ಪ್ರಬಂಧ ಬರೆಯುವುದು ಹೇಗೆ? How to Write Competitive Kannada Essays

ಕೇಂದ್ರ ಹಾಗೂ ರಾಜ್ಯ ಲೋಕಸೇವಾ ಆಯೋಗಗಳು ನಡೆಸುವ ನಾಗರಿಕ ಸೇವಾ ಪರೀಕ್ಷೆ, ಗೆಜೆಟೆಡ್‌ ಪ್ರೊಬೇಷನರಿ ಪರೀಕ್ಷೆ, ಫಾರೆಸ್ಟ್‌ ಸರ್ವಿಸ್‌ ಇತ್ಯಾದಿ ಪರೀಕ್ಷೆಗಳ ಮುಖ್ಯ ಪತ್ರಿಕೆಗಳಲ್ಲಿವಿಸ್ತೃತ ರೂಪದ/ಪ್ರಬಂಧ ಮಾದರಿಯ ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ನಾಗರಿಕ ಸೇವಾ ಪರೀಕ್ಷೆಯಲ್ಲಿಸಮಾರು 1750 ಅಂಕಗಳಿಗೆ ಏಳು ಪತ್ರಿಕೆಗಳನ್ನು ಹಾಗೂ 600 ಅಂಕಗಳಿಗೆ ಎರಡು ಕಡ್ಡಾಯ ಭಾಷಾ ಪತ್ರಿಕೆಗಳನ್ನು ವಿಸ್ತೃತ ರೂಪದ ಮಾದರಿಯಲ್ಲಿ ಕೇಳಲಾಗಿರುತ್ತದೆ.

ಪ್ರಬಂಧದಲ್ಲಿ ಪ್ರಮುಖವಾಗಿ ಎರಡು ಪ್ರಕಾರಗಳಿವೆ.

  • ಒಂದು ಸಾಮಾನ್ಯ ಪ್ರಬಂಧ
  • ಇನ್ನೊಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಪ್ರಬಂಧ

ಸಾಮಾನ್ಯ ಪ್ರಬಂಧವನ್ನು ನಾವು ಶಾಲಾ ಕಾಲೇಜುಗಳಲ್ಲಿಬರೆದಿರುವಂತಹುದು. ಇನ್ನೊಂದು ರೀತಿಯ ಪ್ರಬಂಧವಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಪ್ರಬಂಧಕ್ಕೆ ಉತ್ತರ ಬರೆಯುವಾಗ ಅಲ್ಲಿನಮಗೆ ಮುಖ್ಯವಾಗಿ ವಿಷಯದ ವಿವರಣೆಗೆ ಆದ್ಯತೆ ನೀಡಲಾಗುತ್ತದೆ. ಆದ್ದರಿಂದಾಗಿ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಬಂಧದಲ್ಲಿನಾವೀಣ್ಯತೆ ಹಾಗೂ ಪ್ರಸ್ತುತ ಪಡಿಸುವಿಕೆಯ ಅತಿ ಮಹತ್ವ ವಹಿಸುತ್ತದೆ.

ಶಾಲಾ-ಕಾಲೇಜುಗಳಲ್ಲಿಬರೆಯುವ ಉತ್ತರಗಳಿಗೂ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬರೆಯುವ ಉತ್ತರಗಳಿಗೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಬರವಣಿಗೆ ಕೌಶಲ್ಯ ಸ್ಪರ್ಧಾತ್ಮಕ ಪರೀಕ್ಷೆಗಳ ಸಫಲತೆಯಲ್ಲಿ ನಿರ್ಣಾಯಕ ಪಾತ್ರವನ್ನು ಹೊಂದುತ್ತದೆ. ಇದಕ್ಕಾಗಿ ಪರೀಕ್ಷೆಗೂ ಮುಂಚಿತವಾಗಿಯೇ ಸಾಕಷ್ಟು ಬರವಣಿಗೆಯ ಅಭ್ಯಾಸ ಮಾಡಿಕೊಳ್ಳುವುದು ಅನಿವಾರ್ಯ.

