Kannada Essay – ಜನಸಂಖ್ಯಾ ಸ್ಫೋಟ ಮತ್ತು ಅದರ ನಿಯಂತ್ರಣ ಪ್ರಬಂಧ (Population Explosion)

    Population Explosion

    Kannada essay on population explosion. This essay is divided into 5 sections for ease of read. ಜನಸಂಖ್ಯಾ ಸ್ಫೋಟ ಮತ್ತು ಅದರ ನಿಯಂತ್ರಣ ಪ್ರಬಂಧ.

    1. ಜನಸಂಖ್ಯೆ ಕೆಲವು ಅಂಕಿ ಅಂಶಗಳು
    2. ಜನಸಂಖ್ಯೆ ಹೆಚ್ಚಲು ಕಾರಣ
    3. ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆ.
    4. ಕುಟುಂಬ ಯೋಜನೆ
    5. ಉಪಸಂಹಾರ

    ಪ್ರಾರಂಭದ ದಿನಗಳಲ್ಲಿ ಮಾನವರು ಜಗತ್ತಿನ ಬೇರೆ ಬೇರೆ ಮೂಲಗಳಲ್ಲಿ ಹಂಚಿಹೋಗಿದ್ದರು. ಚಿಕ್ಕಚಿಕ್ಕ ಗುಂಪುಗಳಾಗಿ ಅಲೆದಾಡುತ್ತಾ ಆಹಾರ ಆತ್ಮರಕ್ಷಣೆಗಾಗಿ ಪ್ರಾಣಿಗಳ ಜೊತೆ ಹೋರಾಡುತ್ತಿದ್ದರು. ಮಾನವ ಒಂದು ಸ್ಥಳದಲ್ಲಿ ನೆಲೆಸಿ ಕೃಷಿ ಆಧರಿಸಿಕೊಳ್ಳುವ ಮೊದಲು ವಿಶ್ವದ ಜನಸಂಖ್ಯೆ ಎರಡು ಕೋಟಿಗಿಂತಲೂ ಕಡಿಮೆಯಿತ್ತು. 1960ರ ಹೊತ್ತಿಗೆ ವಿಶ್ವದ ಜನಸಂಖ್ಯೆ 300 ಕೋಟಿಗೂ ಅಧಿಕವಿತ್ತು. ಈ ಸಂಖ್ಯೆ ಹದಿನೇಳನೆಯ ಶತಮಾನದ ಮಧ್ಯದ ಜನಸಂಖ್ಯೆಗಿಂತ ಐದು ಪಟ್ಟು.1900ರ ಜನಸಂಖ್ಯೆಯ ಎರಡುಪಟ್ಟು ಹೆಚ್ಚು ಈಗ, ಇರುವ ಜನರನ್ನು ಜಗತ್ತಿನ ಭೂಮಿಯ ಮೇಲೆ ಸಮನಾಗಿ ಹಂಚಿದರೆ ಪ್ರತಿ ಚದರ ಕಿಲೋಮೀಟರಿಗೆ 53 ಜನರಂತೆ ಇರುತ್ತಿದ್ದರು. ಆದರೆ ಪ್ರಪಂಚದ ಹೆಚ್ಚಿನ ಭೂಭಾಗ ನಿರ್ಜನವಾಗಿದೆ. ಮರುಭೂಮಿ ಮತ್ತು ಪರ್ವತ ಪ್ರದೇಶಗಳಲ್ಲಿ ಜನಸಂಖ್ಯೆ ತುಂಬ ವಿರಳವಾಗಿದೆ. ಫಲವತ್ತಾದ ಮಣ್ಣು ಮತ್ತು ಹಿತಕರವಾದ ವಾತಾವರಣವಿರುವ ಪ್ರದೇಶಗಳಲ್ಲಿ ಜನಸಂಖ್ಯೆ ತೀವ್ರಗತಿಯಲ್ಲಿ ಏರಿತು.

    ಪಶ್ಚಿಮ ಯೂರೋಪು, ಅಮೆರಿಕಾ, ಈಜಿಪ್ಟ್ನ ನೈಲ್ ನದಿ, ಜಾವಾ, ಚೀನಾ, ಜಪಾನ್ ಮತ್ತು ಭಾರತ ದಟ್ಟ ಜನಸಂಖ್ಯೆಯಿರುವ ಪ್ರದೇಶಗಳಾದವು. ಇಂದು ಭಾರತದ ಜನಸಂಖ್ಯೆ 100 ಕೋಟಿಗೂ ಹೆಚ್ಚಿದೆ. ಇದು ಇಡೀ ಅಮೆರಿಕ ಖಂಡದ ಜನಸಂಖ್ಯೆಗೂ ಹೆಚ್ಚು. ಆಫ್ರಿಕ ಖಂಡದ ಜನಸಂಖ್ಯೆಯ ದುಪ್ಪತ್ತು. ಜಗತ್ತಿನಲ್ಲಿ ಭಾರತಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ದೇಶವೆಂದರೆ ಚೀನಾದೇಶ ಮಾತ್ರ1967ರಲ್ಲಿ ವಿಶ್ವದ ಜನಸಂಖ್ಯೆ 385 ಕೋಟಿ 60 ಲಕ್ಷ ಜನಸಂಖ್ಯೆ ಹೀಗೆಯೇ ತೀವ್ರಗತಿಯಲ್ಲಿ ಏರುತ್ತಿದ್ದರೆ 2005ರ ಹೊತ್ತಿಗೆ 1800 ಕೋಟಿ ಆಗಬಹುದು. ಇದು ಈಗಿನ ಜನಸಂಖ್ಯೆಯ ಮೂರುಪಟ್ಟು,

