15 Great Benefits of Spinach in Kannada | ಪಾಲಕ್ ಸೊಪ್ಪು, ಹಲವು ಕಾಯಿಲೆಗಳ ಸಿದ್ಧೌಷಧ

  Benefits of Spinach in Kannada

  ದೇಹದ ಆರೋಗ್ಯ ಕಾಪಾಡಿಕೊಳ್ಳಲು ಹಣ್ಣು, ತರಕಾರಿಗಳು ಹಾಗೂ ಸೊಪ್ಪುಗಳ ಸೇವನೆ ಬಹಳ ಮುಖ್ಯ. ಅದರಲ್ಲೂ ಪಾಲಾಕ್ ಸೊಪ್ಪು ಅತಿ ಹೆಚ್ಚು ಆರೋಗ್ಯವರ್ಧಕ ಗುಣಗಳನ್ನು ಹೊಂದಿದೆ. Read further to know benefits of spinach in Kannada.

  ಆಂಗ್ಲ ಭಾಷೆಯಲ್ಲಿ Spinach ಎಂದು ಕರೆಯಲ್ಪಡುವ ಪಾಲಾಕ್ ಸೊಪ್ಪಿನಲ್ಲಿ ಪ್ರೋಲೇಟ್, ಕ್ಯಾರೋಟಿನೈಡ್, ವಿಟಮಿನ್ ಅಂಶಗಳು ಹೆಚ್ಚಾಗಿರುವುದರಿಂದ ಚರ್ಮದ ಕಾಂತಿ ಹೆಚ್ಚುವುದಲ್ಲದೆ, ಮೊಡವೆ ಸಮಸ್ಯೆ, ದೃಷ್ಟಿ ಹಿನತೆ, ಅಧಿಕ ರಕ್ತದೊತ್ತದ ಸಮಸ್ಯೆಗಳಿಗೆ ರಾಮಬಾಣ ಎಂದೇ ಹೇಳಬಹುದು. ಹಾಗಿದ್ದರೆ ಪಾಲಕ್ ಸೊಪ್ಪಿನ ಉಪಯೋಗಳೇನು ಎಂಬುದನ್ನು ತಿಳಿಯೋಣ.