ಉತ್ತಮ ಪ್ರಬಂಧ ಬರೆಯಲು ಇದು ಗಮನವಿರಲಿ

ಮುಖ್ಯವಾಗಿ ಎರಡು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

  • ಪ್ರಶ್ನೆಯನ್ನು ಸರಿಯಾಗಿ ಓದಿಕೊಂಡು ಅರ್ಥಮಾಡಿಕೊಳ್ಳುವುದು
  • ಕೇಳಿರುವ ಪದಗಳ ಮಿತಿಯನ್ನು ಮೀರದಂತೆ ಉತ್ತರಗಳನ್ನು ಬರೆಯುವುದು

ಪ್ರತಿಯೊಂದು ಪ್ರಶ್ನೆಯು ಒಂದು ನಿರ್ದಿಷ್ಟವಾದ ಕೀ-ಪದವನ್ನು ಹೊಂದಿರುತ್ತದೆ. ಉದಾಹರಣೆಗೆ: ವಿಮರ್ಶಿಸಿ, ಟಿಪ್ಪಣಿ ಬರೆಯಿರಿ, ವಿಶ್ಲೇಷಿಸಿ, ಚರ್ಚಿಸಿ, ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ ಇತ್ಯಾದಿ. ಈ ಕೀ-ಪದಗಳು ಬಹಳ ಮುಖ್ಯವಾದವುಗಳು. ಇವುಗಳ ಅರ್ಥವನ್ನು ಅಭ್ಯರ್ಥಿಗಳು ಚೆನ್ನಾಗಿ ತಿಳಿದುಕೊಂಡಿರಬೇಕು.

ಬರವಣಿಗೆಯ ಅಭ್ಯಾಸದ ಮಹತ್ವ

ಎಷ್ಟೋ ಬಾರಿ ಪರೀಕ್ಷೆ ಬರೆದ ಅಭ್ಯರ್ಥಿಗಳು, ನಾನು ಎಲ್ಲಪ್ರಶ್ನೆಗಳಿಗೆ ಉತ್ತರಿಸಿದ್ದೆ. ಆದರೆ ಅಂಕಗಳೇ ಸಿಕ್ಕಿಲ್ಲಅಥವಾ ನಾನು ಬಹಳ ಕಷ್ಟಪಟ್ಟು ಬರೆದಿದ್ದೆ. ಕೇಳಿದ್ದಕ್ಕಿಂತ ಹೆಚ್ಚಾಗಿಯೇ ಉತ್ತರಗಳನ್ನು ಬರೆದಿದ್ದೆ. ಆದರೂ ಉತ್ತೀರ್ಣನಾಗಲು ಸಾಧ್ಯವಾಗಲಿಲ್ಲ. ಪರೀಕ್ಷಾ ವ್ಯವಸ್ಥೆಯೇ ಸರಿಯಿಲ್ಲವೆಂದು ಕೊರಗುವುದನ್ನು ನಾವು ಸಾಮಾನ್ಯವಾಗಿ ಕಂಡಿರುತ್ತೇವೆ. ಆದರೆ, ಅಭ್ಯರ್ಥಿಗಳು ಬೇರೆಯವರನ್ನು ಅಥವಾ ಪರೀಕ್ಷಾ ವ್ಯವಸ್ಥೆಯನ್ನು ದೂಷಿಸುವುದಕ್ಕೂ ಮುಂಚಿತವಾಗಿ, ತಮಗೆ ತಾವೇ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಬರವಣಿಗೆಯ ಅಂದ ಮತ್ತು ಬರೆಯುವ ವೇಗ

ವಿಸ್ತೃತ ಮಾದರಿಯ ಪ್ರಶ್ನೆಗಳನ್ನು ಉತ್ತರಿಸುವುದಕ್ಕೆ ನಿಮ್ಮ ಬರವಣಿಗೆ ಅಂದ ಉತ್ಕೃಷ್ಟವಾಗಿರಬೇಕೆಂದೇನೂ ಇಲ್ಲ. ಪ್ರಶ್ನೆಗೆ ಸಂಬಂಧಿತ ಉತ್ತರವನ್ನು ಮೌಲ್ಯಮಾಪಕರಿಗೆ ತಿಳಿಯುವಂತೆ ಮತ್ತು ನಿಮ್ಮ ಸ್ವಂತ ಪದಗಳಲ್ಲಿ ಮನವರಿಕೆಯಾಗುವಂತೆ ಸ್ಪಷ್ಟವಾಗಿ ಬರೆದರೆ ಸಾಕು.

