವರು * 1982ರಲ್ಲಿ ಟೆಕ್ಸಾಸ್ ವಿಶ್ವವಿದ್ಯಾನಿಲಯದಿಂದ ‘ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗದಲ್ಲಿ ತಮ್ಮ ಉನ್ನತ ಪದವಿ ಪಡೆದರು. 1988ರಲ್ಲಿ ಇವರು ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಕೊಲರಡೂ ವಿಶ್ವವಿದ್ಯಾಲಯ ಪಿ.ಎಚ್.ಡಿ. ಪದವಿ ನೀಡಿ ಗೌರವಿಸಿದೆ.
1988ರಲ್ಲಿ ಅಮೆರಿಕಾದ ವಿಶ್ವದ ಪ್ರಸಿದ್ದ ನಾಸಾ (NASA) ಸಂಸ್ಥೆ ‘ಸಹಯೋಗದೊಂದಿಗೆ ಗತಿ ವಿಜ್ಞಾನದ (Fluid Dynamics) ವಿಷಯದಲ್ಲಿ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. 1993ರಲ್ಲಿ ಕ್ಯಾಲಿಫೋರ್ನಿಯಾದ ಓವರ್‌ಸೆಟ್ ಮೆಥಡ್ಸ್ ಇಂಕ್ (Overset Methods Inc.)ಗೆ ಉಪಾಧ್ಯಕ್ಷರಾಗಿ ಸೇರಿ ಅಲ್ಲಿ ಸಂಶೋಧನಾ ವಿಜ್ಞಾನಿಗಳ ಗುಂಪಿಗೆ ನಾಯಕರಾದರು. ಅಲ್ಲಿ ಗಗನಯಾನದ ವೇಳೆ ಮಾನವನ ಶರೀರದ ವಿವಿಧ ತೊಂದರೆಗಳ ಬಗ್ಗೆ ಅಧ್ಯಯನ ಪ್ರಾರಂಭಿಸಿದರು. ಹಲವಾರು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿ ಹೆಸರು ಗಳಿಸಿದರು. 1994ರಲ್ಲಿ ಚಾನ್ಹಾ NASAಗೆ ಅಧಿಕೃತವಾಗಿ ಸೇರಿದರು.
ಅವರು ಗಗನಯಾನ ಅಭ್ಯರ್ಥಿಯಾಗಿ ಗಗನಯಾತ್ರಿಕಳ 15ನೇ ಗುಂಪಿನಲ್ಲಿ ಮಾರ್ಚ್ 1995ರಲ್ಲಿ ಸೇರಿದರು. ಒಂದು ವರ್ಷದ ಕಠಿಣ ತರಬೇತಿ ಮುಗಿಸಿದ ಚಾಪ್ಲಾ ಅವರಿಗೆ EVA/Robotics ಮತ್ತು ಕಂಪ್ಯೂಟರ್ ವಿಭಾಗದಲ್ಲಿ ವೈಜ್ಞಾನಿಕವಾಗಿ ಸಂಶೋಧನೆ ಮಾಡುವ ಜವಾಬ್ದಾರಿ ವಹಿಸಲಾಯಿತು. ಸಂಶೋಧನೆ ಫಲಪ್ರದವಾಯಿತು. ಅಲ್ಲಿಂದ ಅವರಿಗೆ ಗಗನಯಾನದ ಹಲವಾರು ಘಟ್ಟಗಳು ಪ್ರಾರಂಭವಾಯಿತು ಎಂದೇ ಹೇಳಬೇಕು.
ನವೆಂಬರ್ 1996ರಲ್ಲಿ ಕಲ್ಪನಾ ಅವರನ್ನು ಮಿಷನ್ STS-87 ಗಗನ ನೌಕೆಯ (Prime Robotic Arm Operator) PRAO ಆಗಿ ನೇಮಿಸಲಾಯಿತು. ಅದೇ ಅವರ ಪ್ರಥಮ ಗಗನಯಾನ. ಅವರು STS-87 (1997)ಹಾಗೂ STS-107(2003)ರಲ್ಲಿ 30 ದಿನ 14 ಗಂಟೆ 54 ನಿಮಿಷ ಗಗನಯಾನ ಮಾಡಿದ್ದರು. STS-87 ನೌಕೆಯು ತನ್ನ ಯಾನದ ವೇಳೆ 252 ಬಾರಿ ಭೂಮಿಯನ್ನು ಪ್ರದಕ್ಷಿಣೆ ಹಾಕಿ, 6.5 ದಶಲಕ್ಷ ಮೈಲಿ ದೂರವನ್ನು 376ಘಂಟೆ ಹಾಗೂ 34 ನಿಮಿಷದಲ್ಲಿ ಕ್ರಮಿಸಿತ್ತು.
ಯಾರೂ ಊಹಿಸಲಾರದ ಒಂದು ಘಟನೆ ನಡೆದೇ ಹೋಗಿತ್ತು. ಫೆಬ್ರವರಿ 1, 2003ರಲ್ಲಿ ಕೊಲಂಬಿಯಾ ಗಗನನೌಕೆ ಭೂಮಿಗೆ ಮರಳುವಾಗ 16ನಿಮಿಷ ಮೊದಲೇ ಭೂಮಿಗೆ ಅಪ್ಪಳಿಸಿತು. ಅದರಲ್ಲಿದ್ದ ಗಗನಯಾನಿಗಳ ಜೊತ ಕಲ್ಪನಾಚಾಟ್ಲಾ ಕೂಡಾ ಅಸು ನೀಗಿದ್ದರು. 16ದಿನದ ಈ ಯಾನದಲ್ಲಿ ದಿನದ 24 ಗಂಟೆಗಳೂ ಗಗನಯಾನಿಗಳು ಸುಮಾರು 80 ಪ್ರಯೋಗಗಳನ್ನು ಮಾಡಿದ್ದರು. ಎಲ್ಲ ಪ್ರಯೋಗಗಳಲ್ಲಿಯೂ ಸಫಲರಾಗಿದ್ದರು.
ಭಾರತೀಯರಷ್ಟೇ ಏಕೆ ವಿಶ್ವದ ಪ್ರತಿಯೊಬ್ಬರೂ ಗೌರವಿಸಬೇಕಾದ ಮಹಿಳೆ ಕಲ್ಪನಾ ಚಾವ್ಹಾ ವಿಜ್ಞಾನಿಯಾಗಿ, ಗಗನಯಾನಿಯಾಗಿ ನಮ್ಮ ಮನಸ್ಸಿನಲ್ಲಿ ಅಮರರಾಗಿದ್ದಾರೆ.