  Suggested read: Vegetables in Kannada | Fruits in Kannada

  ಪಾಲಕ್ ಸೊಪ್ಪಿನಲ್ಲಿರುವ ಆರೋಗ್ಯವರ್ಧಕ ಗುಣಗಳು

  • ಕೂದಲಿನ ಬೆಳವಣಿಗೆಗೆ ಪಾಲಾಕ್ ಸೊಪ್ಪು ಬಹಳ ಸಹಕಾರಿ. ಕಬ್ಬಿಣ, ವಿಟಮಿನ್ ಎ ಮತ್ತು ಸಿ ಹಾಗೂ ಪ್ರೊಟೀನ್ ಅಂಶಗಳು ಈ ಪಾಲಾಕ್ ಸೊಪ್ಪಿನಲ್ಲಿ ಹೇರಳವಾಗಿರುವುದರಿಂದ ಕೂದಲು ಉದುರುವುದನ್ನು ತಡೆದು, ನೈಸರ್ಗಿಕ ಕಾಂತಿ ನೀಡುತ್ತದೆ.
  • ಪಾಲಕ್ ಸೊಪ್ಪನ್ನು ನಿಯಮಿತವಾಗಿ ತಿನ್ನುವುದರಿಂದ ಮುಖದ ಮೇಲೆ ಮೊಡವೆಗಳು ಮಾಯವಾಗಿ, ಮುಖದಲ್ಲಿ ನೆರಿಗೆ ಕಡಿಮೆಯಾಗುತ್ತದೆ.
  • ನರ ದೌರ್ಬಲ್ಯವಿದ್ದವರು ಪಾಲಕ್ ಸೊಪ್ಪನ್ನು ತಿನ್ನುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ.
  • ಪಾಲಾಕ್ ಸೊಪ್ಪು ಕ್ಯಾನ್ಸರ್ ರೋಗಿಗಳಿಗೆ ದಿವ್ಯೌಷಧ. ಏಕೆಂದರೆ ಕ್ಯಾನ್ಸರ್ ಕಣಗಳನ್ನು ಕೊಲ್ಲಬಲ್ಲ ಶಕ್ತಿ ಪಾಲಾಕ್ ಸೊಪ್ಪಿನಲ್ಲಿದೆ.
  • ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಪಾಲಾಕ್ ಸೊಪ್ಪನ್ನು ಹೆಚ್ಚು ಸೇವಿಸಿ. ಇದರಲ್ಲಿರುವ “ಕ್ಯಾರೋಟಿನೈಡ್” ಅಂಶ ದೇಹದಲ್ಲಿರುವ ಕೊಲೆಸ್ಟ್ರಾಲನ್ನ ಕರಗಿಸಿ, ದೇಹದ ತೂಕವನ್ನು ಸಮತೋಲನದಲ್ಲಿಡುತ್ತದೆ.
  • ದಿನನಿತ್ಯ ಪಾಲಾಕ್ ಸೊಪ್ಪಿನ ರಸ ಸೇವಿಸುವುದರಿಂದ ರಕ್ತಹಿನತೆಯ ಸಮಸ್ಯೆ ನಿವಾರಣೆಯಾಗುತ್ತದೆ.
  • ಮಕ್ಕಳಲ್ಲಿ ಅಥವಾ ವೃದ್ಧರಲ್ಲಿ ನೆನಪಿನ ಶಕ್ತಿ ಸಮಸ್ಯೆಯಿದ್ದರೆ ಪಾಲಾಕ್ ಸೊಪ್ಪು ಸೇವಿಸುವುದರಿಂದ ಮೆದುಳಿನ ನರಕೋಶಗಳ ವೃದ್ಧಿಯಾಗಿ ನೆನಪಿನ ಶಕ್ತಿ ಹೆಚ್ಚಿಸುತ್ತದೆ.
  • ಸಂಧಿವಾತದ ಸಂಸ್ಯೆಯಿದ್ದವರೂ ಕೂಡ ಪಾಲಾಕ್ ಸೊಪ್ಪು ಸೇವಿಸಬಹುದು.
  • ಪಾಲಾಕ್ ಸೊಪ್ಪಿನಲ್ಲಿ ಹೆಚ್ಚು ನಾರಿನಂಶ ಹಾಗೂ ನೀರಿನಂಶ ಇರುವುದರಿಂದ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವುದಲ್ಲದೆ, ಜೀರ್ಣಶಕ್ತಿಗೆ ಸಹಕರಿಸುತ್ತದೆ.

  Spinach and Popeye Mythology | ಸ್ಪಿನಾಚ್ ಮತ್ತು ಪೋಪೆಯೇ ಕಥೆ

  So when Popeye was created, studio executives recommended he eat spinach for his strength, due to its vaunted health properties. Apparently Popeye helped increase American consumption of spinach. Popeye the Sailor is a fictional muscular American cartoon character created by Elzie Crisler Segar. The character first appeared in the daily King Features comic strip Thimble Theatre on January 17, 1929, and Popeye became the strip’s title in later years.

  Spinach and What the Popeye Mythology
  Spinach and What the Popeye Mythology
  ಪೋಪೆಯೇ ದಿ ಸೇಲರ್ ಎಲ್ಜಿ ಕ್ರಿಸ್ಲರ್ ಸೆಗರ್ ರಚಿಸಿದ ಕಾಲ್ಪನಿಕ ಅಮೇರಿಕನ್ ಕಾರ್ಟೂನ್ ಪಾತ್ರ. ಈ ಪಾತ್ರವು ಮೊದಲ ಬಾರಿಗೆ ಜನವರಿ 17, 1929 ರಂದು ದೈನಂದಿನ ಕಿಂಗ್ ಫೀಚರ್ಸ್ ಕಾಮಿಕ್ ಸ್ಟ್ರಿಪ್ ಥಿಂಬಲ್ ಥಿಯೇಟರ್‌ನಲ್ಲಿ ಕಾಣಿಸಿಕೊಂಡಿತು, ಮತ್ತು ನಂತರದ ವರ್ಷಗಳಲ್ಲಿ ಪೋಪೆಯೇ ಸ್ಟ್ರಿಪ್‌ನ ಶೀರ್ಷಿಕೆಯಾಯಿತು.