    ಹೀಗೆ ಜನಸಂಖ್ಯೆ ಹೆಚ್ಚಲು ಅನೇಕ ಕಾರಣಗಳಿವೆ. ಪ್ರಾರಂಭದಲ್ಲಿ ಫಲವತ್ತಾದ ವಿಸ್ತಾರ ಪ್ರದೇಶದಲ್ಲಿ ಕೃಷಿ ಆರಂಭವಾಗುವ ಮೊದಲು ಕಮ್ಮಿ ಇತ್ತು. ಕೃಷಿ, ಮೀನುಗಾರಿಕೆ, ಪ್ರಾಣಿ ಸಾಕಾಣಿಕೆ ಬಂದ ಮೇಲೆ ಆಹಾರೋತ್ಪತ್ತಿ ಹೆಚ್ಚಾಗಿ ಜನಸಂಖ್ಯೆ ಏರತೊಡಗಿತು. ಉತ್ತಮ ಉಪಕರಣಗಳು, ವ್ಯವಸಾಯ ವಿಧಾನಗಳು ಹೆಚ್ಚು ಉಪಯೋಗಕ್ಕೆ ಬಂದಿತು. ವಿಜ್ಞಾನದ ಹೊಸ ಆವಿಷ್ಕಾರ, ಯಾಂತ್ರೀಕರಣ, ಜೀವನ ಸೌಕರ್ಯ ಹೆಚ್ಚಿದಂತೆ ಜನಸಂಖ್ಯೆ ಸಹ ಹೆಚ್ಚಿತು. 20ನೇ ಶತಮಾನದಲ್ಲಿ ವೈದ್ಯವಿಜ್ಞಾನ ವಿಸ್ಮಯ ರೀತಿಯಲ್ಲಿ ಬೆಳೆಯಿತು. ಜೀವ ನಿರೋಧಕ ಬಳಕೆಗೆ ಬಂದಿತು. ಜನರಲ್ಲಿ ಜಾಗೃತಿಗೊಂಡ ಆರೋಗ್ಯ ಪ್ರಜ್ಞೆಯಿಂದ ಭಯಂಕರ ರೋಗಗಳ ಹಾವಳಿ ಕಡಿಮೆಯಾಯಿತು. ಮನುಷ್ಯನ ಆಯಸ್ಸು ಮೊದಲಿಗಿಂತಲೂ ಹೆಚ್ಚಿತು.

    ಶಿಲಾಯುಗದ ಮಾನವನ ಸರಾಸರಿ ಜೀವನ ಅವಧಿ20 ವರ್ಷವಾಗಿದ್ದರೆ ಇಂದು ಯೂರೋಪ, ಅಮೆರಿಕದ ಜನ ಸರಾಸರಿ70 ವರ್ಷ ಬದುಕುತ್ತಾರೆ. ಹುಟ್ಟುವ ಜನರು ಹೆಚ್ಚಾಗಿ, ಸಾಯುವ ಜನರು ಕಮ್ಮಿಯಾದಂತೆ ಜನಸಂಖ್ಯೆ ಬೆಳೆಯತೊಡಗಿತು. ಈಗ ಮರಣಿಸುವವರ ಸಂಖ್ಯೆ ಹತ್ತು ಸಾವಿರಕ್ಕೆ 128ರಂತೆ 2010 ಇಸವಿ ಹೊತ್ತಿಗೆ ಹತ್ತು ಸಾವಿರಕ್ಕೆ 91 ರಷ್ಟು ಆಗಬಹುದು. ಇದರಿಂದ ವಿಶ್ವಜನಸಂಖ್ಯೆ ಮತ್ತಷ್ಟು ಏರುವುದು ಖಂಡಿತ.

    ಹೆಚ್ಚುತ್ತಿರುವ ಜನಸಂಖ್ಯೆಯಿಂದ ಆಹಾರ, ವಸತಿ, ಉಡುಪು, ಉದ್ಯೋಗ, ಜೀವನನಿರ್ವಹಣೆ, ಸೇವೆ-ಶುಶೂಷ ಇತ್ಯಾದಿ ಸಮಸ್ಯೆಗಳು ಬೃಹದಾಕಾರವಾಗಿ ಬೆಳೆಯುತ್ತಿವೆ. ಇದು ಹೀಗೆ ಬೆಳೆಯುತ್ತಿದ್ದರೆ ಜನರು ಹಸಿವು, ನೀರಡಿಕೆಯಿಂದ ಮರಣಿಸಬೇಕಾಗುತ್ತದೆ. ಆಧುನಿಕ ರೀತಿಯ ವ್ಯವಸಾಯ ವಿಧಾನಗಳಿಂದ ಎಷ್ಟು ಧಾನ್ಯ ಬೆಳೆದರೂ ವೃದ್ಧಿಸುತ್ತಿರುವ ಜನಸಂಖ್ಯೆಯೊಡನೆ ಸರಿದೂಗಿಸಲು ಸಾಧ್ಯವಾಗದು. ಇದರಿಂದಾಗಿ ನೈಸರ್ಗಿಕ ಅಥವಾ ಕೃತಕ ವಿಧಾನಗಳಿಂದ ಜನಸಂಖ್ಯೆಯನ್ನು ಮಿತಿಯಲ್ಲಿಟ್ಟುಕೊಳ್ಳುವುದು ಎಂದಿಗಿಂತಲೂ ಇಂದು ಅನಿವಾರ್ಯ.

    Leave a Reply

    Your email address will not be published. Required fields are marked *