ವೇಗವಾಗಿ ಬರೆಯುವ ಕಲೆ ಕೇವಲ ಸತತ ಅಭ್ಯಾಸದಿಂದ ಮಾತ್ರ ಸಾಧ್ಯವಾಗುತ್ತದೆ. ಪರೀಕ್ಷೆಗೂ ಮುಂಚಿತವಾಗಿ ನೀವು ಸಾಕಷ್ಟು ಮಾದರಿ ಪ್ರಶ್ನೆಗಳಿಗೆ ನಿಯಮಿತ ಸಮಯದಲ್ಲಿಉತ್ತರಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಹಾಗೂ ವಿಷಯ ತಜ್ಞರ ಬಳಿ ಸಲಹೆಯನ್ನು ಪಡೆಯಬೇಕು. ಸಾಕಷ್ಟು ಅಣಕು ಪರೀಕ್ಷೆಗಳನ್ನು ಬರೆದು ಅಭ್ಯಾಸ ಮಾಡಿ. ಹೀಗೆ ಮಾಡುವುದರಿಂದ ಮಾತ್ರ ನಿಮ್ಮ ಬರವಣಿಗೆಯ ವೇಗವನ್ನು ಸುಧಾರಿಸಿಕೊಳ್ಳಲು ಸಾಧ್ಯ.

ಸ್ಪಷ್ಟ ಹಾಗೂ ಸರಳ ಬರವಣಿಗೆ

ಪರೀಕ್ಷೆಯಲ್ಲಿ ಯಶಸ್ಸು ಸಿಗದೆ ಇರುವುದಕ್ಕೆ ಕಳಪೆ ಬರವಣಿಗೆ ಕೂಡ ಒಂದು ಮುಖ್ಯ ಕಾರಣ. ನಿಜವಾಗಿಯೂ ತಾನು ಪ್ರಶ್ನೆಯ ನಿರೀಕ್ಷೆಯಂತೆ ಉತ್ತರಗಳನ್ನು ಬರೆದಿದ್ದೇನೆಯೇ ಇಲ್ಲವೆ ಎಂಬುದನ್ನು ಕಂಡುಕೊಂಡು, ಮುಂದಿನ ಪರೀಕ್ಷೆಯಲ್ಲಿ ತಪ್ಪುಗಳು ಮರುಕಳಿಸದಂತೆ, ಯೋಚನೆ ಮಾಡಿ ಉತ್ತರಗಳನ್ನು ಬರೆಯಬೇಕು.

Tips for Kannada Essay Writing / ಉತ್ತಮ ಪ್ರಬಂಧಕ್ಕೆ ಸಲಹೆಗಳು

ಪ್ರಬಂಧ ಬರೆಯುತ್ತಿರುವಾಗ ಒಂದು ವೇಳೆ ತಪ್ಪಾದರೆ ಅತಿಯಾದ ಗೀಟುಗಳನ್ನು ಹಾಕಬಾರದು ಕೇವಲ ಒಂದು ಅಡ್ಡಗೆರೆಯನ್ನು ಹಾಕಬಹುದು. ನೆನಪಿಡಿ ತಪ್ಪುಗಳ ಸಹಜ ಆದರೆ ಆ ತಪ್ಪನ್ನು ಮುಚ್ಚಲು ನಿಮ್ಮ ಪತ್ರಿಕೆಯನ್ನು ಹಾಳು ಮಾಡಬಾರದು. ಇದರಿಂದ ಮೌಲ್ಯಮಾಪಕರಿಗೆ ಕಿರಿಕಿರಿಯಾಗಿ, ಅವರ ಮೇಲೆ ಪ್ರಭಾವ ಬೀರಬಹುದು.