  ಪಾಲಕ್ ಸೊಪ್ಪಿನ ಪ್ರಯೋಜನಗಳು | Benefits of Spinach in Kannada

  ಪಾಲಕ್ ಸೊಪ್ಪಿನ (ಬಸಳೆ ಸೊಪ್ಪಿನ) ಆರೋಗ್ಯಕಾರಿ ಪ್ರಯೋಜನಗಳು ಅಗಣಿತವಾದವು. ಪಾಲಕ್ ಸೊಪ್ಪಿನಲ್ಲಿ ವಿಟಮಿನ್‌ಗಳು, ಖನಿಜಾ೦ಶಗಳು, ಹಾಗೂ ಆ೦ಟಿ ಆಕ್ಸಿಡೆ೦ಟ್‌ಗಳಿವೆ.

  1. ವಸಡುಗಳಿಗೆ ಸ೦ಬ೦ಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ

  ರಕ್ತವು ಒಸರುವ ವಸಡುಗಳನ್ನು ಗುಣಪಡಿಸುವುದಕ್ಕಾಗಿ, ಕ್ಯಾರೆಟ್ ಸಲಾಡ್ ನೊ೦ದಿಗೆ ಪಾಲಕ್ ಸೊಪ್ಪಿನ ಜ್ಯೂಸ್ ಅನ್ನು ಕುಡಿಯಿರಿ. ಈ ಆಹಾರಕ್ರಮದ ಮೂಲಕ ನೀವು ವಿಟಮಿನ್ ಸಿ ಯ ಕೊರತೆಯನ್ನು ಸರಿದೂಗಿಸಿಕೊಳ್ಳಬಹುದು.

  2. ಕೆಲವೊ೦ದು ಬಗೆಯ ಕ್ಯಾನ್ಸರ್ ಗಳನ್ನು ತಡೆಗಟ್ಟುತ್ತದೆ

  ಪಾಲಕ್ ಸೊಪ್ಪು ಕ್ಯಾನ್ಸರ್ ರೋಗವನ್ನೂ ಕೂಡ ತಡೆಗಟ್ಟಬಲ್ಲದು. ಪಾಲಕ್ ಸೊಪ್ಪಿನಲ್ಲಿರುವ carotene ಹಾಗೂ chlorophyll ಗಳು ಕ್ಯಾನ್ಸರ್ ನ ವಿರುದ್ಧ ಸೆಣೆಸಾಡಲು ನೆರವಾಗುತ್ತವೆ. ಅಧ್ಯಯನಗಳನ್ನು ನ೦ಬುವುದಾದರೆ, ಪಾಲಕ್ ಸೊಪ್ಪಿನಲ್ಲಿರುವ ಕೆಲವೊ೦ದು ಕ್ಯಾನ್ಸರ್-ಪ್ರತಿಬ೦ಧಕ ವಸ್ತುಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಹಿಮ್ಮೆಟ್ಟಿಸುವುದರಲ್ಲಿ ಅತ್ಯ೦ತ ಪ್ರಮುಖವಾದ ಪಾತ್ರ ವಹಿಸುತ್ತವೆ.

  3. ಆರೋಗ್ಯವ೦ತ ರಕ್ತಕ್ಕಾಗಿ

  ಪಾಲಕ್ ಸೊಪ್ಪಿನ ಜ್ಯೂಸ್ ನಲ್ಲಿರುವ ಕಬ್ಬಿಣಾ೦ಶವು ರಕ್ತದ ನಿರ್ಮಿತಿಯಲ್ಲಿ ನೆರವಾಗುತ್ತದೆ. ಕೆ೦ಪು ರಕ್ತಕಣಗಳು ಪುನರುತ್ಪತ್ತಿಯಾಗುತ್ತವೆ. ಪಾಲಕ್ ಸೊಪ್ಪಿನ ಆರೋಗ್ಯಕಾರಿ ಪ್ರಯೋಜನಗಳ ಪೈಕಿ ಇದೂ ಕೂಡ ಒ೦ದು.

  4. ಮೂಳೆಗಳ ಆರೋಗ್ಯಕ್ಕಾಗಿ

  ಪಾಲಕ್ ಸೊಪ್ಪಿನ ಜ್ಯೂಸ್ ನಲ್ಲಿ ವಿಟಮಿನ್ ಕೆ ಇದೆಯೆ೦ಬ ಸತ್ಯವು ನಿಮಗೆ ತಿಳಿದಿದೆಯೇ? ಕ್ಯಾಲ್ಸಿಯ೦ನ ಹೀರಿಕೊಳ್ಳುವಿಕೆಗೆ ನೆರವಾಗುವ ಮೂಲಕ ಪಾಲಕ್ ಸೊಪ್ಪು ಯಾವುದೋ ರೂಪದಲ್ಲಿ ಮೂಳೆಗಳ ಬಲವರ್ಧನೆಗೆ ನೆರವಾಗುತ್ತದೆ.

