ಗಣಪತಿ ನಿನ್ನ ಸ್ತುತಿ ಮಾಡತೀನಿ ಸಭೆಯಾಗ | Kannada Folk Song on Lord Ganesha

  ಗಣಪತಿ ನಿನ್ನ ಸ್ತುತಿ ಮಾಡತೀನಿ ಸಭೆಯಾಗ
  ಕೊಡು ಮತಿ ವಿದ್ಯೆಯ ದಯ ಕರುಣ
  ಝನನನ ನನನನ ಝಂಕಾರ ನುಡಿಸುತ
  ತಾಳದೊಳಗೆ ಮಾಡುವೆ ಶರಣ ||

  ಏಕದಂತ ಚತುರ್ಭುಜ ಶಂಖಚಕ್ರ ಹಿಡಿದುಕೊಂಡು
  ಸರ್ರರರ ಬಂದು ಇಳಿದ ಧರೆಯೊಳಗ
  ಹತ್ತಿ ಬಂದು ಇಲಿಯ ಮ್ಯಾಲ ಸುತ್ತಮುತ್ತ ಯಾರಿಲ್ಲ
  ಹೊತ್ತಿಗೆ ಹಿಡಿದಾನೊ ಬಲಗೈಯಾಗ ||

  ನೀತಿವಂತ್ರ ಮನೆಗ್ ಹೋಗಿ ಊಟ ಮಾಡಿ ಬರುವಾಗ
  ತತ್ತರ್ಸಾಡಿ ಬಿದ್ದ ನಡುದಾರಿಯೊಳಗ
  ಫಡಡಡ ಹೊಟ್ಟೆ ಒಡೆದು ಪಾಯಸ ಹೊರಗೆ ಬಂದು
  ಧಡಡಡ ತುಂಬಿದ್ ಕೆರೆ ಒಡೆದ್ಹಾಂಗ ||

  ಬಳಿಬಳಿದು ತುಂಬುತ್ತಾನೊ ಸರ ಹಿಡಿದು ಹಾಕುತ್ತಾನೊ
  ಚಂದ್ರಾನು ನೋಡಿ ನಕ್ಕ ಗಣಪತಿಗೆ
  ಅತಿಶಯ ಕೋಪದಿಂದ ಚಂದ್ರಮಗೆ ಹೇಳುತ್ತಾನೆ
  ಚೌತಿ ದಿನ ನೋಡಬಾರ್ದು ನಿಮ್ಮ ಕಿರಣ ||

  ಮಣ್ಣಿನ ಗಣಪತಿ ಮಾಡಿ ತಂದ ಗುಡಿಗಾರಂಗಪ್ಪ
  ಚಿನ್ನದ ಬಣ್ಣವ ಬಳಸಿದ ನಮ್ಮ ನೆರೆಕರೆ ಚಿನ್ನಪ್ಪ ||

  ಅಂಗಿಶಾಲನು ಹೊಲಿದು ಕೊಟ್ಟ ದರ್ಜಿ ಬಸವಪ್ಪ
  ಚೌತಿಯ ದಿನ ಶೃಂಗಾರವ ಮಾಡಿದ ನಮ್ಮ ದೊಡ್ಡಪ್ಪ ||

  ಎಳ್ಳಿನ ಉಂಡೆ ಅರಳು ಕಜ್ಜಾಯ ಗಣಪನ ಎದುರಲ್ಲಿ
  ತಿನ್ನಲು ಬಾಯನು ತೆರೆಯನು ನಮ್ಮ ಮಣ್ಣಿನ ಗಣಪತಿ ||

  ಚೆನ್ನಾಗಿ ತಿಂದೆವು ನಮ್ಮನು ಮಿಟಿಮಿಟಿ ನೋಡುತ ಕುಳಿತಿದ್ದ
  ಮೆಲ್ಲನೆ ಒಂದಿನ ಸಿಟ್ಟಲಿ ಗಣಪತಿ ನೀರಿಗೆ ಹಾರಿದ್ದ ||

  ನೀರಿನ ತಳದಲಿ ಚಿಂತಿಲಿ ಗಣಪತಿ ದಿನದಿನ ಕರಗಿದ್ದ
  ಮಣ್ಣಿನ ಗಣಪತಿ ಮಣ್ಣಿನೊಂದಿಗೆ ಸೇರಿ ಮಾಯವಾದ ||

  ಗಣಪತಿ ನಿನ್ನ ಸ್ತುತಿ ಮಾಡತೀನಿ ಸಭೆಯಾಗ | Lyrics in English

  gaNapati ninna stuti mADatIni sabheyAga
  koDu mati vidyeya daya karuNa
  Jananana nananana JaMkAra nuDisuta
  tALadoLage mADuve SaraNa ||

  EkadaMta chaturbhuja SaMKacakra hiDidukoMDu
  sarrarara baMdu iLida dhareyoLaga
  hatti baMdu iliya myAla suttamutta yArilla
  hottige hiDidAno balagaiyAga ||

  nItivaMtra maneg hOgi UTa mADi baruvAga
  tattarsADi bidda naDudAriyoLaga
  PaDaDaDa hoTTe oDedu pAyasa horage baMdu
  dhaDaDaDa tuMbid kere oDed~hAMga ||

  baLibaLidu tuMbuttAno sara hiDidu hAkuttAno
  caMdrAnu nODi nakka gaNapatige
  atiSaya kOpadiMda caMdramage hELuttAne
  chouti dina nODabArdu nimma kiraNa ||

  maNNina gaNapati mADi taMda guDigAraMgappa
  chinnada baNNava baLasida namma nerekare channappa ||

  aMgishAlanu holidu koTTa darji basavappa
  choutiya dina shRuMgArava mADida namma doDDappa ||

  eLLina uMDe araLu kajjAya gaNapana eduralli
  tinnalu bAyanu tereyanu namma maNNina gaNapati ||

  chennAgi tiMdevu nammanu miTimiTi nODuta kuLitidda
  mellane oMdina siTTali gaNapati nIrige hAridda ||

  nIrina taLadali chiMtili gaNapati dinadina karagidda
  maNNina gaNapati maNNinoMdige sEri mAyavAda ||

  Leave a Reply

  Your email address will not be published. Required fields are marked *