ಪ್ರಬಂಧವನ್ನು ಯಾವುದೇ ಒಂದು ನಿರ್ದಿಷ್ಟ ಪುಸ್ತಕವನ್ನು ನೋಡಿ ಅದರಲ್ಲಿರುವ ವಿಷಯವನ್ನು ಕಂಠಪಾಠ ಮಾಡಿ ಇರುವಂತೆಯೆ ಬರೆಯಬಾರದು. ಆ ವಿಷಯವನ್ನು ಅರ್ಥೈಸಿಕೊಂಡು ನಿಮ್ಮ ಪದಗಳಲ್ಲಿಅದನ್ನು ಮಂಡಿಸಿರಿ. ಪ್ರಬಂಧ ಎನ್ನುವುದು ಒಂದು ವಿಷಯವನ್ನು ನಾವೆಷ್ಟು ಸರಿಯಾಗಿ ತಿಳಿದುಕೊಂಡಿದ್ದೇವೆ ಎನ್ನುವುದನ್ನು ಪರೀಕ್ಷಿಸುವುದಾಗಿದೆ.

ಯಾವ ವಿಭಾಗಕ್ಕೆ ಎಷ್ಟು ಸಮಯವನ್ನು ನಿಗದಿಪಡಿಸಬೇಕು ಹಾಗೂ ಎಷ್ಟು ಸಮಯದಲ್ಲಿನಾವು ನಮ್ಮ ಪತ್ರಿಕೆಯನ್ನು ಪೂರ್ಣಗೊಳಿಸಬೇಕು ಎಂಬುವುದನ್ನು ಪೂರ್ವ ನಿಗದಿಪಡಿಸಿಕೊಳ್ಳುವುದು.

ಪ್ರಬಂಧದಲ್ಲಿಧಾರ್ಮಿಕ ಚಿಹ್ನೆಗಳನ್ನು, ದೇವರ ಚಿತ್ರಗಳನ್ನು ಅಥವಾ ವಿವಾದಿತ ಸಂಕೇತಗಳನ್ನು ಬಳಸಬಾರದು. ಉದಾ: ಶ್ರೀಗಣೇಶಾಯ ನಮಃ, ಓಂ ನಮಃ ಶಿವಾಯ ಸ್ವಸ್ತಿಕ್‌, ಸಿಲುಬೆ ಇತ್ಯಾದಿಗಳನ್ನು ಪತ್ರಿಕೆಯಲ್ಲಿಬರೆಯಬಾರದು.

ಪ್ರಬಂಧಕ್ಕೆ ಅಂದ ಹೆಚ್ಚಲು ಗಾದೆ ಮಾತುಗಳನ್ನು ಸೂಕ್ತಿಗಳನ್ನು, ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳನ್ನು ಬಳಸಿ. ಆದರೆ ಸೂಕ್ತಿ ಅಥವಾ ಗಾದೆ ಮಾತುಗಳೆ ನಿಮ್ಮ ಪ್ರಬಂಧವನ್ನು ಆವರಿಸದಂತೆ ಎಚ್ಚರಿಕೆವಹಿಸಿ.

ನಕ್ಷೆಗಳನ್ನು ಅವಶ್ಯಕತೆಗೆ ಅನುಗುಣವಾಗಿ ಪ್ರಬಂಧದಲ್ಲಿ ಬಳಸಬಹುದು. ಉದಾ : ಫೀಶ್‌ ಬೋನ್‌ ಚಾರ್ಟ್‌ ನದಿಯ ಹರಿಯುವಿಕೆ, ಅಂತರಾಷ್ಟ್ರೀಯ ಗಡಿ ಸಮಸ್ಯೆ ಇತ್ಯಾದಿ ಸಂದರ್ಭದಲ್ಲಿನಕ್ಷೆಗಳನ್ನು ಬಳಸುವುದು ಉತ್ತಮ. ಅವಶ್ಯಕತೆಗೆ ಅನುಗುಣವಾಗಿ ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳನ್ನು ಬಳಸಿದರೆ ಅದು ನಿಮ್ಮ ಪ್ರಬಂಧಕ್ಕೆ ಮೌಲ್ಯ ಕೊಡುತ್ತದೆ.

Reference: Essay topics for practice | Kannada State Police Exam Essays for Download

ಪ್ರಬಂಧ ಉದಾಹರಣೆಗಳು / Kannada Essays for Reference