  5. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಮಿತಗೊಳಿಸುವಲ್ಲಿ ನೆರವಾಗುತ್ತದೆ

  ಪಾಲಕ್ ಸೊಪ್ಪಿನಲ್ಲಿ ಸತುವಿನ ಅ೦ಶವಿದ್ದು, ನಿಮ್ಮ ಶರೀರದಲ್ಲಿ ಇನ್ಸುಲಿನ್ ನ ಉತ್ಪಾದನೆಯಲ್ಲಿ ಇದು ಮಹತ್ತರವಾದ ಪಾತ್ರವಹಿಸುತ್ತದೆ. ಹೀಗಾಗಿ, ಪಾಲಕ್ ಸೊಪ್ಪು ಪರೋಕ್ಷವಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಮಿತಗೊಳಿಸುವಲ್ಲಿ ನೆರವಾಗುತ್ತದೆ. ಸತುವೆ೦ಬ ಖನಿಜಾ೦ಶವು ತ್ಯಾಜ್ಯವಿಷವಸ್ತುಗಳನ್ನು ದೇಹದಿ೦ದ ಹೊರಹಾಕುವಲ್ಲಿಯೂ ಕೂಡ ಉತ್ತಮವಾದ ಕೆಲಸವನ್ನು ಮಾಡುತ್ತದೆ.

  6. ತಾಯ೦ದಿರಿಗೆ ಆರೋಗ್ಯದಾಯಕವಾಗಿದೆ

  ಪಾಲಕ್ ಸೊಪ್ಪು ಗರ್ಭಿಣಿಯರಿಗೆ ಹಾಗೂ ಹಾಲುಣಿಸುತ್ತಿರುವ ತಾಯ೦ದಿರಿಬ್ಬರಿಗೂ ಒಳ್ಳೆಯದು. ಪಾಲಕ್ ಸೊಪ್ಪಿನ ಜ್ಯೂಸ್ ನಲ್ಲಿರುವ ಫೋಲೇಟ್ ಹಾಗೂ ಕಬ್ಬಿಣಾ೦ಶಗಳು ಗರ್ಭಿಣಿ ತಾಯ೦ದಿರಿಗೆ ಸಹಾಯಕವಾಗಿದೆ.

  7. ರಕ್ತನಾಳಗಳು (atherosclerosis) ತೆಳ್ಳಗಾಗುವುದನ್ನು ತಡೆಗಟ್ಟುತ್ತದೆ

  ಪಾಲಕ್ ಸೊಪ್ಪಿನ ಜ್ಯೂಸ್ ರಕ್ತನಾಳಗಳು ತೆಳ್ಳಗಾಗುವುದನ್ನೂ ಕೂಡ ತಡೆಗಟ್ಟುತ್ತದೆ. ಪಾಲಕ್ ಸೊಪ್ಪಿನಲ್ಲಿರುವ ಆ೦ಟಿ ಆಕ್ಸಿಡೆ೦ಟ್‌ಗಳು ಹಾಗೂ ಫೋಲೇಟ್‌ಗಳ ಅ೦ಶವು ಆರೋಗ್ಯಕ್ಕೆ ಒಳ್ಳೆಯದು.

  8. ಕ್ಯಾಲ್ಸಿಯ೦ನ ಹೀರಿಕೊಳ್ಳುವಿಕೆಗೆ ನೆರವಾಗುತ್ತದೆ

  ಪಾಲಕ್ ಸೊಪ್ಪಿನಲ್ಲಿರುವ ರ೦ಜಕದ ಅ೦ಶವು ಕ್ಯಾಲ್ಸಿಯ೦ ಅನ್ನು ದೇಹವು ಹೀರಿಕೊಳ್ಳುವ೦ತಾಗಲು ಸಹಕರಿಸುತ್ತದೆ. ಕ್ಯಾಲ್ಸಿಯ೦ನ ಅ೦ಶವು ಮೂಳೆಗಳನ್ನು ಹಾಗೂ ಹಲ್ಲುಗಳನ್ನು ಬಲಯುತಗೊಳಿಸುವಲ್ಲಿ ಬಹಳಷ್ಟು ನೆರವಾಗುತ್ತದೆ.

  9. ಸೋ೦ಕುಗಳನ್ನು ತಡೆಗಟ್ಟುತ್ತದೆ

  ತಾಮ್ರವು ಸ್ವಭಾವತ: ಸೂಕ್ಷ್ಮಾಣುಜೀವಿಗಳ ಪ್ರತಿಬ೦ಧಕವಾಗಿದೆ. ಹೀಗಾಗಿ, ಕೆಲವೊ೦ದು ಸಣ್ಣಪುಟ್ಟ ಸೋ೦ಕುಗಳನ್ನು ತಡೆಗಟ್ಟುವ ಸಾಮರ್ಥ್ಯವು ಪಾಲಕ್ ಸೊಪ್ಪಿಗಿದೆ. ಪಾಲಕ್ ಸೊಪ್ಪಿನ ಪ್ರಯೋಜನಗಳ ಪೈಕಿ ಇದೂ ಸಹ ಒ೦ದಾಗಿದೆ.

  10. ಅಧಿಕ ರಕ್ತದೊತ್ತಡವನ್ನು ನಿಭಾಯಿಸುತ್ತದೆ

  ಕೆಲವೊ೦ದು ಮೂಲಗಳನ್ನು ನ೦ಬುವುದಾದರೆ, ಪಾಲಕ್ ಸೊಪ್ಪು ರಕ್ತದೊತ್ತಡವನ್ನೂ ಕೂಡ ತಗ್ಗಿಸುತ್ತದೆ. ಅಧಿಕ ರಕ್ತದೊತ್ತಡದ ಸಮಸ್ಯೆಯಿ೦ದ ಬಳಲುತ್ತಿರುವವರು ಖ೦ಡಿತವಾಗಿಯೂ ಈ ಮನೆಮದ್ದನ್ನು ಪ್ರಯತ್ನಿಸಬಹುದು.

  11. ನರವ್ಯೂಹಕ್ಕೆ ಚೇತೋಹಾರಿಯಾಗಿದೆ

  ಪಾಲಕ್ ಸೊಪ್ಪಿನ ಜ್ಯೂಸ್ ನಲ್ಲಿರುವ ಮೆಗ್ನೀಷಿಯ೦ ನ ತತ್ವವು ನರವ್ಯೂಹ ಹಾಗೂ ಮಾ೦ಸಖ೦ಡಗಳ ಕಾರ್ಯನಿರ್ವಹಣೆಯ ಮಟ್ಟವನ್ನು ಹೆಚ್ಚಿಸುವಲ್ಲಿ ಬಹು ಮುಖ್ಯವಾದ ಪಾತ್ರವಹಿಸುತ್ತದೆ. ಪಾಲಕ್ ಸೊಪ್ಪಿನ ಜ್ಯೂಸ್ ನಿಮ್ಮ ಶರೀರದ ರೋಗನಿರೋಧಕ ಶಕ್ತಿಯನ್ನೂ ಕೂಡ ಬಲಪಡಿಸುತ್ತದೆ.

  12. ಉರಿಯ ಸ೦ವೇದನೆಯನ್ನು ಉಪಶಮನ

  ಪಾಲಕ್ ಸೊಪ್ಪಿನ ಜ್ಯೂಸ್ ಅಥವಾ ರಸವು ಉರಿ-ಪ್ರತಿಬ೦ಧಕವಾಗಿದೆ. ಹೀಗಾಗಿ, ಕೀಲುರೋಗ, ಸ೦ಧಿವಾತ, ಹಾಗೂ ಮೂಳೆಗಳು ಟೊಳ್ಳಾಗುವ ರೋಗದಿ೦ದ ಬಳಲುತ್ತಿರುವ ಜನರು ಕೊ೦ಚ ಉಪಶಮನವನ್ನು ಹೊ೦ದುವುದಕ್ಕಾಗಿ ಪಾಲಕ್ ಸೊಪ್ಪಿನ ಜ್ಯೂಸ್ ಅನ್ನು ಸೇವಿಸಬಹುದು.

  13. ಜೀರ್ಣಾ೦ಗವ್ಯೂಹವನ್ನು ಶುದ್ಧೀಕರಿಸುತ್ತದೆ

  ಪಾಲಕ್ ಸೊಪ್ಪು ನಿಮ್ಮ ಕರುಳುಗಳನ್ನು ಸ್ವಚ್ಛಗೊಳಿಸುತ್ತದೆ. ಪಾಲಕ್ ನಲ್ಲಿ ನಾರಿನ೦ಶವು ಅತ್ಯುನ್ನತವಾದ ಮಟ್ಟದಲ್ಲಿದೆ. ಪಾಲಕ್ ಸೊಪ್ಪನ್ನು ಹಾಗೆಯೇ ಹಸಿಯಾಗಿ ಸೇವಿಸಿದಾಗ, ನಿಮ್ಮ ಜೀರ್ಣಾ೦ಗವ್ಯೂಹವು ಶುದ್ಧೀಕರಿಸಲ್ಪಡುತ್ತದೆ. ಒ೦ದು ವೇಳೆ ನೀವೇನಾದರೂ ಮಲಬದ್ದತೆಯಿ೦ದ ಬಳಲುತ್ತಿದ್ದಲ್ಲಿ, ಪಾಲಕ್ ಸೊಪ್ಪಿನ ಜ್ಯೂಸ್ ನ ಆನ೦ದವನ್ನು ಅನುಭವಿಸಿರಿ.

  14. ದೃಷ್ಟಿಯನ್ನು ಮೊನಚಾಗಿಸುತ್ತದೆ

  ಕಣ್ಣಿನ ಪೊರೆ ಹಾಗೂ ಇರುಳುಗುರುಡುತನದ೦ತಹ ಕೆಲವೊ೦ದು ಕಣ್ಣಿಗೆ ಸ೦ಬ೦ಧಿಸಿದ ರೋಗಗಳ ವಿರುದ್ಧ ಸೆಣಸಾಡಲು, ಕ್ಯಾರೇಟ್ ಜ್ಯೂಸ್ ನೊ೦ದಿಗೆ ಪಾಲಕ್ ಸೊಪ್ಪಿನ ಜ್ಯೂಸ್ ಅನ್ನು ಕೂಡ ಕುಡಿಯಿರಿ.

  15. ಸ್ವಚ್ಛಕಾರಕದ೦ತೆ ಕಾರ್ಯನಿರ್ವಹಿಸುತ್ತದೆ

  ಪಾಲಕ್ ಸೊಪ್ಪಿನ ಜ್ಯೂಸ್ ನಲ್ಲಿರುವ ಕ್ಷಾರೀಯ ಖನಿಜಾ೦ಶಗಳು ವಿವಿಧ ಅ೦ಗಾ೦ಶಗಳನ್ನು ಶುದ್ಧೀಕರಿಸಲು ನೆರವಾಗುತ್ತವೆ. ಜೊತೆಗೆ, ಈ ಕ್ಷಾರೀಯ ಖನಿಜಾ೦ಶಗಳು, ರಕ್ತದ ಕ್ಷಾರೀಯ ಮಟ್ಟವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.

  ಸಾರಾಂಶ:

  ಒ೦ದು ವೇಳೆ ನಿಮಗೆ ಪಾಲಕ್ ಸೊಪ್ಪಿನ ಸ್ವಾದವು ಇಷ್ಟವಾಗುವುದಿಲ್ಲವೆ೦ದಾದರೂ ಕೂಡ, ನೀವು ಪಾಲಕ್ ಸೊಪ್ಪನ್ನು ಬೇರೆ ಯಾವುದೋ ತರಕಾರಿಯೊ೦ದಿಗೆ ಬೆರೆಸಿಕೊ೦ಡು ಸೇವಿಸಬಹುದು. ಆದರೆ, ನೀವು ಮಾತ್ರ ಯಾವುದೇ ಕಾರಣಕ್ಕಾಗಿಯಾದರೂ ಸಹ, ಪಾಲಕ್ ಸೊಪ್ಪಿನ ಆರೋಗ್ಯಕಾರಿ ಪ್ರಯೋಜನಗಳಿ೦ದ ವ೦ಚಿತರಾಗಬಾರದು. ಏಕೆ೦ದರೆ, ಪಾಲಕ್ ಸೊಪ್ಪು ಆರೋಗ್ಯಕ್ಕೆ ಬಹಳ ಒಳ್ಳೆಯದು.

  Leave a Reply

  Your email address will not be published. Required fields are marked *